Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಮ್ಮೀ... ಈ ಮೆಂತೆ ಚಿಕನ್ ಗ್ರೇವಿ
ಇವತ್ತು ಚಿಕನ್ ನಿಂದ ಸ್ಪೆಷಲ್ ಅಡುಗೆ ಮಾಡಬಯಸುವುದಾದರೆ ಈ ಅಡುಗೆ ಟ್ರೈ ಮಾಡಿ. ಮೆಂತೆ ಸೊಪ್ಪು ಹಾಕಿ ಮಾಡುವ ಈ ಚಿಕನ್ ಗ್ರೇವಿ ಅನ್ನ ಅಥವಾ ಚಪಾತಿಗೆ ಬೆಸ್ಟ್.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
* 1 ಕೆಜಿ ಚಿಕನ್ 2 ಕಟ್ಟು ಮೆಂತೆ ಸೊಪ್ಪು
* 2 ಈರುಳ್ಳಿ (ಕತ್ತರಿಸಿದ್ದು)
* 3 ಹಸಿ ಮೆಣಸಿನಕಾಯಿ(ಪೇಸ್ಟ್ ಮಾಡಿ)
* 3/4 ಚಮಚ ಶುಂಠಿ ಪೇಸ್ಟ್
* 1 ಟೊಮೆಟೊ(ಪೇಸ್ಟ್ ಮಾಡಿದ್ದು)
* 1/4 ಕಪ್ ಮೊಸರು
* ಅರ್ಧ ಚಮಚ ಅರಿಶಿಣ ಪುಡಿ
* 1 ಚಮಚ ಕೊತ್ತಂಬರಿ ಪುಡಿ
* ಅರ್ಧ ಚಮಚ ಜೀರಿಗೆ ಪುಡಿ
* ಗರಂ ಮಸಾಲ 1 ಚಮಚ
* ರುಚಿಗೆ ತಕ್ಕ ಉಪ್ಪು
* ಗೋಡಂಬಿ(8-10)
* ಎಣ್ಣೆ
ಮಾಡುವ ವಿಧಾನ:
* ಮೆಂತೆ ಸೊಪ್ಪನ್ನು ಶುಚಿ ಮಾಡಿ, ಅದಕ್ಕೆ ಸ್ವಲ್ಪ ನೀರು, ಸಕ್ಕರೆ, ಉಪ್ಪು ಹಾಕಿ ಮಿಕ್ಸ್ ಮಾಡಿ 15 ನಿಮಿಷ ಇಟ್ಟು ಸೊಪ್ಪಿನಿಂದ ನೀರನ್ನು ಸೋಸಿ.
* ಈಗ ಚಿಕನ್ ಅನ್ನು ಸಾಧಾರಣ ಗಾತ್ರಕ್ಕೆ ಕತ್ತರಿಸಿ.
* ಈಗ ಪಾತ್ರೆಗೆ ಅರ್ಧ ಚಮಚ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದ ಬಳಿಕ ಅದನ್ನು ಮೊಸರಿನ ಜೊತೆ ಹಾಕಿ ಪೇಸ್ಟ್ ಮಾಡಿ ಇಡಿ.
* ಈಗ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ ಹಾಕಿ 2 ನಿಮಿಷ ಹುರಿದು, ನಂತರ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಮತ್ತು ಕೊತ್ತಂಬರಿ ಪುಡಿ ಹಾಕಿ ಮಿಕ್ಸ್ ಮಾಡಿ.
* ಈಗ ಟೊಮೆಟೊ ಪೇಸ್ಟ್ ಹಾಕಿ 3 ನಿಮಿಷ ಹುರಿದು, ಈಗ ಮೊಸರು ಜೊತೆ ರುಬ್ಬಿದ ಈರುಳ್ಳಿ ಪೇಸ್ಟ್, ಈಗ ಶುಚಿ ಮಾಡಿದ ಚಿಕನ್ ಹಾಕಿ, ರುಚಿಗೆ ತಕ್ಕ ಉಪ್ಪು ಮಿಕ್ಸ್ ಮಾಡಿ, ಉರಿ ಜಾಸ್ತಿ ಮಾಡಿ 5 ನಿಮಿಷ ಬೇಯಿಸಿದ ಬಳಿಕ, ಉರಿಯನ್ನು ಮೀಡಿಯಂನಲ್ಲಿಟ್ಟು ಚಿಕನ್ ಮುಕ್ಕಾಲು ಭಾಗ ಬೇಯುವವರೆಗೆ ಬೇಯಿಸಿ.
* ಈಗ ಗೋಡಂಬಿ ಪೇಸ್ಟ್, ಗರಂ ಮಸಾಲ ಪುಡಿ, ಕತ್ತರಿಸಿದ ಮೆಂತೆ ಸೊಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಕಾಲು ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿ, ಗ್ರೇವಿ ರೀತಿಯಾದ ಮೇಲೆ ಉರಿಯಿಂದ ಇಳಿಸಿದರೆ ಮೆಂತೆ ಸೊಪ್ಪಿನ ಚಿಕನ್ ರೆಡಿ.



Click it and Unblock the Notifications
