Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಯಾದ ಕೇರಳ ಫಿಶ್ ಕರಿ ಮೀನ್ ಮೌಲಿ!
ಕೇರಳದ ತೀರಗಳಲ್ಲಿ ಮೀನ್ ಮೌಲಿ ಅಥವಾ ಫಿಶ್ ಕರಿ ತುಂಬಾ ಹೆಸರುವಾಸಿ. ಇಲ್ಲಿ ಮೀನ್ ಎಂದರೆ ಮೀನು ಮತ್ತು ಕರಿ ಅಂದರೆ ಪದಾರ್ಥವಾಗಿದೆ. ತೆಂಗಿನ ಕಾಯಿಯನ್ನು ಬಳಸಿ ಈ ಯಮ್ಮೀ ಮೀನು ಕರಿಯನ್ನು ತಯಾರಿಸಲಾಗುತ್ತದೆ. ಇದು ತುಂಬಾ ಟೇಸ್ಟಿಯಾಗಿದ್ದು ಖಂಡಿತ ನಿಮಗೆ ಮೀನು ಕರಿಯ ಸ್ವಾದವನ್ನು ಉಣಬಡಿಸುತ್ತದೆ.
ಈ ಮೀನು ಕರಿಗೆ ನೀವು ಬಳಸಬೇಕಾಗಿರುವ ಸೋಲೆ ಅಥವಾ ಕಿಂಗ್‌ಫಿಶ್ ಆಗಿದೆ. ಎಲ್ಲಾ ಮೀನು ಪ್ರಿಯರಿಗೆ ಈ ಫಿಶ್ ಕರಿ ಒಳ್ಳೆಯ ರಸದೌತಣವಾಗಲಿದೆ. ಈ ಮೀನು ಕರಿ ಬೇರೆ ಮೀನು ಪದಾರ್ಥಕ್ಕಿಂತ ಭಿನ್ನವಾಗಿದ್ದು ನಿಮ್ಮ ಬಾಯಿ ರುಚಿಯನ್ನು ತಣಿಸುತ್ತದೆ.

ಹಾಗಿದ್ದರೆ ಈ ಸೊಗಸಾದ ಮೀನು ಮೌಲಿಯನ್ನು ಸಿದ್ಧಪಡಿಸಲು ಯಾಕೆ ಆಲೋಚಿಸುತ್ತಿದ್ದೀರಾ ಇಂದಿನ ಲೇಖನದಲ್ಲಿ ಇದರ ತಯಾರಿ ಕ್ರಮವನ್ನು ಬಿಟ್ಟೂ ಬಿಡದೆ ನಾವಿಲ್ಲಿ ನೀಡಿದ್ದು ಖಂಡಿತ ಇದು ನಿಮಗೆ ಮೆಚ್ಚುಗೆಯಾಗುತ್ತದೆ.
ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ
ಪ್ರಮಾಣ: 4
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
*ಮೀನು - 4
*ಈರುಳ್ಳಿ - 1 (ಮಧ್ಯಮ ಗಾತ್ರದ್ದು, ಹೆಚ್ಚಿದ್ದು)
*ಹಸಿಮೆಣಸು - 2 (ಸೀಳಿದ್ದು)
*ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
*ಪೆಪ್ಪರ್ ಪೌಡರ್ - 1 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ತೆಂಗಿನ ಕಾಯಿ ಹಾಲು - 1 ಕಪ್
*ಕರಿಬೇವಿನೆಲೆ - 10
*ಸಾಸಿವೆ ಬೀಜಗಳು - 1 ಸ್ಪೂನ್
*ಅರಶಿನ ಹುಡಿ - 1/2 ಸ್ಪೂನ್
*ಲಿಂಬೆ ರಸ - 1 ಸ್ಪೂನ್
*ಎಣ್ಣೆ - 1 ಸ್ಪೂನ್
*ಕೊತ್ತಂಬರಿ ಎಲೆಗಳು - 2 ಸ್ಪೂನ್ (ಕತ್ತರಿಸಿದ್ದು)
ಯಮ್ಮೀ ಚೈನೀಸ್ ಸ್ಟಿರ್ ಫ್ರೈಡ್ ಚಿಕನ್ ಲೆಗ್ಸ್
ಮಾಡುವ ವಿಧಾನ:
1. ಮೀನಿನ ತುಂಡುಗಳನ್ನು ಲಿಂಬೆ ರಸ, ಉಪ್ಪು ಮತ್ತು ಶುಂಠಿ - ಬೆಳ್ಳುಳ್ಳಿ ಪೇಸ್ಟ್‌ನಲ್ಲಿ 30 ನಿಮಿಷಗಳ ಕಾಲ ಮುಳುಗಿಸಿಡಿ.
2. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ, ಕರಿಬೇವಿನೆಲೆಗಳನ್ನು ಹಾಕಿ ಮತ್ತು ಸ್ವಲ್ಪ ನಿಮಿಷ ಹುರಿಯಿರಿ.
3. ಈಗ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
4.ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಅರಶಿನ ಹುಡಿ, ಉಪ್ಪು, ತೆಂಗಿನ ಹಾಲನ್ನು ಹಾಕಿ ಚೆನ್ನಾಗಿ ಕಲಸಿ.
5.ಈಗ ಮೀನನ್ನು ಸೇರಿಸಿ ಮತ್ತು ಸಣ್ಣ ಉರಿಯಲ್ಲಿ 7-8 ನಿಮಿಷಗಳ ಕಾಲ ಬೇಯಿಸಿ.
6.ಸ್ವಲ್ಪ ನೀರು ಹಾಕಿ ಮತ್ತು ಮುಚ್ಚಳ ಮುಚ್ಚಿ ಬೇಯಿಸಿ.
7.ಒಮ್ಮೆ ಆದ ನಂತರ, ಮುಚ್ಚಳವನ್ನು ತೆಗೆಯಿರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ಮೀನ್ ಮೌಲಿ ಬಡಿಸಲು ಸಿದ್ಧವಾಗಿದೆ. ಆಪ್ಪಂನೊಂದಿಗೆ ಈ ರುಚಿಕರ ಡಿಶ್ ಅನ್ನು ಸವಿಯಿರಿ.



Click it and Unblock the Notifications
