Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರಾತ್ರಿಗೆ ಮಸಾಲೆ ಬಾಡೂಟ
ರಾತ್ರಿಗೆ ಏನಾದ್ರೂ ಸ್ಪೆಷಲ್ ಮಾಡಬೇಕು ಅಂತ ಯೋಚನೆ ಮಾಡ್ತಿದೀರಾ? ಹಾಗಿದ್ರೆ ಈವತ್ತು ನಾನ್ ವೆಜ್ ಮಾಡಿದ್ರೆ ಹೇಗೆ? ಇದನ್ನ ಮಕ್ಕಳು ಕೂಡ ಇಷ್ಟ ಪಡ್ತಾರೆ.
ಭಾರತೀಯ ಶೈಲಿಯ ಬೆಸ್ಟ್ ಮಸಾಲೆ ಕಾಂಬಿನೇಷನ್ ಇದರಲ್ಲಿ ನೀವು ರುಚಿ ನೋಡಬಹುದು. ನಾಲಿಗೆಯ ರುಚಿಯನ್ನ ತಣಿಸುವುದರೊಂದಿಗೆ ಬಾಡೂಟವನ್ನ ಇಷ್ಟಪಡುವವರಿಗೆ ಈ ಮಸಾಲೆ ಮಟನ್ ತುಂಬ ಇಷ್ಟವಾಗುತ್ತೆ.

ಮಸಾಲೆ ಮಟನ್ ಹೀಗೆ ಮಾಡಿ:
ಬೇಕಾಗುವ ಸಾಮಗ್ರಿಗಳು
1. ಮಟನ್- 750 ಗ್ರಾಂ( ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ)
2. ಎಣ್ಣೆ- 4 ಟೀಚಮಚ
3. ಏಲಕ್ಕಿ- 6
4. ಲವಂಗ- 10
3. ಬೇ ಎಲೆಗಳು- 3
4. ದಾಲ್ಚಿನ್ನಿ- 1
5. ಈರುಳ್ಳಿ- 5 (ಕತ್ತರಿಸಿಕೊಳ್ಳಿ)
6. ಬೆಳ್ಳುಳ್ಳಿ-ಶುಂಠಿ ಪೇಸ್ಟ್- 1 ಟೀಚಮಚ
7. ಮೊಸರು- 5 ಟೀಚಮಚ
8. ಅರಿಶಿಣ ಪುಡಿ- 1 ಟೀಚಮಚ
9. ಅಚ್ಚಖಾರದ ಪುಡಿ- 1 ಟೀಚಮಚ
10. ಉಪ್ಪು ರುಚಿಗೆ ತಕ್ಕಷ್ಟು
11. ಧನಿಯ ಪುಡಿ- 2 ಟೀಚಮಚ
12. ಟೊಮೊಟೊ ರಸ - 6 ಟೀಚಮಚ
13.ಹಸಿಮೆಣಸಿನ ಕಾಯಿ- 2 (ಕತ್ತರಿಸಿಕೊಳ್ಳಿ)
15. ಗರಂ ಮಸಾಲ- 1ಟೀಚಮಚ
16. ಮೆಣಸು- 1 ಟೀಚಮಚ
17. ಕೊತ್ತಂಬರಿ ಸೊಪ್ಪು- ಸ್ವಲ್ಪ
18. ಪುದೀನ- 1 ಕಟ್ಟು (ಕತ್ತರಿಸಿಕೊಳ್ಳಿ)
ಮಾಡುವ ವಿಧಾನ
1. ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಏಲಕ್ಕಿ, ಲವಂಗ, ಬೇ ಎಲೆಗಳು ಮತ್ತು ದಾಲ್ಚಿನ್ನಿಯನ್ನು ಹಾಕಿ.
2. ಇದನ್ನು ಸಣ್ಣ ಉರಿಯಲ್ಲಿ 2-3 ನಿಮಿಷಗಳವರೆಗೆ ಬಾಡಿಸಿ ನಂತರ ಅದಕ್ಕೆ ಈರುಳ್ಳಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ.
3. ಇದಕ್ಕೆ ಮಟನ್ ತುಂಡುಗಳನ್ನು ಸೇರಿಸಿ ಕಲಸಿ 5 ನಿಮಿಷಗಳವರೆಗೆ ಕಾಯಿಸಿ.
4. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 3 ನಿಮಿಷಗಳವರೆಗೆ ಕಲಸುತ್ತಿರಿ.
5. ನಂತರ ಮೊಸರು, ಅರಿಶಿಣ ಪುಡಿ, ಅಚ್ಚ ಖಾರದ ಪುಡಿ, ಉಪ್ಪು ಮತ್ತು ಧನಿಯ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ. ಬಿಡದೆ ತಿರುವಿಹಾಕುತ್ತಿರಿ.
6. 5 ನಿಮಿಷದ ನಂತರ ಟೊಮೊಟೊ ರಸ ಮತ್ತು ಹಸಿಮೆಣಸಿನಕಾಯಿಯನ್ನು ಇದಕ್ಕೆ ಸೇರಿಸಿ.
7. ಇದಕ್ಕೆ 7 ಕಪ್ ನೀರು ಹಾಕಿ ಕುದಿಯಲು ಬಿಡಿ.
8. ನಂತರ ಮುಚ್ಚಳ ಮುಚ್ಚಿ 5-6 ಬಾರಿ ಕುಕ್ಕರ್ ಕೂಗಿಸಿ.
9. ಆವಿ ಹೋದ ನಂತರ ಮುಚ್ಚುಳ ತೆರೆದು ಗರಂ ಮಸಾಲ ಪುಡಿ, ಮೆಣಸು ಮತ್ತು ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಮತ್ತು ಪುದೀನವನ್ನು ಸೇರಿಸಿ ಮಿಶ್ರ ಮಾಡಿ.
10. ಮತ್ತೆ ಉಳಿದ ನೀರು ಆವಿಯಾಗುವವರೆಗೆ ಕೆಲವು ಕ್ಷಣಗಳವರೆಗೆ ಕುದಿಸಿ.
ಈ ಮಸಾಲ ಮಟನ್ ಅನ್ನು ರೋಟಿ ಮತ್ತು ಬಟಾಣಿ ಪುಲಾವ್ ಜೊತೆ ತಿನ್ನಲು ರುಚಿಯಾಗಿರುತ್ತದೆ.



Click it and Unblock the Notifications
