Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಲಾಲ್ ಮಾಸ್- ರಾಜಾಸ್ಥಾನಿ ಶೈಲಿಯ ಮಟನ್ ಕರಿ
ಲಾಲ್ ಮಾಸ್ ಕರಿ ಉತ್ತರ ಭಾರತದ ಕಡೆ ತುಂಬಾ ಫೇಮಸ್ಸು. ಇದೊಂದು ರಾಜಾಸ್ಥಾನಿ ಸೈಲಿಯ ಅಡುಗೆಯಾಗಿದ್ದು ಈ ಸಾರನ್ನು ಮಟನ್ ನಿಂದ ತಯಾರಿಸಲಾಗುವುದು.
ಈ ಅಡುಗೆ ತುಂಬಾ ರುಚಿಕರವಾಗಿದ್ದು , ಒಣ ಮೆಣಸನ್ನು ಹುರಿದು ಪೇಸ್ಟ್ ಮಾಡಿ ಈ ಸಾರನ್ನು ತಯಾರಿಸಲಾಗುವುದು. ಮಟನ್ ನಲ್ಲಿ ಹೊಸ ರುಚಿಯ ಅಡುಗೆ ಟ್ರೈ ಮಾಡ ಬೇಕೆನ್ನುವವರು ಇದನ್ನು ಸುಲಭವಾಗಿ, ರುಚಿಕರವಾಗಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು
ಮಟನ್
ಒಂದು ಮೆಣಸಿನಕಾಯಿ
ಏಲಕ್ಕಿ
ಕರಿಮೆಣಸು 6
ಬೆಳ್ಳುಳ್ಳಿ 5-6 ಎಸಳು
ಲವಂಗ 2
ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಜೀರಿಗೆ 1 ಚಮಚ
ಈರುಳ್ಳಿ 3
ಶುಂಠಿ, ಬೆಳ್ಳುಳ್ಳಿ ಪೀಸ್ 1 ಚಮಚ
ಮೊಸರು 1 ಕಪ್
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ 2 ಚಮಚ
ತಯಾರಿಸುವ ವಿಧಾನ
* ಒಣ ಮೆಣಸನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಪೇಸ್ಟ್ ಮಾಡಿಡಬೇಕು.
* ತಾಮ್ರದ ಪಾತ್ರೆಯಲ್ಲಿ 2 ಚಮಚ ತುಪ್ಪ ಹಾಕಿ ಬಿಸಿ ಮಾಡಬೇಕು. ತುಪ್ಪ ಬಿಸಿಯಾದಾಗ ಚಕ್ಕೆ, ಲವಂಗ, ಏಲಕ್ಕಿ, ಕರಿ ಮೆಣಸಿನ ಪುಡಿ, 2 ಒಣ ಮೆಣಸಿನ ಪುಡಿ, ಬೆಳ್ಳುಳ್ಳಿ, ಪಲಾವ್ ಎಲೆ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.
* ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
* ನಂತರ ಮಟನ್ ಹಾಕಿ ಒಣ ಮೆಣಸಿನ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ 5-6 ನಿಮಿಷ ಬೇಯಿಸಬೇಕು. ನಂತರ ಮೊಸರು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಪಾತ್ರೆಯ ಬಾಯಿಯನ್ನು ಮುಚ್ಚಿ ಮಟನ್ ಬೇಯುವವರೆಗೆ ಬೇಯಿಸಿ.
* ಗ್ರೇವಿ ತುಂಬಾ ಗಟ್ಟಿಯಾಗಿದ್ದರೆ1/4 ಕಪ್ ನೀರು ಸೇರಿಸಿ ಕುದಿಸಿ, ಮಟನ್ ಬೆಂದ ಮೇಲೆ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರಾಜಾಸ್ಥಾನಿ ಶೈಲಿಯ ಮಟನ್ ಕರಿ ರೆಡಿ.



Click it and Unblock the Notifications
