Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕೋರಿ ರೊಟ್ಟಿ-ಮಂಗಳೂರಿನ ಶೈಲಿಯ ಅಡುಗೆ
ಕೋರಿ ರೊಟ್ಟಿ ಅಂದರೆ ರೊಟ್ಟಿಗೆ ಚಿಕನ್ ಸಾರು ಮಾಡಿ ಕೊಡಲಾಗುವುದು. ಈ ಅಡುಗೆ ಮಂಗಳೂರಿನಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಈ ಚಿಕನ್ ಸಾರನ್ನು ಅನ್ನು ತೆಂಗಿನ ಹಾಲು ಹಾಕಿ ಗ್ರೇವಿ ರೀತಿಯಲ್ಲಿ ತಯಾರಿಸಲಾಗುವುದು.
ರೊಟ್ಟಿ ಜೊತೆ ಸವೆಯಲು ಮಂಗಳೂರಿನ ಶೈಲಿಯಲ್ಲಿ ಕೋಳಿ ಸಾರು ಮಾಡಲು ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಚಿಕನ್ 1 ಕೆಜಿ
* ಈರುಳ್ಳಿ 2
* ತೆಂಗಿನ ಹಾಲಿನ ರಸ ಅರ್ಧ ಕಪ್
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* ಬೆಳ್ಳುಳ್ಳಿ 4-5 ಎಸಳು
* ಜೀರಿಗೆ 1 ಚಮಚ
* ಕೊತ್ತಂಬರಿ ಬೀಜ 1 ಚಮಚ
* ಒಣ ಮೆಣಸಿನ ಕಾಯಿ 4-5
* ತೆಂಗಿನ ತುರಿ 2 ಚಮಚದಷ್ಟು
* ಅರಿಶಿಣ ಪುಡಿ ಅರ್ಧ ಚಮಚ
* ಕರಿಬೇವಿನ ಎಲೆ
* ಸ್ವಲ್ಪ ಚಕ್ಕೆ ಹಾಗೂ ಲವಂಗ
* ರುಚಿಗೆ ತಕ್ಕ ಉಪ್ಪು
* 4-5 ಚಮಚ ಎಣ್ಣೆ
ತಯಾರಿಸುವ ವಿಧಾನ:
1. ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ ಅದನ್ನು ಉರಿಯಲ್ಲಿಡಬೇಕು. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಅದನ್ನು ಬದಿಯಲ್ಲಿಡಬೇಕು.
2. ನಂತರ ಬಾಣಲೆನ್ನು ಬಿಸಿ ಮಾಡಿ ಅದಕ್ಕೆ ಒಣ ಮೆಣಸು, ಕೊತ್ತಂಬರಿ ಬೀಜ, ತುರಿ ತೆಂಗಿನಕಾಯಿ ಹಾಕಿ ಕೊತ್ತಂಬರಿ ಬೀಜದ ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿಯಬೇಕು. ನಂತರ ಉರಿಯಿಂದ ತೆಗೆದು ಅದಕ್ಕೆ ಜೀರಿಗೆ, ಅರಿಶಿಣ ಪುಡಿ ಚಕ್ಕೆ, ಲವಂಗ, ಬೆಳ್ಳುಳ್ಳಿ ಹಾಕಿ ಪುನಃ ಒಂದು ನಿಮಿಷ ಹುರಿದು ಉರಿಯಿಂದ ತೆಗೆಯಬೇಕು. ನಂತರ ಅದಕ್ಕೆ ಫ್ರೈ ಮಾಡಿದ ಈರುಳ್ಳಿ ಹಾಕಿ ಪೇಸ್ಟ್ ಮಾಡಬೇಕು.
3. ಈಗ ಸಾರು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ರುಬ್ಬಿದ ಸಂಬಾರ ಪದಾರ್ಥಗಳ ಪೇಸ್ಟ್ ಹಾಕಬೇಕು. ನಂತರ 1-2 ನಿಮಿಷ ಸೌಟ್ ನಿಂದ ಆಡಿಸಿ ನಂತರ ತೆಂಗಿನ ಹಾಲು ಹಾಕಬೇಕು. ತೆಂಗಿನ ಹಾಲು ಕುದಿ ಬರುವಾಗ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿದರೆ ರುಚಿಕವಾದ ಕೋರಿ ಕರಿ ರೆಡಿ.



Click it and Unblock the Notifications
