Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಪ್ಪಟ ಕೊಂಕಣಿ ಶೈಲಿಯಲ್ಲಿ ಪ್ರಾನ್ ರೆಸಿಪಿ
ಭಾರತದ ಅಡುಗೆಗಳ ಸಾಲಿಗೆ ಕೊಂಕಣಿ ಶೈಲಿಯ ಅಡುಗೆ ಮಹತ್ವದ ಕೊಡುಗೆ ನೀಡಿದೆ. ತಲೆಮಾರುಗಳಿಂದ ತಮ್ಮದೇ ಕೊಂಕಣಿಯರು ತಮ್ಮದೇ ಶೈಲಿಯ ಅಡುಗೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಅವರ ಅಡುಗೆಯ ರುಚಿಯ ಗುಟ್ಟನ್ನು ಹೊರಗಡೆ ಬಿಟ್ಟು ಕೊಡುವುದಿಲ್ಲ. ತಾಯಿಂದ ಮಗಳು ಕಲಿಯುತ್ತಾಳೆ. ಇಲ್ಲಿ ನಾನು ಅಪ್ಪಟ ಕೊಂಕಣಿ ಶೈಲಿಯ ಪ್ರಾನ್ ರೆಸಿಪಿ ನೀಡುತ್ತಿದ್ದೇನೆ.
ಬನ್ನಿ, ಇದನ್ನು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು
* ಪ್ರಾನ್ 1 ಕೆಜಿ ( ಸಿಪ್ಪೆ ಸುಲಿದು ಸ್ವಚ್ಛ ಮಾಡಿದ್ದು)
* ಈರುಳ್ಳಿ 3
* ಟೊಮೆಟೊ 3
* ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
* ಎಣ್ಣೆ 4 ಚಮಚ
* ಬೆಳ್ಳುಳ್ಳಿ 8-10 ಎಸಳು (ಇದನ್ನು ಜಜ್ಜಿ)
* ಅರಿಶಿಣ ಪುಡಿ 1/2 ಚಮಚ
* ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
* ಟೊಮೆಟೊ
* ಸ್ವಲ್ಪ ಶುಂಠಿ
* ಸ್ವಲ್ಪ ಚಕ್ಕೆ
* 2-3 ಲವಂಗ
* ಹುಳಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ
* ಪ್ರಾನ್, ಅರಿಶಿಣ ಪುಡಿ, ಖಾರದ ಪುಡಿ, ಹುಳಿ, 1 ಚಮಚ ಉಪ್ಪು ಎಲ್ಲಾ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಕಾಲ ಇಡಿ.
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗವನ್ನು ಜಜ್ಜಿ ಹಾಕಿ 1 ನಿಮಿಷ ಹುರಿಯಿರಿ. ಅದು ಸುವಾಸನೆ ಬರುವಾಗ ಬೆಳ್ಳುಳ್ಳಿ ಹಾಗೂ ಜಜ್ಜಿದ ಶುಂಠಿ ಹಾಕಿ. ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ ( ಹುರಿಯುವಾಗ ಗ್ಯಾಸ್ ಅನ್ನು ಸಾಧಾರಣ ಉರಿಯಲ್ಲಿಡಿ).
* ಈಗ ಪ್ರಾನ್ ಹಾಕಿ 5 ನಿಮಿಷ ಹುರಿಯಿರಿ. ನಂತರ ಟೊಮೆಟೊ ಹಾಕಿ, ಎಣ್ಣೆ ಮೇಲೆ ತೇಲುವಷ್ಟು ಆಗುವವರೆಗೆ ಹುರಿಯಿರಿ. ಈಗ ಉಪ್ಪು ನೋಡಿ. ಬೇಕಿದ್ದರೆ ಸ್ವಲ್ಪ ಹಾಕಿ. ನಂತರ ಕತ್ತರಿಸಿ ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಆಡಿಸಿ, ಹುರಿಯಿಂದ ಇಳಿಸಿದರೆ ಕೊಂಕಣಿ ಶೈಲಿಯ ಪ್ರಾನ್ ಸಾರು ರೆಡಿ.



Click it and Unblock the Notifications
