Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರುಚಿಕರವಾದ ಮಟನ್ ಖೀಮಾ ರೆಸಿಪಿ

ಇವತ್ತು ನಾವು ರುಚಿಕರವಾದ ಮಟನ್ ಖೀಮಾ ಮಾಡುವ ವಿಧಾನ ತಿಳಿಯೋಣ. ಈ ಅಡುಗೆ ತಯಾರಿಸಲು ಸುಲಭವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
ಅರ್ಧ ಕೆಜಿ ಮಟನ್ ಖೀಮಾ
ಲಿವರ್ 1/4 ಕೆಜಿ
ಈರುಳ್ಳಿ 3
ಬೆಳ್ಳುಳ್ಳಿ 7-8 ಎಸಳು
ಶುಂಠಿ 2ಇಂಚಿನಷ್ಟು
ಕತ್ತರಿಸಿದ ಹಸಿಮೆಣಸಿನ ಕಾಯಿ 4
ಜೀರಿಗೆ 1 ಚಮಚ
ಕರಿಮೆಣಸಿನಕಾಳು 1 ಚಮಚ
ಚಕ್ಕೆ ಮತ್ತು ಲವಂಗ ( ರುಚಿಗೆ ತಕ್ಕ ಹಾಗೆ)
ಕೆಂಪು ಮೆಣಸಿನ ಪುಡಿ 1 ಚಮಚ
ಕೊತ್ತಂಬರಿ 1 ಚಮಚ
ಟೊಮೆಟೊ 1 (ಕತ್ತರಿಸಿದ್ದು)
ಮೊಸರು 2 ಚಮಚ
ಕೊತ್ತಂಬರಿ ಸೊಪ್ಪು
ಎಣ್ಣೆ 2 ಚಮಚ
ಪಲಾವ್ ಎಲೆ 1
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಹಸಿ ಮಟನ್ ಖೀಮಾ, ಲಿವರ್, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು.
2. ಬೆಳ್ಳುಳ್ಳಿ, ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಶುಂಠಿಯನ್ನು ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.
3. ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ , ಅದರಲ್ಲಿ ಪಲಾವ್ ಎಲೆಗಳನ್ನು ಹಾಕಿ, ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಉರಿಯಬೇಕು.
4. ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಖೀಮಾ ಮತ್ತು ಲಿವರ್ (ಬೇಯಿಸಿದ ಮಾಂಸ) ಹಾಕಿ 2-3 ನಿಮಿಷ ಮಿಶ್ರ ಮಾಡಬೇಕು. ನಂತರ ಕತ್ತರಿಸಿದ ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಕತ್ತರಿಸಿದ ಟೊಮೆಟೊ, ಕೆಂಪು ಮೆಣಸಿನ ಪುಡಿ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡ 2-3 ನಿಮಿಷಬೇಯಿಸಬೇಕು.
5. ನಂತರ 1 ಕಪ್ ನೀರು ಸೇರಿಸಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ 7-10 ನಿಮಿಷ ಬೇಯಿಸಬೇಕು.
6. ನಂತರ 2 ಚಮಚ ಮೊಸರು ಹಾಕಿ ಪುನಃ2-5 ನಿಮಿಷ ಬೇಯಿಸಬೇಕು. ಈ ಮಟನ್ ಖೀಮಾವನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಮಟನ್ ಲಿವರ್ ಖೀಮಾ ರೆಡಿ.
ಗಮನಕ್ಕೆ: ಲಿವರ್ ಬದಲಿಗೆ, ಎಲೆಕೋಸು, ಕ್ಯಾರೆಟ್, ಬಟಾಣಿಯಂತಹ ಯಾವುದೇ ತರಕಾರಿಯನ್ನು ಹಾಕಿ ಕೂಡ ಖೀಮಾ ತಯಾರಿಸಬಹುದು.
ಇದನ್ನು ತಯಾರಿಸಿ ನೋಡಿ, ರುಚಿ ಇಷ್ಟವಾಯಿತೇ ಎಂದು ನಮಗೆ ಬರೆಯಿರಿ.



Click it and Unblock the Notifications
