Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕರೈಕುಡಿ ಚಿಕನ್ ಮಸಾಲ
Non Vegetarian
oi-Hema
By Hema S
ದಕ್ಷಿಣ ಭಾರತದ ಅಡುಗೆಗಳಲ್ಲಿ ಚೆಟ್ಟಿನಾಡು ಅಡುಗೆಗಳಿಗೆ ವಿಶೇಷ ಸ್ಥಾನವಿದೆ. ಚೆಟ್ಟಿನಾಡು ತನ್ನ ಮಾಂಸಾಹಾರದ ಅಡುಗೆಗಳಿಗೆ ಪ್ರಸಿದ್ಧವಾಗಿದೆ. ಚೆಟ್ಟಿನಾಡು ಚಿಕನ್ ಅಡುಗೆಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಅದೇ ರೀತಿ ಮಸಾಲೆ ಬೆರೆಸಿದ ಮೆಣಸಿನೊಂದಿಗೆ ಪ್ರಸಿದ್ಧವಾದುದು ಕರೈಕುಡಿ ಚಿಕನ್ ಮಸಾಲ. ಮಸಾಲೆ ಆಹಾರಗಳನ್ನು ಇಷ್ಟಪಡುವವರಿಗೆ ಇದು ಬಹಳ ಇಷ್ಟವಾಗುತ್ತದೆ.
ಕರೈಕುಡಿ ಚಿಕನ್ ಮಸಾಲ ಮೂಲತಃ ಮೆಣಸಿನ ಚಿಕನ್ ಮಸಾಲ. ಇದಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಹಾಕಲಾಗುತ್ತದೆ. ಅದರಲ್ಲೂ ಮೆಣಸನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಕರೈಕುಡಿ ಎನ್ನುವ ಊರಿನ ಖಾದ್ಯವಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ನಿಮಗೆ ಹೆಚ್ಚು ಖಾರ ತಿನ್ನುವುದು ಇಷ್ಟವಾದ ಸಂಗತಿಯಾಗಿದ್ದರೆ ಇದನ್ನು ಮಾಡಬಹುದು.

1. ಚಿಕನ್ - 1 ಕೆಜಿ
2. ಈರುಳ್ಳಿ- 1 (ಹೆಚ್ಚಿಟ್ಟುಕೊಳ್ಳಿ)
3. ಟೊಮೊಟೊ- 1 (ಕತ್ತರಿಸಿಟ್ಟುಕೊಳ್ಳಿ)
4. ಬೆಳ್ಳುಳ್ಳಿ- 5 ಎಸಳು
5. ಉಪ್ಪು- ರುಚಿಗೆ ತಕ್ಕಷ್ಟು
6. ಅಚ್ಚಖಾರದ ಪುಡಿ- 1 ಟೀಚಮಚ
7. ಮೆಣಸು ಪುಡಿ- 1 ಟೀಚಮಚ
8. ಅರಿಶಿಣ ಪುಡಿ- 1 ಟೀಚಮಚ
9. ಮೊಸರು- 1/2 ಕಪ್
10. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀಚಮಚ
ಕೊಬ್ಬರಿ ಪೇಸ್ಟ್ ತಯಾರಿಸಲು
1. ಕೊಬ್ಬರಿ- ಸ್ವಲ್ಪ (ತುರಿದುಕೊಳ್ಳಿ)
2. ಗಸಗಸೆ- 1 ಟೀಚಮಚ
3. ಮೆಂತ್ಯೆ- 1 ಟೀಚಮಚ
ರುಬ್ಬಿಕೊಳ್ಳಲು
1. ಶುಂಠಿ- 1
2. ಬೆಳ್ಳುಳ್ಳಿ- 8-10 ಎಸಳು
3. ಈರುಳ್ಳಿ- 3
4. ಹಸಿಮೆಣಸಿನಕಾಯಿ- 3
5. ಕಪ್ಪುಮೆಣಸು- 10
6 ಧನಿಯ- 1 ಟೀಚಮಚ
ಒಗ್ಗರಣೆಗೆ
1. ಎಣ್ಣೆ- 2 ಟೀಚಮಚ
2. ಮೆಂತ್ಯೆ- 1/2 ಟೀಚಮಚ
3. ಲವಂಗ- 3
4. ಚಕ್ಕೆ- 1
5. ಏಲಕ್ಕಿ- 2
6. ಬೇ ಎಲೆ- 1
7. ಪುದೀನ- ಸ್ವಲ್ಪ (ಕತ್ತರಿಸಿಕೊಳ್ಳಿ)
8. ಕರಿಬೇವು- 1 ಕಟ್ಟು
ಮಾಡುವ ವಿಧಾನ
1.ಚಿಕನ್ ಅನ್ನು ತೊಳೆದು ಸ್ವಚ್ಛ ಮಾಡಿಕೊಳ್ಳಿ
2. ಅದಕ್ಕೆ ಅಚ್ಚಖಾರದ ಪುಡಿ, ಮೆಣಸು ಪುಡಿ, ಅರಿಶಿಣ ಪುಡಿ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ನೆನಸಿಡಿ.
3. ನಂತರ ಮೇಲೆ ಹೇಳಿರುವ ಸಾಮಾನು ಬಳಸಿ ಕೊಬ್ಬರಿ ಪೇಸ್ಟ ತಯಾರಿಸಿಕೊಳ್ಳಿ.
4. ಒಂದು ಗಂಟೆಯ ನಂತರ ಮೇಲೆ ಹೇಳಿದ ಸಾಮಾನುಗಳನ್ನು ಬಳಸಿ ಒಗ್ಗರಣೆ ಹಾಕಿಕೊಳ್ಳಿ.
5. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ 3-4 ನಿಮಿಷ ಹುರಿಯಿರಿ.
6. ನಂತರ ಇದಕ್ಕೆ ಈರುಳ್ಳಿ ಮತ್ತು ಧನಿಯ ಪೇಸ್ಟ್ ಸೇರಿಸಿ 3-4 ನಿಮಿಷ ಹುರಿಯಿರಿ.
7. ಇದಕ್ಕೆ ಕತ್ತರಿಸಿದ ಟೊಮೊಟೊ ಮತ್ತು ಉಪ್ಪನ್ನು ಸೇರಿಸಿ 2-3 ನಿಮಿಷ ಬಾಡಿಸಿ.
8. ಈಗ ಇದಕ್ಕೆ ನೆನಸಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ ಮಂದ ಉರಿಯಲ್ಲಿ 5-6 ನಿಮಿಷಗಳವರೆಗೆ ಬೇಯಿಸಿ.
9. ನಂತರ ಇದಕ್ಕೆ ಕೊಬ್ಬರಿ ಪೇಸ್ಟ್ ಸೇರಿಸಿ 8-10 ನಿಮಿಷ ಬೇಯಿಸಿ
10. ನಂತರ ನೀರನ್ನು ಹಾಕಿ ಮುಚ್ಚುಳ ಮುಚ್ಚಿ 15-20 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ.
11. ಚಿಕನ್ ಚೆನ್ನಾಗಿ ಬೆಂದಿದೆಯೇ ಎಂದು ನೋಡಿ ಆನಂತರ ಒಲೆ ಆರಿಸಿ.
ಅನ್ನದ ಜೊತೆ ತಿನ್ನಲು ಈ ಚಿಕನ್ ಮಸಾಲ ರುಚಿಕರವಾಗಿರುತ್ತದೆ.
Comments
English summary
Karaikudi Chicken Masala Recipe
Story first published: Thursday, December 5, 2013, 12:03 [IST]
Other articles published on Dec 5, 2013



Click it and Unblock the Notifications
