Latest Updates
-
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ!
ಬಾಯಲ್ಲಿ ನೀರೂರಿಸುವ ಚಿಕನ್ ಚಾಟ್ ರೆಸಿಪಿ
ಸಾಮಾನ್ಯವಾಗಿ ನಾವು ಚಾಟ್ ಅನ್ನು ಆರೋಗ್ಯಕರ ಎಂದು ಪರಿಗಣಿಸುವುದಿಲ್ಲ ಅದಕ್ಕಾಗಿಯೇ ನೀವು ಅದರಲ್ಲಿ ಆರೋಗ್ಯಕರ ಸಾಮಾಗ್ರಿಗಳನ್ನು ಬೆರೆಸಿ ತಯಾರಿಸುತ್ತೀರಿ. ಇಲ್ಲಿ ನಾವು ನೀಡುತ್ತಿರುವ ಈ ಡಿಶ್ ಒಂದು ಆರೋಗ್ಯಕರ ರೆಸಿಪಿಯಾಗಿದೆ. ಭಾರತೀಯ ಡಿಶ್ ಆಗಿರುವ ಚಿಕನ್ ಚಾಟ್ ನಿಮಗೆ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.
ನಿಮ್ಮ ಹಸಿವನ್ನು ತಣಿಸುವ ಶಕ್ತಿ ಈ ಚಿಕನ್ ಚಾಟ್‌ನಲ್ಲಿದೆ. ನಿಮಗೆ ಈ ಡಿಶ್ ತಯಾರಿಸಲು ಬೇಕಾಗಿರುವುದು ಬೇಯಿಸಿದ ಚಿಕನ್, ಚಾಟ್ ಮಸಾಲಾ, ಮತ್ತು ಇದನ್ನು ಇನ್ನಷ್ಟು ರುಚಿಕರವನ್ನಾಗಿಸಲು ಸ್ವಲ್ಪ ತರಕಾರಿಗಳು.
ನಿಮ್ಮ ರಾತ್ರಿಯೂಟಕ್ಕೆ ಖಂಡಿತ ಇದು ಭಾರೀ ಎಂದೆನಿಸುವುದಿಲ್ಲ. ಆದ್ದರಿಂದಲೇ ನಿಮ್ಮ ಕುಟುಂಬದೊಡನೆ ಕುಳಿತು ಸವಿಯಲು ಇದೊಂದು ಆರೋಗ್ಯಪೂರ್ಣ ಸ್ನಾಕ್ಸ್ ಆಗಿದೆ. ಹಾಗಿದ್ದರೆ ಈ ರುಚಿಯಾದ ಚಿಕನ್ ಚಾಟ್ ತಯಾರಿಸಲು ಪ್ರಯತ್ನಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಟೇಸ್ಟ್ ಮಾಡಿ ಕೂರ್ಗಿಗಳ ಸ್ಪೆಶಲ್ ಫ್ರೈ ಚಿಕನ್!
ಪ್ರಮಾಣ:2
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು
ಸಾಮಾಗ್ರಿಗಳು:
.ಚಿಕನ್ (ಬೋನ್‌ಲೆಸ್) - 250 ಗ್ರಾಮ್
.ಈರುಳ್ಳಿ - 1 (ಕತ್ತರಿಸಿದ್ದು)
.ಕ್ಯಾರೇಟ್ - 1 (ಸಣ್ಣದಾಗಿ ಕತ್ತರಿಸಿದ್ದು)
.ಬ್ರಕೋಲಿ - 100 ಗ್ರಾಂ (ಕತ್ತರಿಸಿದ್ದು)
.ಲಿಂಬೆ ರಸ - 2 ಸ್ಪೂನ್
.ಹಸಿ ಮೆಣಸು - 2 (ಕತ್ತರಿಸಿದ್ದು)
.ಕೊತ್ತಂಬರಿ ಸೊಪ್ಪು - 2 (ಕತ್ತರಿಸಿದ್ದು)
.ಬಿಳಿ ಕರಿಮೆಣಸು - 1/2 ಸ್ಪೂನ್
.ಚಾಟ್ ಮಸಾಲಾ - 1 ಸ್ಪೂನ್
.ಹುರಿದ ಜೀರಿಗೆ ಹುಡಿ - 1/2 ಸ್ಪೂನ್
. ಕಪ್ಪು ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1.ಚಿಕನ್ ಮತ್ತು ಬ್ರಕೋಲಿಯನ್ನು ಕುಕ್ಕರ್‌ನಲ್ಲಿ ಎರಡು ವಿಶಲ್ ಬರುವವರೆಗೆ ಬೇಯಿಸಿ.
2.ಚಿಕನ್ ಹಾಗೂ ಬ್ರಕೋಲಿಯಲ್ಲಿದ್ದ ನೀರು ಬಸಿಯಿರಿ.
3.ಸ್ಟೀವ್ ಸಿದ್ಧಪಡಿಸಲು ಈ ಸ್ಟಾಕ್ ಅನ್ನು ತೆಗೆದಿಡಿ.
4.ಚಿಕನ್ ಬೆಂದ ಕೂಡಲೇ, ತರಕಾರಿಗಳು ಮತ್ತು ಮಸಾಲೆ ಸಾಮಾಗ್ರಿಗಳನ್ನು ಕತ್ತರಿಸಿ.
5.ಸಲಾಡ್ ಪ್ಲೇಟ್ ಅನ್ನು ತೆಗೆದುಕೊಂಡು ಅದರಲ್ಲಿ ಚಿಕನ್ ಮತ್ತು ಬ್ರಕೋಲಿ ತುಂಡುಗಳನ್ನಿಡಿ. ಈರುಳ್ಳಿ, ಕ್ಯಾರೇಟ್ ಮತ್ತು ಟೊಮೇಟೋಗಳನ್ನು ಮೇಲ್ಭಾಗದಲ್ಲಿ ಸೇರಿಸಿ.
6.ಚಿಕನ್ ತರಕಾರಿಗಳ ಮೇಲೆ ಲಿಂಬೆ ರಸವನ್ನು ಹಿಂಡಿ.
7.ಬಿಳಿ ಕಾಳುಮೆಣಸು, ಕಪ್ಪು ಉಪ್ಪು ಮತ್ತು ಚಾಟ್ ಮಸಾಲಾದ ಒಗ್ಗರಣೆಯನ್ನು ಡಿಶ್‌ಗೆ ನೀಡಿ.
8.ನಿಮ್ಮ ಬೆರಳುಗಳಿಂದ ಮಿಶ್ರಗೊಳಿಸಿ.
9.ಚಿಕನ್ ಚಾಟ್ ಅನ್ನು ಅಲಂಕರಿಸಲು ಕತ್ತರಿಸಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.
10.ನಿಮ್ಮ ಸಂಜೆಯ ಟೀ ಅಥವಾ ಜ್ಯೂಸ್‌ನೊಂದಿಗೆ ಚಿಕನ್ ಚಾಟ್ ಅನ್ನು ಸೇವಿಸಬಹುದು.



Click it and Unblock the Notifications
