Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಕ್ಕಾ ಚಿಲ್ಲಿ ಚಿಕನ್ - ಚೈನೀಸ್ ರೆಸಿಪಿ
ಚೈನೀಸ್ ಅಡುಗೆ ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅವರು ಮಾಡುವ ಅಡುಗೆಗಳು ತುಂಬಾ ವಿಶಿಷ್ಟವಾಗಿದ್ದು, ರುಚಿಕರವಾಗಿರುತ್ತದೆ. ಚೈನೀಸ್ ಅಡುಗೆ ವೆಜ್ ಹಾಗೂ ನಾನ್ ವೆಜ್ ಎರಡಕ್ಕೂ ಪ್ರಸಿದ್ಧಿಯನ್ನು ಪಡೆದಿದೆ.
ಹಕ್ಕಾ ಚಿಕನ್ ಚಿಲ್ಲಿ ಚೈನೀಸ್ ಮಾದರಿಯ ಅಡುಗೆಯಾಗಿದೆ. ಚೈನೀಸ್ ಹಕ್ಕಾ ಚಿಲ್ಲಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಚೈನೀಸ್ ಅಡುಗೆಯನ್ನು ಅವರಷ್ಟೆ ರುಚಿಕರವಾಗಿ ನಾವು ಕೂಡ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:
ಚಿಕನ್ ಲೆಗ್ ಪೀಸ್ 6-7
ಈರುಳ್ಳಿ 2
ಹಸಿ ಮೆಣಸಿನ ಕಾಯಿ 3-4
ದುಂಡು ಮೆಣಸಿನ ಕಾಯಿ 1
ಜೋಳದ ಹಿಟ್ಟು 3 ಚಮಚ
ಚಿಕ್ಕ ಈರುಳ್ಳಿ 2 (Spring onions)
ಬೆಳ್ಳುಳ್ಳಿ ಎಸಳು 5-6 (ಚಿಕ್ಕದಾಗಿ ಕತ್ತರಿಸಿದ್ದು)
ಕೆಂಪು ಮೆಣಸಿನ ಪುಡಿ 1 ಚಮಚ
ಸಿಪ್ಪೆ ಸುಲಿದ ಕಾಳು ಮೆಣಸಿನ ಪುಡಿ 1 ಚಮಚ
ಜೀರಿಗೆ 1 ಚಮಚ
ಸೋಯಾ ಸಾಸ್ 3 ಚಮಚ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಎಣ್ಣೆ ಅರ್ಧ ಕಪ್
ತಯಾರಿಸುವ ವಿಧಾನ:
* ಚಿಕನ್ ತುಂಡುಗಳನ್ನು ಸಾಧಾರಣ ಗಾತ್ರಕ್ಕೆ ಕತ್ತರಿಸಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ಉಪ್ಪು, ಕರಿಮೆಣಸಿನ ಪುಡಿ, 2 ಚಮಚ ಜೋಳದ ಹಿಟ್ಟು ಹಾಕಿಡಬೇಕು.
* ನಂತರ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಪುಡಿ ಹಾಕಿ 1-2ನಿಮಿಷ ಹುರಿಯಬೇಕು.
* ಈಗ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು.
* ಇದೇ ಸಮಯದಲ್ಲಿ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ಪಾತ್ರೆಯಲ್ಲಿ ತೆಗೆದಿಡಬೇಕು.
* ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ಹಸಿ ಮೆಣಸಿನ ಕಾಯಿ ಹಾಗೂ ಚಿಕ್ಕ ಈರುಳ್ಳಿ, ಕತ್ತರಿಸಿದ ದುಂಡು ಮೆಣಸಿನಕಾಯಿಯನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಚಿಕನ್ ತುಂಡುಗಳನ್ನು ಹಾಕಿ, ರುಬ್ಬಿದ ಪೇಸ್ಟ್ ಹಾಕಿ ಸ್ವಲ್ಪ ನೀರು, 1 ಚಮಚ ಜೋಳದ ಹಿಟ್ಟು, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣವನ್ನು ಕುದಿಸಬೇಕು. ನಂತರ ಸೋಯಾ ಸಾಸ್ ಹಾಕಬೇಕು. ಇಷ್ಟು ಮಾಡಿದರೆ ರುಚಿಕರವಾದ ಹಕ್ಕಾ ಚಿಲ್ಲಿ ಚಿಕನ್ ರೆಡಿ.



Click it and Unblock the Notifications
