Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಗಾರ್ಲಿಕ್ ಜಿಂಜರ್ ಪೋರ್ಕ್ ರೋಸ್ಟ್
ಇಂದು ಕೊಡಗಿನಲ್ಲಿ ಕೈಲ್ ಪೋದ್. ಈ ಹಬ್ಬದಲ್ಲಿ ಬಹುತೇಕ ಮನೆಗಳಲ್ಲಿ ಪೋರ್ಕ್ ಅಡುಗೆ ಇದ್ದೇ ಇರುತ್ತದೆ. ಮಾಂಸದ ಅಡುಗೆ ಮಾಡಿ, ಅದನ್ನು ವೈನ್ ಜೊತೆ ಬಂದ ನೆಂಟರಿಷ್ಟರಿಗೆ ಬಡಿಸುತ್ತಾರೆ. ಕೊಡಗಿನಲ್ಲಿ ಪೋರ್ಕ್ ಕರಿಯನ್ನು ತಮ್ಮದೇ ಆದ ಶೈಲಿಯಲ್ಲಿ ತಯಾರಿಸಲಾಗುವುದು.
ಈ ಬಾರಿ ಕೈಲ್ ಪೋದ್ ಗೆ ಕೊಡಗಿನ ಶೈಲಿಯ ಪಂದಿ ಕರಿ ಜೊತೆ ಏನಾದರೂ ಹೊಸ ರುಚಿಯಲ್ಲಿ ಪೋರ್ಕ್ ಮಾಡಬಯಸುವವರು ಈ ಸರಳವಾದ ಚೈನೀಸ್ ರೆಸಿಪಿ ಟ್ರೈ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು
* 2 ದೊಡ್ಡ ಬೆಳ್ಳುಳ್ಳಿ
* ಬೋನ್ ಲೆಸ್ ಪೋರ್ಕ್ ಅರ್ಧ ಕೆಜಿ
* ಈರುಳ್ಳಿ 3-4
* ಒಂದು ನಿಂಬೆ ಹಣ್ಣು
* 3 ಚಮಚ ಜೇನು
* ಒಂದೂವರೆ ಚಮಚ ಸಾಸಿವೆ
* 1 ಚಮಚ ತುರಿದ ಶುಂಠಿ
* ರುಚಿಗೆ ತಕ್ಕ ಉಪ್ಪು
* ನಿಂಬೆ ಹಣ್ಣು
* ಸ್ವಲ್ಪ ಹುಣಸೆ ಹಣ್ಣು
ತಯಾರಿಸುವ ವಿಧಾನ:
* ಒಂದು ಬೆಳ್ಳುಳ್ಳಿಯ ಎಸಳುಗಳ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿಡಿ. ಪೋರ್ಕ್ ಗೆ ಫೋರ್ಕ್ ನಿಂದ ತೂತ ಮಾಡಿ ಅದರಲ್ಲಿ ಈ ಬೆಳ್ಳುಳ್ಳಿ ತುಂಬಿ.
* ಮತ್ತೊಂದು ಬೆಳ್ಳುಳ್ಳಿಯ ಸಿಪ್ಪೆ ಸುಲಿದು, ಶುಂಠಿ, ಹಸಿ ಮೆಣಸಿನಕಾಯಿ, ಸಾಸಿವೆ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ಹುಣಸೆ ಹಣ್ಣು, ಈರುಳ್ಳಿಯನ್ನು ಹಾಕಿ ಪೇಸ್ಟ್ ಮಾಡಿ. ನಂತರ ನಿಂಬೆ ಹಣ್ಣಿನ ರಸ ಹಿಂಡಿ, ಮಿಕ್ಸ್ ಮಾಡಿ, ಅದರಲ್ಲಿ ಪೋರ್ಕ್ ಹಾಕಿ, ಜೇನು ಹಾಕಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿ 5-6 ಗಂಟೆಗಳ ಕಾಲ ಇಡಿ.
* ನಂತರ ಫ್ರಿಜ್ ನಿಂದ ಹೊರತೆಗೆದು ಅರ್ಧ ಗಂಟೆ ರೂಂನ ಉಷ್ಣತೆಗೆ ಇಟ್ಟು ನಂತರ ಗ್ರಿಲ್ಡ್ ಮಾಡಿ.
* ತಯಾರಾದ ಗಾರ್ಲಿಕ್ ಜಿಂಜರ್ ಪೋರ್ಕ್ ರೋಸ್ಟ್ ಅನ್ನು ಸೋಯಾ ಅಥವಾ ಚಿಲ್ಲಿ ಸಾಸ್ ಜೊತೆ ಸವಿಯಿರಿ.



Click it and Unblock the Notifications
