Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ವಲ್ಪ ಭಿನ್ನ, ಆಧಿಕ ರುಚಿಯ ಫಿಶ್ ರೋಲ್ ರೆಸಿಪಿ

ಸಾಮಾನ್ಯವಾಗಿ ಚಿಕನ್ ಅಥವಾ ಎಗ್ ರೋಲ್ ಮಾಡುವಾಗ ಪರೋಟದಿಂದ ರೋಲ್ ಮಾಡಿ ಅದರೊಳಗೆ ಮಸಾಲೆ ಮತ್ತು ಚಿಕನ್ ಅಥವಾ ಮೊಟ್ಟೆ ಹಾಕಿ ರೋಲ್ ಮಾಡಿ, ಎಣ್ಣೆಯಲ್ಲಿ ಕರಿದು ಕೊಡಲಾಗುವುದು. ಆದರೆ ಇದರಲ್ಲಿ ಮೀನಿನ ತುಂಡಿನಿಂದಲೇ ರೋಲ್ ಮಾಡಿ ಫಿಶ್ ರೋಲ್ ಮಾಡಲಾಗುವುದು. ತುಂಬಾ ರುಚಿಕರವಾಗಿರುವ ಈ ಫಿಶ್ ರೋಲ್ ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:
ಬೇಕಾಗುವ ಸಾಮಾಗ್ರಿಗಳು:
* 1/2 ಕೆಜಿ ಮೀನಿನ ತುಂಡುಗಳು (ಮುಳ್ಳು ಇರಬಾರದು)
* ಈರುಳ್ಳಿ 4
* 4 ಹಸಿಮೆಣಸಿನ ಕಾಯಿ
* ಕತ್ತರಿಸಿದ ಕೊತ್ತಂಬರಿ ಸೊಪ್ಪು 1/4 ಕಪ್
* 3 ಮೊಟ್ಟೆ
* 8 ಬ್ರೆಡ್ ಪೀಸ್ ಗಳು (ಅವುಗಳನ್ನು ಪುಡಿಪುಡಿ ಮಾಡಿರಬೇಕು)
* 2 ಚಮಚ ನಿಂಬೆ ರಸ
* ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಮೆಣಸಿನ ಪುಡಿ 1/2 ಚಮಚ
* ಗರಂ ಮಸಾಲ ಪುಡಿ 1/2 ಚಮಚ ಮತ್ತು ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ 1 ಚಮಚ
ಸಲಹೆ: ಈ ಫಿಶ್ ರೋಲ್ ಗೆ ಮೀನಿನ ತುಂಡುಗಳಿಂದ ರೋಲ್ ಮಾಡುವ ಕಾರಣ ಸ್ವಲ್ಪ ಅಗಲವಾದ ಮೀನಿನ ತುಂಡು ತೆಗೆದುಕೊಳ್ಳಬೇಕು.
ತಯಾರಿಸುವ ವಿಧಾನ:
1. ಅಗಲವಾದ ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು. ನಂತರ ಸ್ವಲ್ಪ ಉಪ್ಪು ಹಾಕಿ ಬದಿಯಲ್ಲಿ ಇಡಬೇಕು.
2. ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಬೇಕು.
3. ಮೊಟ್ಟೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಚೆನ್ನಾಗಿ ಕದಡಬೇಕು.
4. ನಂತರ 5 ಚಮಚ ಬ್ರೆಡ್ ಚೂರುಗಳು, ಕೆಂಪು ಮೆಣಸಿನ ಹುಡಿ, ಗರಂ ಮಸಾಲ, ನಿಂಬೆ ರಸ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್, ಈರುಳ್ಳಿ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, 2 ಚಮಚ ಕದಡಿದ ಮೊಟ್ಟೆ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕುದಿಯಲು ಇಡಬೇಕು.
6. ನಂತರ ಮೀನಿನ ತುಂಡನ್ನು ರೋಲ್ ರೀತಿ ಮಾಡಿ ಅದರೊಳಗೆ ಮುಕ್ಕಾಲು ಭಾಗದಷ್ಟು ಬ್ರೆಡ್ ಚೂರು, ಮೆಣಸಿನ ಪುಡಿ ಎಲ್ಲಾ ಹಾಕಿ ಮಾಡಿದ ಮಿಶ್ರಣ ತುಂಬಬೇಕು, ನಂತರ ರೋಲ್ ಒಳಗೆ ಕದಡಿದ ಮೊಟ್ಟೆ ಸುರಿದು ಅದನ್ನು ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ಕುದಿಯುತ್ತಿರುವ ಎಣ್ಣೆಗೆ ಹಾಕಿ, ಮೀನು ಬೆಂದು ಕಂದು ಬಣ್ಣಕ್ಕೆ ಬರುವಾಗ ತೆಗೆದರೆ ರುಚಿಕರವಾದ ಫಿಶ್ ರೋಲ್ ರೆಡಿ.



Click it and Unblock the Notifications
