Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫಿಶ್ ಕೋಳಿ ವಡಾ ರೆಸಿಪಿ
ಈ ಫಿಶ್ ಕೋಳಿ ವಡಾ ರೆಸಿಪಿಯನ್ನು ನಾನು ಕಲಿತಿದ್ದು ಮಹಾರಾಷ್ಟ್ರದ ಕಡೆಯಿಂದ. ಮುಂಬಯಿ ಕಡೆ ಹೋದರೆ ಈ ರುಚಿಕರವಾದ ಅಡುಗೆಯ ರುಚಿ ನೋಡಲು ಮರೆಯಬೇಡಿ.
ನಾನು ಇದರ ರೆಸಿಪಿ ತಿಳಿದುಕೊಂಡು ಮನೆಗೆ ಬಂದು ಮಾಡಿದಾಗ, ಮುಂಬಯಿನಲ್ಲಿ ತಿಂದಷ್ಟೇ ರುಚಿಕರವಾಗಿ ಬಂತು. ಆದ್ದರಿಂದ ಈ ರೆಸಿಪಿಯನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.

ಬೇಕಾಗುವ ಸಾಮಾಗ್ರಿಗಳು
ಕಿಂಗ್ ಫಿಶ್ ಅಥವಾ ದೊಡ್ಡ ಗಾತ್ರದ ಮೀನು(ಅರ್ಧ ಕೆಜಿ)
ಖಾರದ ಪುಡಿ ಒಂದೂವರೆ ಚಮಚ
ಕಡಲೆ ಹಿಟ್ಟು 100 ಗ್ರಾಂ
ಅರಿಶಿಣ ಪುಡಿ ಅರ್ಧ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
ಗರಂ ಮಸಾಲ 1 ಚಮಚ
ಜೀರಿಗೆ ಪುಡಿ ಅರ್ಧ ಚಮಚ
ನಿಂಬೆ ಹಣ್ಣು 1
ಸೋಂಪು 1 ಚಮಚ
ರುಚಿಗೆ ತಕ್ಕ ಉಪ್ಪು
(ಬೇಕಿದ್ದರೆ ಅರ್ಧ ಚಮಚ ತಂದೂರಿ ಮಸಾಲವನ್ನು ಸೇರಿಸಬಹುದು)
ಗರಂ ಮಸಾಲೆಗೆ ಬೇಕಾಗುವ ಪದಾರ್ಥಗಳು
ಲವಂಗ 2
ಏಲಕ್ಕಿ 2
ನಕ್ಷತ್ರ ಮೊಗ್ಗು(aniseed) 2
ಚಕ್ಕೆ 1
(ಇವನ್ನು ಸ್ವಲ್ಪ ಹುರಿದು ಪುಡಿ ಮಾಡಿ ಇಡಿ)
ತಯಾರಿಸುವ ವಿಧಾನ:
* ಮೀನನ್ನು ಶುದ್ಧ ಮಾಡಿ, ಅದರಲ್ಲಿ ಅರಿಶಿಣ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.
* ನಂತರ ಕಲೆ ಹಿಟ್ಟು ಕಲೆಸಿ, ಅದಕ್ಕೆ ಗರಂ ಮಸಾಲೆ ಪುಡಿ ಮತ್ತು ಉಳಿದೆಲ್ಲಾ ಮಸಾಲೆ ಪುಡಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಮತ್ತೆ ಅರ್ಧ ಅಥವಾ ಒಂದು ಗಂಟೆ ಇಡಿ.
* ನಂತರ ಪ್ಯಾನ್ ಗೆ ಅರ್ಧದಷ್ಟು ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಡೀಪ್ ಫ್ರೈ ಮಾಡಿ, ನಿಂಬೆ ಹಣ್ಣಿನ ಜ್ಯೂಸ್ ಹಾಕಿದರೆ ಫಿಶ್ ಕೋಳಿ ವಡಾ ರೆಡಿ.



Click it and Unblock the Notifications
