Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಲಭವಾಗಿ ತಯಾರಿಸಬಹುದು ಮೀನಿನ ಫ್ರೈ

ಬೇಕಾಗುವ ಸಾಮಾಗ್ರಿಗಳು:
* ಎರಡು ಬಂಗಡೆ ಮೀನು
* 3 ಸಾಧಾರಣ ಗಾತ್ರದ ಈರುಳ್ಳಿ
* 5 ಒಣ ಕೆಂಪು ಮೆಣಸಿನ ಕಾಯಿ
* 1/2 ಚಮಚ ಅರಿಶಿಣ ಪುಡಿ
* ಒಂದೂವರೆ ಚಮಚ ಬೆಳ್ಳುಳ್ಳಿ ಪೇಸ್ಟ್
* ರುಚಿಗೆ ತಕ್ಕ ಉಪ್ಪು
* ಒಂದು ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು ಅಥವಾ ವಿನಿಗರ್ ಬಳಸಬಹುದು
* ಎಣ್ಣೆ
ತಯಾರಿಸುವ ವಿಧಾನ:
1. ಮೀನಿನ ತುಂಡುಗಳನ್ನು ಶುದ್ಧ ಮಾಡಿ ಎರಡು ತುಂಡುಗಳಾಗಿ ಕತ್ತರಿಸಿ, ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಹಾಕಿಡಬೇಕು.
2. ನಂತರ ಒಣ ಕೆಂಪು ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಅರೆದು ಪೇಸ್ಟ್ ರೀತಿ ಮಾಡಬೇಕು. ನಂತರ ಈ ಪೇಸ್ಟ್ ಗೆ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ ಮತ್ತು ಹುಣಸೆ ಹಣ್ಣನ್ನು ಹಿಂಡಿ ಅದರ ರಸ ಹಾಕಿ ಅಥವಾ ವಿನಿಗರ್ ಬಳಸಿ , ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಅದರಲ್ಲಿ ಮೀನು ಹಾಕಿ ಮಿಶ್ರ ಮಾಡಿ ಒಂದು ಗಂಟೆ ಕಾಲ ಇಡಬೇಕು.
3. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಹುರಿದು ತೆಗೆಯಬಹುದು ಅಥವಾ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಮೀನು ಹಾಕಬೇಕು, ಅದರ ಮೇಲೆ ಸ್ವಲ್ಪ ಎಣ್ಣೆ ಸುರಿಯಬೇಕು. ಮೀನು ಸ್ವಲ್ಪ ಬೆಂದಾಗ ಅದನ್ನು ಮಗುಚಿ ಹಾಕಬೇಕು. ಹೀಗೆ ಮಗುಚಿ ಹಾಕುತ್ತಾ ಮೀನು ಫ್ರೈ ಆದ ನಂತರ ತೆಗೆಯಬೇಕು.
ಸಾಮಾನ್ಯವಾಗಿ ಎಲ್ಲಾ ಮೀನುಗಳನ್ನು ಈ ರೀತಿ ಫ್ರೈ ಮಾಡಬಹುದು.



Click it and Unblock the Notifications
