Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಗ್ ಸ್ಪಾಂಜ್ -ವೀಕೆಂಡ್ ಸ್ಪೆಷೆಲ್ ರೆಸಿಪಿ
ಎಗ್ ಸ್ಪಾಂಜ್ ಮೃದುವಾಗಿದ್ದು, ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಎಗ್ ಸ್ಪಾಂಜ್ ಅನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಇದನ್ನು ಪ್ರೆಶರ್ ಕುಕ್ಕರ್ ನಲ್ಲಿ ತಯಾರಿಸಲಾಗುವುದು. ಏಕೆಂದರೆ ಇದನ್ನು ಆವಿಯಲ್ಲಿ ಬೇಯಿಸಿದರೆ ಮಾತ್ರ ರುಚಿಕರವಾಗಿರುತ್ತದೆ. ಈ ಎಗ್ ಸ್ಪಾಂಜ್ ರೆಸಿಪಿ ಇಲ್ಲಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ 4-5
ಈರುಳ್ಳಿ 3 (ಚಿಕ್ಕದಾಗಿ ಕತ್ತರಿಸಿದ್ದು)
ದುಂಡು ಮೆಣಸಿನ ಕಾಯಿ ಅರ್ಧ
ಚಿಟಿಕೆಯಷ್ಟು ಅಡುಗೆ ಸೋಡಾ
ಕಾಲು ಚಮಚ ಅರಿಶಿಣ ಪುಡಿ
ಬೆಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಮೊಟ್ಟೆಯನ್ನು ಒಡೆದು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಅರಿಶಿಣ ಪುಡಿ, ಅಡುಗೆ ಸೋಡಾ, ಉಪ್ಪು ಹಾಕಿ ಚೆನ್ನಾಗಿ ಕದಡಬೇಕು.
2. ನಂತರ ಕಪ್ ಗೆ ಬೆಣ್ಣೆ ಸವರಿ ಅದರಲ್ಲಿ ಕದಡಿದ ಮೊಟ್ಟೆ ಹಾಕಬೇಕು.
3. ಫ್ರೆಶರ್ ಕುಕ್ಕರ್ ನಲ್ಲಿ ಕಪ್ ಇಟ್ಟು ಕಪ್ ನ ಅರ್ಧ ಭಾಗದಷ್ಟು ಫ್ರಶರ್ ಕುಕ್ಕರ್ ಗೆ ನೀರು ಹಾಕಿ, ಕುಕ್ಕರ್ ನ ಮುಚ್ಚಳವನ್ನು ಬಿಗಿಯಾಗಿ ಮುಚ್ಚದೆ ಬೇಯಿಸಬೇಕು. ಈ ರೀತಿ 5-7 ನಿಮಿಷ ಬೇಯಿಸಿದರೆ ಮೊಟ್ಟೆ ಉಬ್ಬಿಕೊಂಡು ಇರುತ್ತದೆ. ನಂತರ ಅದನ್ನು ಕುಕ್ಕರ್ ನಿಂದ ತೆಗೆದು ಪ್ಲೇಟ್ ನಲ್ಲಿ ಹಾಕಿ ಕೇಕ್ ರೀತಿಯಲ್ಲಿ ಕತ್ತರಿಸಿದರೆ ಸವಿಯಲು ರುಚಿಯಾದ ಎಗ್ ಸ್ಪಾಂಜ್ ರೆಡಿ.



Click it and Unblock the Notifications
