Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಾದಿಷ್ಟ ಎಗ್ ಮಸಾಲ ಕರಿ
ಮೊಟ್ಟೆಯ ಸಾರನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ತೆಂಗಿನ ಕಾಯಿ ಹಾಕಿ ಯಾರಿಸಬಹುದು ಅಥವಾ ಬರೀ ಮಸಾಲೆ ಪದಾರ್ಥಗಳನ್ನು ಹಾಕಿ ತಯಾರಿಸಬಹುದು.
ಈ ಕರಿಯನ್ನು ತಯಾರಿಸಲು ಪ್ರತ್ಯೇಕ ಸಾಮಾಗ್ರಿಗಳ ಅಗತ್ಯವಿಲ್ಲ. ಸಾಮಾನ್ಯವಾಗಿ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ರುಚಿಕರವಾದ ಎಗ್ ಮಸಾಲ ಸಾರನ್ನು ತಯಾರಿಸಬಹುದು. ಈ ಎಗ್ ಮಸಾಲ ಸಾರಿನ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
5-6 ಬೇಯಿಸಿದ ಮೊಟ್ಟೆ
2 ಲವಂಗ
ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ಏಲಕ್ಕಿ
1/4 ಭಾಗದಷ್ಟು ನಕ್ಷತ್ರ ಮೊಗ್ಗು
ಚಿಟಿಕೆಯಷ್ಟು ಸಾಸಿವೆ
1 ದೊಡ್ಡ ಈರುಳ್ಳಿ
1 ದೊಡ್ಡ ಟೊಮೆಟೊ (ಇದರ ಸಿಪ್ಪೆ ಸಲಿದು ಪೇಸ್ಟ್ ರೀತಿ ಮಾಡಿಡಬೇಕು)
1 ಚಮಚ ಕೊತ್ತಂಬರಿ ಪುಡಿ
1 ಚಮಚ ಕೆಂಪು ಮೆಣಸಿನ ಪುಡಿ ಮತ್ತು ಅರ್ಧ ಚಮಚ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
2 ಚಮಚ ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಪೇಸ್ಟ್ ಗೆ:
ಅರ್ಧ ಚಮಚ ಜೀರಿಗೆ (ಸ್ವಲ್ಪ ಹುರಿದಿರಬೇಕು)
2 ಚಮಚ ತೆಂಗಿನ ತುರಿ
ಅರ್ಧ ಚಮಚ ಗಸೆ ಗಸೆ ( ಇದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆ ಹಾಕಿಡಬೇಕು)
2-3 ಗೋಡಂಬಿ
4-5 ಕರಿ ಬೇವಿನ ಎಲೆ
1 ಹಸಿ ಮೆಣಸಿನ ಕಾಯಿ
ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಡಬೇಕು.
ತಯಾರಿಸುವ ವಿಧಾನ:
1. ಸ್ವಲ್ಪ ದೊಡ್ಡ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಅದಕ್ಕೆ ಬೇಯಿಸಿದ ಮೊಟ್ಟೆಯನ್ನು ಹಾಕಿ 2 ನಿಮಿಷ ಹುರಿಯಬೇಕು. ನಂತರ ಚಿಟಿಕೆಯಷ್ಟು ಅರಿಶಿಣ ಸೇರಿಸಿ ನಂತರ ಮೊಟ್ಟೆಯನ್ನು ತೆಗೆದು ಒಂದು ಬದಿಯಲ್ಲಿಡಬೇಕು.
2. ನಂತರ ಅದೇ ಪಾತ್ರೆಯಲ್ಲಿ ಎಣ್ಣೆ, ಚಕ್ಕೆ, ಚಕ್ಕೆ, ಏಕ್ಕಿ, ನಕ್ಷತ್ರ ಮೊಗ್ಗು, ಸಾಸಿವೆ ಹಾಕಿ ನಂತರ ಕತ್ತರಿಸಿ ಈರುಳ್ಳಿಯನ್ನು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿಯಬೇಕು.
3. ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಬೇಕು. ನಂತರ ಟೊಮೆಟೊ ಪೇಸ್ಟ್ ಹಾಕಿ 2-3 ನಿಮಿಷ ಹುರಿಯಬೇಕು. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ 2 ನಿಮಿಷ ಹುರಿದು ಅರ್ಧ ಕಪ್ ನೀರು ಹಾಕಬೇಕು.
4. ನಂತರ ಬೇಯಿಸಿದ ಮೊಟ್ಟೆಯನ್ನು ಹಾಕಿ 7-8 ನಿಮಿಷ ಬೇಯಿಸಿ, ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಮೊಟ್ಟೆ ಮಸಾಲ ಕರಿ ರೆಡಿ.



Click it and Unblock the Notifications
