Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುದೀನಾ ಸ್ವಾದ ಇರುವ ಮೊಟ್ಟೆ ಸಾರು
ಮೊಟ್ಟೆ ಸಾರನ್ನು ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬಿ ಮಾಡುವ ಮೊಟ್ಟೆ ಸಾರು ಘಮ್ಮೆನ್ನುವ ಪರಿಮಳದಿಂದ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:
ಪುದೀನಾ ಸ್ವಾದ ಇರುವ ಮೊಟ್ಟೆ ಸಾರು

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ 3-4
ಈರುಳ್ಳಿ 2
ಬೆಳ್ಳುಳ್ಳಿ ಎಸಳು 4-5
ಹಸಿ ಮೆಣಸಿನಕಾಯಿ 2-3
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ
ಪುದೀನಾ 1 ಕಟ್ಟು
ಕೊತ್ತಂಬರಿ ಸೊಪ್ಪು 1 ಕಟ್ಟು
ಜೀರಿಗೆ 1 ಚಮಚ
ಟೊಮೆಟೊ ಸಾಸ್ 1 ಚಮಚ
ನೀರು ಅರ್ಧ ಕಪ್
ರುಚಿಗೆ ತಕ್ಕ ಉಪ್ಪು
ಗರಂ ಮಸಾಲ 1/4 ಚಮಚ
ಎಣ್ಣೆ 3 ಚಮಚ ಮತ್ತು ಕರಿಬೇವಿನ ಎಲೆ
ತಯಾರಿಸುವ ವಿಧಾನ:
* ಮೊಟ್ಟೆಯನ್ನು ಬೇಯಲು ಇಡಿ.
* ಈರುಳ್ಳಿ, ಪುದೀನಾ, ಬೆಳ್ಳುಳ್ಳಿ, ಹಸಿ ಮೆನಸಿನಕಾಯಿ, ಕೊತ್ತಂಬರಿ ಸೊಪ್ಪು ಇವುಗಳನ್ನು ನುಣ್ಣನೆ ರುಬ್ಬಿ .
* ಮೊಟ್ಟೆ ಬೆಂದ ನಂತರ ಅದರ ಸಿಪ್ಪೆ ಸುಲಿಯಿರಿ. ನಂತರ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಮೊಟ್ಟೆ ಹಾಕಿ, ಮೊಟ್ಟೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಮತ್ತೊಂದು ಪಾತ್ರೆಯಲ್ಲಿ ತೆಗೆದು ಇಡಿ.
* ಈಗ ಅದೇ ಎಣ್ಣೆಗೆ ಜೀರಿಗೆ ಹಾಕಿ, ಜೀರಿಗೆ ಚಟಾಪಟಾ ಶಬ್ದ ಮಾಡುವಾಗ ಕರಿ ಬೇವಿನ ಎಲೆ ಹಾಕಿ ನಂತರ ರುಬ್ಬಿದ ಪೇಸ್ಟ್ ಹಾಕಿ ಸಾಧಾರಣ ಉರಿಯಲ್ಲಿ 5-6 ನಿಮಿಷ ಕುದಿಸಿ, ನಂತರ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ, ಗರಂ ಮಸಾಲೆ, ಟೊಮೆಟೊ ಸಾಸ್ ಹಾಕಿ ಗ್ರೇವಿ ರೀತಿಯಾಗುವವರೆಗೆ ಕುದಿಸಿ, ನಂತರ ಮೊಟ್ಟೆಯನ್ನು ಕತ್ತರಿಸಿ ಹಾಕಿದರೆ ಪುದೀನಾ ಸ್ವಾದದ ಮೊಟ್ಟೆ ಸಾರು ರೆಡಿ.



Click it and Unblock the Notifications
