Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಘಮ್ಮೆನ್ನುವ ಮೊಟ್ಟೆ ಸಾರು
ಮೊಟ್ಟೆ ಸಾರಿನ ರುಚಿ ಅದಕ್ಕೆ ಸೇರಿಸುವ ಮಸಾಲೆಯಲ್ಲಿದೆ. ಮಸಾಲೆಯನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ಅದರಲ್ಲಿ ಮೊಟ್ಟೆಯನ್ನು ಹಾಕಿ ತಯಾರಿಸಿದರೆ ಘಮ್ಮೆನ್ನುವ ವಾಸನೆ ಜೊತೆ ಸ್ವಾದಿಷ್ಟಕರವಾಗಿರುತ್ತದೆ. ಆದರೆ ಈ ಮೊಟ್ಟೆ ಸಾರನ್ನು ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ. ಸುಲಭವಾಗಿ ತಯಾರಿಸಿ ಆಂಧ್ರ ಶೈಲಿಯ ಮೊಟ್ಟೆ ಕರಿ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ ಮೊಟ್ಟೆ 5
* ಒಂದು ಹಸಿ ಮೊಟ್ಟೆ

* ಆಲೂಗೆಡ್ಡೆ 2
* ಎಣ್ಣೆ
* ಸಾಸಿವೆ
* ಕರಿಬೇವು ಚೀಸ್ ಹಾಕಿ ಮಾಡುವ ಸ್ಪೆಷೆಲ್ ಎಗ್ ಗ್ರೇವಿ
ಮಸಾಲೆಗೆ:
* ತುರಿದ ತೆಂಗಿನ ಕಾಯಿ 1 ಕಪ್
* ಕತ್ತರಿಸಿದ ಈರುಳ್ಳಿ
* ಟೊಮೆಟೊ 1
* ಬೆಳ್ಳುಳ್ಳಿ 6-7 ಎಸಳು
* ಶುಂಠಿ
* 1/ 2 ಚಮಚ ಅರಿಶಿಣ ಪುಡಿ
* ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ (ಖಾರಕ್ಕೆ ತಕ್ಕಷ್ಟು)
* ಕೊತ್ತಂಬರಿ ಪುಡಿ 1/2 ಚಮಚ
* ಜೀರಿಗೆ ಒಂದು ಚಮಚ
* ಕರಿಮೆಣಸು ಅಥವಾ ಕಾಳು ಮೆಣಸು 5-6
* ಚಕ್ಕೆ, ಲವಂಗ
* ಗಸೆಗಸೆ ಒದು ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು ಅಪ್ಪಟ ಗ್ರಾಮೀಣ ಶೈಲಿಯ ಮೊಟ್ಟೆ ಮಸಾಲ ರೆಸಿಪಿ
ತಯಾರಿಸುವ ವಿಧಾನ:
1. ಜೀರಿಗೆ, ಗಸಗಸೆ, ಕಾಳು ಮೆಣಸು, ಚಕ್ಕೆ ಮತ್ತು ಲವಂಗವನ್ನು ಎಣ್ಣೆ ಹಾಕದೆಯೇ ಬಾಣಲೆಯಲ್ಲಿ ಹುರಿದುಕೊಳ್ಳಬೇಕು.
2. ನಂತರ ಹುರಿದ ಪದಾರ್ಥಗಳನ್ನು ಜೊತೆ ತೆಂಗಿನ ತುರಿ ಸೇರಿಸಿ, ಅದಕ್ಕೆ ಕೊತ್ತಂಬರಿ ಪುಡಿ, ಅರಿಶಿಣಪುಡಿ, ಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಹಾಕಿ ಗಟ್ಟಿಯಾಗಿ, ನುಣ್ಣನೆ ರುಬ್ಬಿಕೊಳ್ಳಬೇಕು.
3. ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು ಹಾಕಬೇಕು. ನಂತರ ರುಬ್ಬಿದ ಮಸಾಲೆ ಮತ್ತು ರುಚಿಗೆ ಉಪ್ಪು ಹಾಕಿ ಮಿಶ್ರ ಮಾಡಿ, ಸ್ವಲ್ಪ ನೀರು ಮತ್ತು ಕತ್ತರಿಸಿದ ಆಲೂಗೆಡ್ಡೆ ಹಾಕಿ ಆಲೂಗೆಡ್ಡೆ ಬೇಯುವವರೆಗೆ ಬೇಯಿಸಬೇಕು.
4. ನಂತರ ಒಂದು ಹಸಿ ಮೊಟ್ಟೆಯನ್ನು ಹಾಕಿ ಸೌಟ್ ನಿಂದ ಚೆನ್ನಾಗಿ ಕಲೆಸಬೇಕು. ನಂತರ ಬೇಯಿಸಿದ ಮೊಟ್ಟೆಯನ್ನು 2 ಸಮಭಾಗಗಳಾಗಿ ಕತ್ತರಿಸಿ ಹಾಕಬೇಕು. ನಂತರ 2-3 ನಿಮಿಷ ಕುದಿಸಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ರುಚಿಕರವಾದ ಮೊಟ್ಟೆ ಸಾರು ರೆಡಿ.



Click it and Unblock the Notifications
