Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಟ್ಯಾಂಗಿ ಅಂಡ್ ಸ್ಪೈಸಿ ಡಾನ್ ಡಾನ್ ಎಗ್ ಫ್ರೈ
ಹಾಯ್, ನನಗೆ ಫ್ರೆಂಡ್ಸ್ ಜೊತೆ ಜಾಲಿ ರೈಡ್ ಹೋಗುವುದು, ಟ್ರಕ್ಕಿಂಗ್, ವೀಕೆಂಡ್ ಮಸ್ತಿ ಮೋಜು ಇವುಗಳಷ್ಟೇ ಆಸಕ್ತಿ ಹೊಸ ರುಚಿಯ ಅಡುಗೆ ಮಾಡುವುದರಲ್ಲಿ. ನನ್ನ ಹೊಸ ರುಚಿ ಅಡುಗೆಯ ಪ್ರಯೋಗ ಮಾಡುವುದು ಹೆಂಡತಿ, ಫ್ರೆಂಡ್ಸ್ ಮೇಲೆ, ಪುಣ್ಯಕ್ಕೆ ಇದುವರೆಗೆ ನಾನು ಮಾಡಿದ ಅಡುಗೆ ತಿಂದು ಅವರಿಗೆ ಯಾರಿಗೂ ಏನೂ ಆಗಿಲ್ಲ, ನನಗೆ ಮಾತ್ರ ಅವರಿಂದ ಶಹಬ್ಬಾಸ್ ಗಿರಿ ದೊರೆಯುತ್ತದೆ. ಆದ್ದರಿಂದಲೇ ನನ್ನ ಹೊಸ- ಹೊಸ ರುಚಿಯ ಅಡುಗೆ ಪ್ರಯತ್ನಗಳು ಮುಂದುವರೆದಿದೆ.
ಮೊನ್ನೆ ನಾನು ಹೊಸ ಬಗೆಯಲ್ಲಿ ಮೊಟ್ಟೆ ಫ್ರೈ ಮಾಡಿದ್ದೆ, ಟೇಸ್ಟ್ ಸೂಪರ್ ಆಗಿ ಬಂದ ಕಾರಣ ಆ ರೆಸಿಪಿಯನ್ನು ನಿಮ್ಮೊಂದಿಗೂ ಹಂಚಿಕೊಳ್ಳಬೇಕೆನ್ನಿಸಿತ್ತು, ತುಂಬಾ ಸರಳವಾದ ಈ ಅಡುಗೆಗೆ ಡಾನ್ ಡಾನ್ ಮೊಟ್ಟೆ ಫ್ರೈ ಅಂತಲೂ ಹೆಸರಿಟ್ಟಿದ್ದೇನೆ. ಹೆಸರು ಇಷ್ಟವಾಗಲಿಲ್ಲವೆಂದರೆ ಬದಲಾಯಿಸಿಕೊಳ್ಳಿ, ಆದರೆ ರೆಸಿಪಿ ಟ್ರೈ ಮಾಡಿ ಖಂಡಿತ ನಿಮಗೆ ಇಷ್ಟವಾಗುವುದು.

Image courtesy: Deepak Naidu
ಬೇಕಾಗುವ ಸಾಮಾಗ್ರಿಗಳು
ಈರುಳ್ಳಿ 3-4
ಮೊಟ್ಟೆ 6
ಹುಣಸೆ ಹಣ್ಣಿನ ರಸ 2 ಚಮಚ
ಖಾರದ ಪುಡಿ ಅರ್ಧ ಚಮಚ
ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು(ಅಲಂಕರಿಸಲು)
2 ಚಮಚ ಎಣ್ಣೆ
ತಯಾರಿಸುವ ವಿಧಾನ:
* ಮೊಟ್ಟೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಇಡಿ.
* ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ತವಾಕ್ಕೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
*ನಂತರ ಹುಣಸೆ ಹಣ್ಣಿನ ರಸ ಹಾಕಿ ಖಾರದ ಪುಡಿ, ಅರಿಶಿಣ ಪುಡಿ, ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 3-4 ನಿಮಿಷ ಫ್ರೈ ಮಾಡಿ.
* ಈಗ ಬೇಯಿಸಿದ ಮೊಟ್ಟೆಯನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ, ತವಾದಲ್ಲಿ ಹಾಕಿ, ಫ್ರೈ ಮಾಡಿದ ಈರುಳ್ಳಿ ಸೌಟ್ ನಲ್ಲಿ ತೆಗೆದು ಮೊಟ್ಟೆಯ ಮೇಲೆ ಹಾಕಿ ಮತ್ತೆ 10 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
* ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಡಾಂಗ್ ಡಾಂಗ್ ಎಗ್ ಫ್ರೈ ರೆಡಿ.



Click it and Unblock the Notifications
