Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್-ರಂಜಾನ್ ಸ್ಪೆಷಲ್
ರಂಜಾನ್ ತಿಂಗಳಿನಲ್ಲಿ ಉಪವಾಸ ಮಾಡುವವರು ಸಂಜೆ ಉಪವಾಸ ಮುರಿದ ಬಳಿಕ ಅಧಿಕ ಪ್ರೊಟೀನ್ ಮತ್ತು ಪೌಷ್ಟಿಕಾಂಶವಿರುವ ಆಹಾರವನ್ನೇ ತಿನ್ನಬೇಕು. ಸಾಮಾನ್ಯವಾಗಿ ನಾನ್ ವೆಜ್ ಅಡುಗೆಯಂತೂ ಇದ್ದೇ ಇರುತ್ತದೆ. ಇವತ್ತು ಚಿಕನ್ ನಿಂದ ಸ್ಪೆಷಲ್ ರಂಜಾನ್ ಅಡುಗೆ ಮಾಡಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ
ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
ಚಿಕನ್ ಲೆಗ್ 8
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಹಸಿ ಮೆಣಸಿನಕಾಯಿ 4
ಕರಿ ಮೆಣಸಿನ ಪುಡಿ 2 ಚಮಚ
ನಿಂಬೆ ರಸ 2 ಚಮಚ
ಮೈದಾ 1 ಕಪ್
ಮೊಟ್ಟೆಯ ಬಿಳಿ(ಎರಡು ಮೊಟ್ಟೆಯದು)
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಸೊಪ್ಪು
ನೀರು ಅರ್ಧ ಕಪ್
ಬ್ರೆಡ್ ಚೂರುಗಳು 1 ಕಪ್
ಎಣ್ಣೆ 3 ಕಪ್
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಚಿಕನ್ ಲೆಗ್ ಪೀಸ್ ಅನ್ನು ತೊಳೆದು ಅದರ ಮೇಲೆ ನೈಫ್ ನಿಂದ ಗೆರೆಗಳನ್ನು ಎಳೆಯಿರಿ (ಈ ರೀತಿ ಮಾಡಿದರೆ ಚಿಕನ್ ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳುವುದು), ನಂತರ ಚಿಕನ್ ಲೆಗ್ ಪೀಸ್ ಮೇಲೆ ಉಪ್ಪು ಸವರಿ.
* ಈಗ ಚಿಕನ್ ಹಾಕಿರುವ ಬಟ್ಟಲಿಗೆ ನಿಂಬೆ ರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜಜ್ಜಿದ ಹಸಿ ಮೆಣಸಿನ ಕಾಯಿ, ಕರಿ ಮೆಣಸಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಸೊಪ್ಪಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಿ 1 ಗಂಟೆ ಇಡಿ.
* ನಂತರ ಮೈದಾ ಹಿಟ್ಟಿಗೆ 2 ಮೊಟ್ಟೆಯ ಬಿಳಿ ಹಾಕಿ, ಅದಕ್ಕೆ ಜಜ್ಜಿದ ಹಸಿ ಮೆಣಸಿಕಾಯಿ, ಸ್ವಲ್ಪ ಕರಿ ಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ಚಿಕನ್ ಲೆಗ್ ಪೀಸ್ ಅನ್ನು ಮೈದಾ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿ. ಚಿಕನ್ ಬೆಂದು ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆದರೆ ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್ಸ್ ರೆಡಿ.



Click it and Unblock the Notifications

