Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ರಂಜಾನ್ ಹಬ್ಬಕ್ಕಾಗಿ ಗರಿಗರಿ ಮೀನು ಕಬಾಬ್ ಖಾದ್ಯ
ರಂಜಾನ್ ಉಪವಾಸ ಈಗಾಗಲೇ ಆರಂಭಗೊಂಡಿದೆ. ಜಗತ್ತಿನಲ್ಲಿರುವ ಎಲ್ಲಾ ಮುಸ್ಲಿಮ್ ಬಾಂಧವರು ಸೂರ್ಯಾಸ್ತವಾಗುವ ಮುನ್ನ ಆಹಾರವನ್ನು ಸೇವಿಸಿ ಇಡೀ ದಿನ ಉಪವಾಸವನ್ನು ಆಚರಿಸಿ ನಂತರ ಸಂಜೆಯ ಸಮಯದಲ್ಲಿ ಉಪವಾಸವನ್ನು ತ್ಯಜಿಸುತ್ತಾರೆ ಇದು ತುಂಬಾ ಕಷ್ಟಕರವಾದ ಉಪವಾಸ ಕ್ರಮವಾಗಿದೆ.
ದಿನದ ಕೊನೆಯಲ್ಲಿ, ಉಪವಾಸವನ್ನು ದ್ರವ ರೂಪದ ಆಹಾರ ಸೇವಿಸುವುದರ ಮೂಲಕ ಅಂತ್ಯಗೊಳಿಸಲಾಗುತ್ತದೆ. ಉಪವಾಸದ ನಂತರ, ಹೆಚ್ಚಿನವರು ಅತಿಯಾಗಿ ತಿನ್ನುತ್ತಾರೆ. ಹಾಗಾಗಿ ಇದು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ನಿಮ್ಮ ಉಪವಾಸವನ್ನು ಸಂತೋಷಕರವಾಗಿ ಮುಗಿಸಬಹುದು. ಇಂದಿನ ಲೇಖನದಲ್ಲಿ ಮೀನನ್ನು ಬಳಸಿ ತಯಾರಿಸಬಹುದಾದ ಕಬಾಬ್ ರೆಸಿಪಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದು ನಿಮಗೆ ನ್ಯೂಟ್ರಿಶನ್ ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುವಲ್ಲಿ ನೆರವನ್ನು ನೀಡುತ್ತದೆ.
ಉಪವಾಸದ ನಂತರ ನೀವು ಹೆಚ್ಚು ಮೀನು ಕಬಾಬ್ ತಿಂದಲ್ಲಿ, ನೀವು ಕ್ಯಾಲೋರಿಯನ್ನು ಎಣಿಕೆ ಮಾಡಬೇಕಾದ ಅವಶ್ಯಕತೆಯಿಲ್ಲ. ಈ ಕಬಾಬ್ ಬಾಯಲ್ಲಿ ನೀರೂರಿಸುವಂತಿದ್ದು ನಿಮಗೆ ಆಹ್ಲಾದವನ್ನುಂಟು ಮಾಡುತ್ತದೆ. ಈ ಗರಿಯಾದ ಕಬಾಬ್ ರೆಸಿಪಿ ನಿಮಗೆ ಬಾಯಲ್ಲಿ ನೀರೂರುಂತೆ ಮಾಡುವುದು ಖಂಡಿತ.
ರಂಜಾನ್ ಹಬ್ಬಕ್ಕಾಗಿ ವಿಶೇಷ ಅಡುಗೆ ಈರುಳ್ಳಿ ಅನ್ನ!
ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಾಮಾಗ್ರಿಗಳು:
*ಮೀನು - 500 ಗ್ರಾಮ್ಸ್
* ಕಡಲೆಬೇಳೆ (ಚನ್ನಾ ದಾಲ್) - 4 ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
*ಈರುಳ್ಳಿ ಪೇಸ್ಟ್ - 2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಕಡಲೆ ಹಿಟ್ಟು - 4 ಚಮಚ
*ಎಣ್ಣೆ - 2 ಚಮಚ
ಮಾಡುವ ವಿಧಾನ:
1. ಮೀನಿನ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.
2. 10 ನಿಮಿಷಗಳ ಕಾಲ ಈ ತುಂಡುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಿ. ಇದು ತಣ್ಣಗಾದ ನಂತರ, ಮೂಳೆಯನ್ನು ಹೊರತೆಗೆದು ನಿಮ್ಮ ಕೈಗಳಿಂದ ಚೆನ್ನಾಗಿ ಹಿಸುಕಿ.
3. ಸ್ವಲ್ಪ ನೀರಿನೊಂದಿಗೆ ಕಡಲೆಬೇಳೆ (ಚನ್ನಾ ದಾಲ್) ಅನ್ನು ಅರೆದುಕೊಳ್ಳಿ ಮತ್ತು ನುಣ್ಣನೆ ಪೇಸ್ಟ್ ಸಿದ್ಧಪಡಿಸಿ.
4. ಹಿಸುಕಿದ ಮೀನನ್ನು ಬೌಲ್‌ನಲ್ಲಿ ತೆಗೆದುಕೊಳ್ಳಿ. ಚನ್ನಾ ದಾಲ್ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಈರುಳ್ಳಿ ಪೇಸ್ಟ್ ವಿನೇಗರ್ ಅನ್ನು ಸೇರಿಸಿ.
5. ನಿಮ್ಮ ಕೈಗಳಿಂದ ಈ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಮತ್ತು 5-6 ಸಮಾನ ಭಾಗಗಳನ್ನು ವಿಭಾಗಿಸಿ.
6. ನಿಮ್ಮ ಹಸ್ತದಿಂದ ಮಿಶ್ರಣದ ಪ್ರತಿಯೊಂದು ಭಾಗವನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಟ್ಲೇಟ್ ಮಾದರಿಯಲ್ಲಿ ಈ ಉಂಡೆಗಳನ್ನು ತಯಾರಿಸಿ.
7. ಕಡಲೆಹಿಟ್ಟನ್ನು ನೀರಿನೊಂದಿಗೆ ಮಿಶ್ರ ಮಾಡಿ ದಪ್ಪ ಹಿಟ್ಟು ಮಾಡಿಕೊಳ್ಳಿ.
8. ಇನ್ನು ಕಡಲೆಹಿಟ್ಟಿಗೆ ಕಬಾಬ್ ಅನ್ನು ಮುಳುಗಿಸಿ.
9. ಪ್ಯಾನ್ ಅನ್ನು ಬಿಸಿ ಮಾಡಿ ಎಣ್ಣೆಯನ್ನು ಕಾಯಿಸಿಕೊಳ್ಳಿ. ಮೀನು ಕಬಾಬ್ ತುಂಡುಗಳು ಚಿನ್ನದ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಕಾಯಿಸಿಕೊಳ್ಳಿ.
ಆರೋಗ್ಯಕರವಾದ ರುಚಿಕರವಾದ ಮೀನು ಕಬಾಬ್ ಫ್ರೈ ಸವಿಯಲು ಸಿದ್ಧವಾಗಿದೆ. ರಂಜಾನ್‌ಗಾಗಿ ಈ ಅನನ್ಯ ಡಿಶ್ ಅನ್ನು ಸವಿಯಲು ಮರೆಯದಿರಿ.



Click it and Unblock the Notifications