Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಟೇಸ್ಟ್ ಮಾಡಿ ಕೂರ್ಗಿಗಳ ಸ್ಪೆಶಲ್ ಫ್ರೈ ಚಿಕನ್!
ಪ್ರತೀ ದಿನ ಒಂದೇ ಬಗೆಯ ಚಿಕನ್ ಕರಿಗಳನ್ನು ಮಾಡಿ ಬೇಸರಗೊಂಡಿದ್ದೀರಾ? ಕರ್ನಾಟಕದ ಶಿಖರಗಳ ನಾಡಾದ ಕೊಡಗಿನ ಫ್ರೈ ಚಿಕನ್ ಕರಿಯನ್ನು ಈ ವೀಕೆಂಡ್‌ನಲ್ಲಿ ತಯಾರಿಸಿ ಆಸ್ವಾದಿಸಿ.
ಈ ಫ್ರೈ ಚಿಕನ್ ರೆಸಿಪಿಯನ್ನು ಕೊಡವ ಭಾಷೆಯಲ್ಲಿ ಕೋಳಿ ಬರ್ತದ್ ಎಂದು ಹೇಳುತ್ತಾರೆ. ಕೊಡಗಿನ ಸಿಝ್ವನ್ ಅದರದ್ದೇ ಆದ ವಿಶೇಷ ರುಚಿಯನ್ನುಹೊಂದಿದೆ. ಕೊಡಗಿನ ವಿಶೇಷ ಗರಮ್ ಮಸಾಲಾಯಿಂದ ಚಿಕನ್ ರೆಸಿಪಿಗಳನ್ನು ತಯಾರಿಸಲಾಗುತ್ತದೆ. ಮಸಾಲೆಯಲ್ಲಿ ಚಿಕನ್ ಅನ್ನು ನೆನೆಸಿ ನಂತರ ಎಣ್ಣೆಯಲ್ಲಿ ಇದನ್ನು ಹುರಿಯುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕರಿ ಫ್ರೈಡ್ ರೈಸ್ ರೆಸಿಪಿ

ಕೊಡಗಿನಲ್ಲಿ ತಯಾರಿಸಲಾದ ವಿಶೇಷ ವಿನೇಗರ್‌ನಿಂದ ಈ ಚಿಕನ್ ರೆಸಿಪಿಯನ್ನು ತಯಾರಿಸುತ್ತಾರೆ. ಕೊಡಗು ಉತ್ತಮ ಸಾಂಬಾರು ಪದಾರ್ಥಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕೊಡಗಿನ ಶಿಖರಗಳಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳಿಂದ ಚಿಕನ್ ಡಿಶ್ ಅನ್ನು ತಯಾರಿಸುವರು.
ಆದ್ದರಿಂದಲೇ ಅದನ್ನು ಸವಿಯುವಾಗ ವಿಶೇಷ ಸವಿಯನ್ನು ನಾವು ಆಸ್ವಾದಿಸಬಹುದು. ಹಾಗಿದ್ದರೆ ನಿಮಗಾಗಿ ಇಂದು ಈ ಕೊಡಗಿನ ವಿಶೇಷ ಫ್ರೈ ಚಿಕನ್ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದೇವೆ. ಮನೆಯಲ್ಲೇ ಈ ಫ್ರೈ ಮಾಡಿದ ಚಿಕನ್ ರೆಸಿಪಿಯನ್ನು ಆಸ್ವಾದಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರುಚಿಕರವಾದ ಸಿಗಡಿ ಫ್ರೈಡ್ ರೈಸ್ ರೆಸಿಪಿ
ಪ್ರಮಾಣ: 4
ಸಿದ್ಧತಾ ಸಮಯ: 1 ಗಂಟೆ
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
ಕೊತ್ತಂಬರಿ ಬೀಜ - 1 ಸ್ಪೂನ್
ಕರಿಮೆಣಸು - 10
ಜೀರಿಗೆ ಬೀಜ - 1 ಸ್ಪೂನ್
ಸಾಸಿವೆ - 1 ಸ್ಪೂನ್
ದಾಲ್ಚೀನಿ ಕಡ್ಡಿಗಳು - 1 ಇಂಚು
ಲವಂಗ - 5
ಚಿಕನ್ - 500 ಗ್ರಾಂ
ಈರುಳ್ಳಿ - 2 (ಕತ್ತರಿಸಿದ್ದು)
ಬೆಳ್ಳುಳ್ಳಿ ಎಸಳು - 5 (ಕತ್ತರಿಸಿದ್ದು)
ಕಾಚಂಪುಳಿ (ಕೊಡಗಿನ ವಿನೇಗರ್) - 2 ಸ್ಪೂನ್
ಮೆಣಸಿನ ಹುಡಿ - 1 ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಸ್ಪೂನ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರೆಡ್ ಅಂಡ್ ಹಾಟ್-ಚಿಕನ್ ರೈಸ್
ಮಾಡುವ ವಿಧಾನ:
ಕೊತ್ತಂಬರಿ ಬೀಜಗಳು, ಜೀರಿಗೆ ಬೀಜಗಳು, ಸಾಸಿವೆ, ಕರಿಮೆಣಸುನ ಕಾಳು, ದಾಲ್ಚೀನಿ, ಲವಂಗ ಈ ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‌ನಲ್ಲಿ ರುಬ್ಬಿಕೊಳ್ಳಿ. ಪೌಡರ್‌ನಂತೆ ಇವನ್ನು ರುಬ್ಬಿಕೊಳ್ಳಿ.
ಈ ಮೇಲೆ ತಿಳಿಸಿದ ಸಂಯೋಜನೆಯು ವಿಶೇಷ ಕೊಡವ ಗರಮ್ ಮಸಾಲೆಯಾಗಿದ್ದು ಈ ಸಾಂಬಾರು ಪದಾರ್ಥಗಳನ್ನು ಮನೆಯಲ್ಲೇ ಬೆಳೆಸಿರುವಂತಹದ್ದು. ನೀವು ಇವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಮನೆಯಲ್ಲೇ ಮಸಾಲೆ ತಯಾರಿಸಿಕೊಳ್ಳಬಹುದು.
ಚಿಕನ್ ಅನ್ನು ಈ ಕಡೆದ ಗರಮ್ ಮಸಾಲೆಯಲ್ಲಿ 1 ಗಂಟೆಯಷ್ಟು ಕಾಲ ಮುಳುಗಿಸಿಡಿ ಹಾಗೂ ಉಪ್ಪು ಸೇರಿಸಿ.
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ನೀವು ಈಗ ತಾನೆ ಕಡೆದ ಮಸಾಲೆಯ ಸ್ವಲ್ಪ ಪ್ರಮಾಣದಿಂದ ಒಗ್ಗರಣೆ ಮಾಡಿಕೊಳ್ಳಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ.
ಈರುಳ್ಳಿ ಕೆಂಪಗಾಗುವವರೆಗೂ ಅದನ್ನು ಹುರಿಯಿರಿ. ನಂತರ ಮೆಣಸಿನ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಮುಳುಗಿಸಿಟ್ಟ ಚಿಕನ್ ತುಂಡುಗಳನ್ನು ಪ್ಯಾನ್‌ಗೆ ಹಾಕಿ. 10 ನಿಮಿಷಗಳಷ್ಟು ಕಾಲ ಸಣ್ಣ ಉರಿಯಲ್ಲಿ ಇದನ್ನು ಫ್ರೈ ಮಾಡಿ.
ಪ್ಯಾನ್‌ಗೆ ಸ್ವಲ್ಪ ವಿನೇಗರ್ ಹಾಕಿ. ಮುಚ್ಚಿ 5 ನಿಮಿಷಗಳಷ್ಟು ಕಾಲ ಬೇಯಿಸಿ.
ಈರುಳ್ಳಿ ರಿಂಗ್ ಮತ್ತು ಹಸಿರು ಸಲಾಡ್‌ಗಳೊಂದಿಗೆ ಬಿಸಿ ಬಿಸಿಯಾಗಿ ಕೊಡವ ಚಿಕನ್ ಕರಿಯನ್ನು ಸವಿಯಲು ನೀಡಿ. ದಾಲ್ ಮತ್ತು ಅನ್ನದೊಂದಿಗೂ ಇದು ಉತ್ತಮ ಕಾಂಬಿನೇಶನ್.



Click it and Unblock the Notifications
