Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕ್ರಿಸ್ ಮಸ್ ಸ್ಪೆಷಲ್: ಪ್ರವನ್ ಆ್ಯಂಬೊಟ್ ಟಿಕ್
ಸೀಗಡಿಯಿಂದ ತಯಾರಿಸಲಾಗುವ ಈ ಖಾದ್ಯ ಗೋವಾದ ಜನಪ್ರಿಯ ಖಾದ್ಯಗಳಲ್ಲಿ ಒಂದು. ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಮಾಡಲು ಒಂದು ರುಚಿಕರವಾದ ಖಾದ್ಯ.
ಪ್ರವನ್ ಆ್ಯಂಬೊಟ್ ಟಿಕ್ ರುಚಿಕರವಾದ ಮತ್ತು ಸುಲಭವಾದ ಖಾದ್ಯ. ಇದನ್ನು ಸ್ವಲ್ಪ ಮಸಾಲೆ ಬಳಸಿ ಮಾಡಲಾಗುತ್ತದೆ. ಇದು ಸ್ವಲ್ಪ ಹುಣಸೆ ಹಣ್ಣಿನ ರುಚಿಯನ್ನು ಒಳಗೊಂಡಿದ್ದು ಸವಿಯಲು ರುಚಿಕರವಾಗಿರುತ್ತದೆ. ಇದನ್ನು ನೀವು ಸೀಗಡಿಯಿಂದಲೇ ಮಾಡಬೇಕೆಂದಿಲ್ಲ. ಸೀಗಡಿಗೆ ಬದಲಾಗಿ ಮೀನು ಅಥವ ಚಿಕನ್ ಕೂಡ ಬಳಸಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು
1. ಸೀಗಡಿ- 1 ಕೆಜಿ
2. ಒಣಮೆಣಸಿನಕಾಯಿ- 6-7
3. ಮೆಣಸು- 8-10
4. ಅರಿಶಿಣ ಪುಡಿ- 1 ಟೀಚಮಚ
5. ಉಪ್ಪು- ರುಚಿಗೆ ತಕ್ಕಷ್ಟು
6. ಜೀರಿಗೆ- 1 ಟೀಚಮಚ
7. ಬೆಳ್ಳುಳ್ಳಿ- 8 ಎಸಳು
8. ಶುಂಠಿ- ಸ್ವಲ್ಪ
9. ಹುಣಸೇಹಣ್ಣಿನ ಪೇಸ್ಟ- 2 ಟೀಚಮಚ
10. ಈರುಳ್ಳಿ- 2 (ಕತ್ತರಿಸಿಕೊಳ್ಳಿ)
11. ಎಣ್ಣೆ- 2 ಟೀಚಮಚ
12. ಬಿಸಿ ನೀರು- 1 1/2 ಕಪ್
ಮಾಡುವ ವಿಧಾನ
1. ಸೀಗಡಿಯನ್ನು ಸ್ವಚ್ಛ ಮಾಡಿಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಜೀರಿಗೆ, ಮೆಣಸು ಮತ್ತು ಒಣ ಮೆಣಸಿನಕಾಯನ್ನು ಹಾಕಿಕೊಳ್ಳಿ.
3.ಇವೆಲ್ಲವನ್ನು ಸಣ್ಣ ಉರಿಯಲ್ಲಿ 3-4 ನಿಮಿಷಗಳವರೆಗೆ ಹುರಿಯಿರಿ.
4. ಬಾಣಲಿಯಲ್ಲಿ ಎಣ್ಣೆಯನ್ನು ಕಾಯಿಸಿಕೊಂಡು ಈರುಳ್ಳಿಯನ್ನು 4-5 ನಿಮಿಷಗಳವರೆಗೆ ಇವು ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
5. ಹುರಿದಿಟ್ಟುಕೊಂಡ ಮಸಾಲೆ ಪದಾರ್ಥಗಳು, ಶುಂಠಿ, ಬೆಳ್ಳುಳ್ಳಿ ಮತ್ತು ಹುರಿದ ಈರುಳ್ಳಿಯನ್ನು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
6.ಬಾಣಲಿಗೆ ಎಣ್ಣೆ ಹಾಕಿ ಕಾದನಂತರ ಈ ಪೇಸ್ಟನ್ನು ಹಾಕಿ 2-3 ನಿಮಿಷಗಳವರೆಗೆ ಕಲಸಿ.
7. ಇದಕ್ಕೆ ಅರಿಶಿಣ ಪುಡಿ, ಉಪ್ಪು, ಹುಣಸೆ ಪೇಸ್ಟ್ ಮತ್ತು ನೀರನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
8. ಇದು ಕುದಿಯಲು ಆರಂಭಿಸುತ್ತದ್ದಂತೆ ಇದಕ್ಕೆ ಸೀಗಡಿಯನ್ನು ಸೇರಿಸಿ ಮುಚ್ಚಳ ಮುಚ್ಚಿ 10-15 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ಒಲೆಯನ್ನು ಆರಿಸಿ.
ಸೀಗಡಿಯ ರುಚಿಕರವಾದ ಪ್ರವಾನ್ ಆ್ಯಂಬೊಟ್ ಟಿಕ್ ಅನ್ನದೊಂದಿಗೆ ಸವಿಯಲು ರೆಡಿ.



Click it and Unblock the Notifications
