Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಯಮ್ಮೀ ಚೈನೀಸ್ ಸ್ಟಿರ್ ಫ್ರೈಡ್ ಚಿಕನ್ ಲೆಗ್ಸ್
ಚೈನೀಸ್ ಫ್ರೈಡ್ ಚಿಕನ್ ಲೆಗ್ಸ್ ತನ್ನದೇ ಆದ ಡಿಫರೆಂಟ್ ರುಚಿಯನ್ನು ಹೊಂದಿರುವ ಖಾದ್ಯವಾಗಿದೆ. ಈ ಚಿಕನ್ ಡ್ರಮ್‌ಸ್ಟಿಕ್ ಅನ್ನು ಸವಿಯುವಾಗ ನಿಮಗೆ ಸ್ವರ್ಗದಲ್ಲಿರುವ ಅನುಭವವಾಗುವುದು ಖಂಡಿತ! ಅಷ್ಟೊಂದು ಸ್ವಾದಿಷ್ಟ ಮತ್ತು ರುಚಿಕರವಾದ ಡಿಶ್ ಇದಾಗಿದೆ.
ಇದು ಹೆಚ್ಚಿನ ಕ್ಯಾಲೋರಿಯನ್ನು ಹೊಂದಿದ್ದು, ನಿಮ್ಮನ್ನು ಹೆಚ್ಚು ದಪ್ಪಗಾಗಿಸುವಲ್ಲಿ ಇದು ಕಾರಣವಾಗಿದೆ. ಆದರೆ ಬೋಲ್ಡ್ ಸ್ಕೈ ನಿಮ್ಮ ಆರೋಗ್ಯವನ್ನು ಗಮನದಲ್ಲಿರಿಸಕೊಂಡೇ ಈ ಆರೋಗ್ಯಕರವಾದ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದೆ.
ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಟೇಸ್ಟಿಯಾಗಿರುವ ಚಿಕನ್ ಫ್ರೈ ಲೆಗ್ ರೆಸಿಪಿಯನ್ನು ಈ ಲೇಖನದಲ್ಲಿ ನಾವು ನಿಮಗಾಗಿ ನೀಡುತ್ತಿದ್ದು ಇದನ್ನು ಖಂಡಿತ ನೀವು ಟ್ರೈ ಮಾಡಲೇಬೇಕು.

ಆಂಧ್ರಾ ಸ್ಪೆಶಲ್ ರೆಸಿಪಿ ಮಟನ್ ಪೆಪ್ಪರ್
ಪ್ರಮಾಣ: 2
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಾಮಾಗ್ರಿಗಳು:
*ಚಿಕನ್ ಲೆಗ್ಸ್ - 4
*ವಿನೇಗರ್ - 2 ಸ್ಪೂನ್
*ಬೆಳ್ಳುಳ್ಳಿ - 5-6 ಎಸಳು (ಕತ್ತರಿಸಿದ್ದು)
*ಹಸಿಮೆಣಸು - 2 (ಕತ್ತರಿಸಿದ್ದು)
*ಸೋಯಾ ಸಾಸ್ - 1 ಸ್ಪೂನ್
*ಕಾರ್ನ್ ಫ್ಲೋರ್ -
*ಈರುಳ್ಳಿ - 1 (ತುಂಡರಿಸಿದ್ದು)
*ಬೆಲ್ ಪೆಪ್ಪರ್ - 1 (ಹೆಚ್ಚಿದ್ದು)
*ಚೈನಿಸ್ ಗ್ರಾಸ್ - 1 ಚಿಟಿಕೆ
*ಎಣ್ಣೆ - 2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
ನೀವು ಟ್ರೈ ಮಾಡಲೇಬೇಕಾದ 10 ಚಿಕನ್ ರೆಸಿಪಿಗಳು!
ಮಾಡುವ ವಿಧಾನ:
1. ವಿನೇಗರ್, ಬೆಳ್ಳುಳ್ಳಿ ಹಾಗೂ ಉಪ್ಪಿನಲ್ಲಿ ಚಿಕನ್ ಲೆಗ್ ಅನ್ನು ನೆನೆಸಿಡಿ. 10 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ.
2. ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಸೋಯಾ ಸಾಸ್, ಹಸಿಮೆಣಸು ಮತ್ತು ಚೈನೀಸ್ ಗ್ರಾಸ್ ಅನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ.
3. ಸೋಯಾ ಮಿಶ್ರಣದಲ್ಲಿ ಚಿಕನ್ ಲೆಗ್ಸ್ ಅನ್ನು ಮುಳುಗಿಸಿ ಮತ್ತು ಕಾರ್ನ್ ಫ್ಲೋರ್ನಲ್ಲಿ ಅದನ್ನು ರೋಲ್ ಮಾಡಿ.
4. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದು ಬಿಸಿಯಾಗುತ್ತಿದ್ದಂತೆ, ಪ್ಯಾನ್‌ನಲ್ಲಿ ಚಿಕನ್ ಲೆಗ್ಸ್ ಅನ್ನು ಸ್ಟೀಮ್ ಮಾಡಿ.
5. ನೀವು ಚಿಕನ್ ಲೆಗ್ಸ್ ಅನ್ನು ಕೆಂಪಗಾಗುವರೆಗೆ ಹುರಿಯಲೂಬಹುದು.
6. ಎರಡು ನಿಮಿಷಗಳ ನಂತರ, ಉರಿಯನ್ನು ಕಡಿಮೆ ಮಾಡಿ ಹಾಗೂ ಈರುಳ್ಳಿ ಮತ್ತು ಬೆಲ್ ಪೆಪ್ಪರ್ ಅನ್ನು ಸೇರಿಸಿ.
7. ಮುಚ್ಚಿ ಮತ್ತು ಚಿಕನ್ ಲೆಗ್ ಗರಿಗರಿಯಾಗುವವರೆಗೆ ಅದನ್ನು ಹುರಿಯಿರಿ.
ಕ್ರಿಸ್ಪಿಯಾಗಿರುವಂತೆ ಚಿಕನ್ ಲೆಗ್ ಅನ್ನು ಹುರಿದುಕೊಳ್ಳಿ ಹೆಚ್ಚು ಹುರಿಯಲು ಹೋಗಬೇಡಿ. ವೈಟ್ ಸಾಸ್‌ನಲ್ಲಿ ಮುಳುಗಿಸಿ ಬಿಸಿ ಬಿಸಿಯಾಗಿ ಸೇವಿಸಿ.



Click it and Unblock the Notifications
