Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಾದದ ಘಮಲನ್ನು ಹೆಚ್ಚಿಸುವ ಕ್ಯಾಪ್ಸಿಕಂ ಚಿಲ್ಲಿ ರೆಸಿಪಿ!
ಕ್ಯಾಪ್ಸಿಕಂ ಜೊತೆಗೆ ಚಿಲ್ಲಿ ಎಗ್ ರೆಸಿಪಿ, ಹೆಸರೆ ಸೂಚಿಸುತ್ತದೆ ಇದು ಯಾವ ಆಹಾರವೆಂದು!!. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಕೇವಲ 20 ನಿಮಿಷಗಳಲ್ಲಿ ಮಾಡಬಹುದಾದ ರುಚಿಕರವಾದ ಖಾದ್ಯವನ್ನು ತಯಾರಿಸುವ ಬಗೆಯನ್ನು ಹಂಚಿಕೊಳ್ಳುತ್ತಿದೆ. ನಿಮ್ಮ ಮನೆಯಲ್ಲಿ ಬಿಳಿಯನ್ನ ಮತ್ತು ಸಾರು ತಯಾರಾಗಿದ್ದಲ್ಲಿ, ಬಾಯಿಯಲ್ಲಿ ನೀರೂರಿಸುವಂತಹ ಈ ಖಾದ್ಯವು ನಿಮ್ಮ ಇಂದಿನ ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮೊಟ್ಟೆಯನ್ನು ಕ್ಯಾಪ್ಸಿಕಂ ಜೊತೆಗೆ ಏಕೆ ಆರಿಸಿಕೊಳ್ಳಲಾಯಿತು ಎಂದರೆ, ಇವೆರಡರಲ್ಲೂ ಪೋಷಕಾಂಶಗಳು ಸಮೃದ್ಧವಾಗಿ ಇರುತ್ತವೆ. ಇವೆರಡು ಪದಾರ್ಥಗಳು ಪ್ರತ್ಯೇಕವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮನ್ನು ಸದೃಢವಾಗಿ ಇರಿಸುತ್ತವೆ. ಬರೀ ಮೊಟ್ಟೆ ತಿನ್ನುವವರಿಗೆ ಕ್ಯಾಪ್ಸಿಕಂ ಮತ್ತಷ್ಟು ರುಚಿಯನ್ನು ನೀಡುತ್ತದೆ. ಹಾಗಾಗಿ ಈ ಮಧ್ಯಾಹ್ನ ಈ ಖಾದ್ಯವನ್ನು ತಯಾರಿಸಿಕೊಳ್ಳಲು ಹಿಂದೆ ಮುಂದೆ ಆಲೋಚಿಸಬೇಡಿ. ಸ್ವಾದದ ರುಚಿಯನ್ನು ದ್ವಿಗುಣಗೊಳಿಸುವ ಕೆಂಪಕ್ಕಿ ಮಶ್ರೂಮ್ ಖಾದ್ಯ

ಈ ಖಾದ್ಯದ ಹೆಚ್ಚುಗಾರಿಕೆ ಎಂದರೆ ಇದಕ್ಕೆ ಹಾಕುವ ಮಸಾಲೆಯು ನಿಮ್ಮ ರುಚಿಗ್ರಂಥಿಗಳಿಗೆ ಹಬ್ಬವನ್ನು ನೀಡುತ್ತದೆ. ಮಸಾಲೆ ಮತ್ತು ಕ್ಯಾಪ್ಸಿಕಂ ಬೆಂದಾಗ ಹೊರಬರುವ ರಸ ಇವೆರಡು ಸೇರಿ ಈ ಖಾದ್ಯದ ರುಚಿಯನ್ನು ಅಮೋಘವನ್ನಾಗಿಸುತ್ತವೆ. ಹಾಗಾದರೆ ಏಕೆ ತಡ? ತಡ ಮಾಡದೆ ರುಚಿಕರವಾದ ಕ್ಯಾಪ್ಸಿಕಂ ಎಗ್ ರೆಸಿಪಿಯನ್ನು ತಯಾರಿಸುವ ಬಗೆಯನ್ನು ತಿಳಿದುಕೊಂಡು ಬರೋಣ ಬನ್ನಿ
ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 18 ನಿಮಿಷಗಳು
ಅಗತ್ಯವಾಗಿರುವ ಪದಾರ್ಥಗಳು
*ಮೊಟ್ಟೆಗಳು - 4
*ಎಣ್ಣೆ - 2 ಟೀ.ಚಮಚ
*ಬೆಳ್ಳುಳ್ಳಿ - 1 ಟೀ.ಚಮಚ
*ಈರುಳ್ಳಿ - 3 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ- 2 (ಕತ್ತರಿಸಿದಂತಹುದು)
*ಚಿಲ್ಲಿ ಸಾಸ್ - 1 ಟೀ.ಚಮಚ
*ಟೊಮೇಟೊ ಸಾಸ್ - 1 ಟೀ.ಚಮಚ
*ಮೆಣಸು - 1 ಟೀ.ಚಮಚ
*ಕ್ಯಾಪ್ಸಿಕಂ - 1 (ಕತ್ತರಿಸಿದಂತಹುದು)
*ಅಜಿನೊಮೊಟೊ - 1 ಚಿಟಿಕೆ
*ಉಪ್ಪು - ಒಂದು ಚಿಟಿಕೆ
*ಈ ರುಚಿಕರವಾದ ಖಾದ್ಯವನ್ನು ನಾಲ್ಕು ಮೊಟ್ಟೆಗಳನ್ನು ಒಡೆದು ಕಲೆಸಿಕೊಳ್ಳೂವ ಮೂಲಕ ಆರಂಭಿಸಿ. ಈ ಮೊಟ್ಟೆಯ ಮಿಶ್ರಣಕ್ಕೆ ಒಂದು ಚಿಟಿಕೆ ಉಪ್ಪು ಹಾಕಿ. ಇದು ಸಿದ್ಧವಾದ ಮೇಲೆ ಇದನ್ನು ತಳ ಆಳವಿರುವ ಬಾಣಲೆಯ ಮೇಲೆ ಹಾಕಿಕೊಂಡು ಹುರಿದುಕೊಳ್ಳಿ.
*ಇದು ಮುಗಿದ ಮೇಲೆ ಹುರಿದ ಮೊಟ್ಟೆಯನ್ನು ಪಕ್ಕದಲ್ಲಿ ಹಾಕಿ ಇಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಅಥವಾ ಮತ್ತೊಂದರಲ್ಲಿ, ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಕಾಯುವವರೆಗೆ ಕಾಯಿರಿ. ಅದಕ್ಕೆ ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ. ಬೆಳ್ಳುಳ್ಳಿಯು ಹೊಂಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ.
*ಈಗ ಇದಕ್ಕೆ ಹಸಿಮೆಣಸಿನ ಕಾಯಿಯನ್ನು ಹಾಕಿ. ಇದೇ ಬಾಣಲೆಗೆ ಕತ್ತರಿಸಿದ ಈರುಳ್ಳಿ ಮತ್ತು ಮೆಣಸಿನಕಾಯಿ ಹಾಗು ಬೆಳ್ಳುಳ್ಳಿಯನ್ನು ಹಾಕಿ. ಈರುಳ್ಳಿಗಳು ಹೊಂಬಣ್ಣಕ್ಕೆ ಬರುವವರೆಗೆ ಕಾಯಿರಿ ನಂತರ ಅದಕ್ಕೆ ಕ್ಯಾಪ್ಸಿಕಂ ಹಾಕಿ. ಚೆನ್ನಾಗಿ ಕಲೆಸಿ ಕೊಡಿ.
* ಇನ್ನು ಇದರ ಮೇಲೆ ಹುರಿದ ಮೊಟ್ಟೆಯನ್ನು ಬಾಣಲೆಗೆ ಹಾಕಿ. ಚಮಚದ ಸಹಾಯದಿಂದ ಇವನ್ನೆಲ್ಲ ಚೆನ್ನಾಗಿ ಕಲೆಸಿಕೊಡಿ. ನಂತರ ಇದಕ್ಕೆ ಚಿಲ್ಲಿ ಸಾಸ್ ಮತ್ತು ಟೊಮೇಟೊ ಸಾಸ್ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. *ತದನಂತರ ಇದಕ್ಕೆ ಮೆಣಸನ್ನು ಹಾಕಿ ಚೆನ್ನಾಗಿ ಕಲೆಸಿಕೊಡಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಆನಂತರ ಇದರ ಮೇಲೆ ಅಜಿನೊಮೊಟೊವನ್ನು ಚಿಮುಕಿಸಿ ಈ ಖಾದ್ಯವನ್ನು ಬಡಿಸಿ.
ಪೋಷಕಾಂಶದ ಸಲಹೆ:
ಕ್ಯಾಪ್ಸಿಕಂ ಒಂದು ಒಳ್ಳೆಯ ತರಕಾರಿ. ತೂಕವನ್ನು ಇಳಿಸಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.



Click it and Unblock the Notifications





