Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟೊಮೆಟೊ ಗಾರ್ಲಿಕ್ ಚಿಕನ್
ಚಿಕನ್ ಆರೋಗ್ಯಕರ, ಆದರೆ ಇದನ್ನು ಹೆಚ್ಚು ಎಣ್ಣೆ ಹಾಕದೆ ಮಾಡಿದರೆ ಮತ್ತಷ್ಟು ಆರೋಗ್ಯಕರ. ಈ ವೀಕೆಂಡ್ ಗೆ ಹೆಚ್ಚೇನು ಖಾರವಿಲ್ಲದ, ಸಮ್ ಥಿಂಗ್ ಡಿಫರೆಂಟ್ ಆದ ಚಿಕನ್ ಗ್ರೇವಿ ಮಾಡಬಯಸುವುದಾದರೆ ಈ ಗಾರ್ಲಿಕ್, ಟೊಮೆಟೊ ಚಿಕನ್ ಟ್ರೈ ಮಾಡಬಹುದು.
ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಚಿಕನ್ ಅರ್ಧ ಕೆಜಿ
ಈರುಳ್ಳಿ 2
ಬೆಳ್ಳುಳ್ಳಿ ಪೇಸ್ಟ್ ಒಂದೂವರೆ ಚಮಚ
ಟೊಮೆಟೊ ಪೇಸ್ಸ್1 ಕಪ್
ಹಸಿ ಮೆಣಸಿನಕಾಯಿ 2
ಕೆಂಪು ಮೆಣಸು1
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
* ಚಿಕನ್ ಅನ್ನು ತೊಳೆದು ಅದಕ್ಕೆ ಉಪ್ಪು ಮತ್ತು ಅರಿಶಿಣ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಇಡಬೇಕು.
* ಈಗ1 ಚಮಚ ಎಣ್ಣೆಯನ್ನು ಸಾರು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್, ಮುರಿದ ಒಣ ಮೆಣಸು ಹಾಕಿ ಸೌಟ್ ನಿಂದ ಹುರಿಯಿರಿ. ಈಗ ಟೊಮೆಟೊ ಪೇಸ್ಟ್ ಹಾಕಿ 2-3 ನಿಮಿಷ ಬಿಸಿ ಮಾಡಿ ಅದಕ್ಕೆ ಚಿಕನ್ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. (ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ).
* ಚಿಕನ್ ಗ್ರೇವಿ ರೀತಿಯಲ್ಲಿ ಆದ ಮೇಲೆ ಉಪ್ಪು ಸರಿಯಾಗಿ ಇದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ಟೊಮೆಟೊ ಗಾರ್ಲಿಕ್ ಚಿಕನ್ ಚಿಕನ್ ರೆಸಿಪಿ ರೆಡಿ.



Click it and Unblock the Notifications
