Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಿಫರೆಂಟ್ ಬಯಸುವವರಿಗಾಗಿ ಈ ಚಿಕನ್ ವಿಂಗ್ಸ್
ಈ ವೀಕೆಂಡ್ ಗೆ ಚಿಕನ್ ಬಳಸಿ ಏನಾದರೂ ಹೊಸ ಅಡುಗೆ ಟ್ರೈ ಮಾಡಿದರೆ ಎಂದು ಬಯಸುವುದಾದರೆ ಈ ಚಿಕನ್ ವಿಂಗ್ಸ್ ತಯಾರಿಸಬಹುದು. ಇದೇ ಮೊದಲ ಬಾರಿ ಈ ಅಡುಗೆಯನ್ನು ತಯಾರಿಸುತ್ತಿದ್ದಾವೆ, ಅಡುಗೆ ಸರಿ ಬರದಿದ್ದರೆ ತಂದ ಚಿಕನ್ ವೇಸ್ಟ್ ಆಗಬಹುದೆಂದು ಎಂಬ ಭಯವಿಲ್ಲದೆ ಇದನ್ನು ತಯಾರಿಸಬಹುದು.
ಚಿಕನ್ ವಿಂಗ್ಸ್ ಅಡುಗೆಯನ್ನು ಈ ಕೆಳಗಿನಂತೆ ಮಾಡಿದರೆ ರೆಸ್ಟೋರೆಂಟ್ ನಲ್ಲಿ ದೊರೆಯುವಷ್ಟೇ ರುಚಿಕರವಾಗಿ ನೀವು ಮಾಡಿದ ಚಿಕನ್ ವಿಂಗ್ಸ್ ಕೂಡ ಇರುತ್ತದೆ. ಚಿಕನ್ ವಿಂಗ್ಸ್ ನ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಚಿಕನ್ ವಿಂಗ್ಸ್ (ಅರ್ಧ ಕೆಜಿಯಷ್ಟು)
1 ಚಮಚ ಶುಂಠಿ ಪೇಸ್ಟ್
1 ಚಮಚ ಬೆಳ್ಳುಳ್ಳಿ ಪೇಸ್ಟ್
1 ಚಮಚ ಮೈದಾ
2 ಚಮಚ ಜೋಳದ ಹಿಟ್ಟು
2 ಮೊಟ್ಟೆ
1/4 ಚಮಚ ಕರಿ ಮೆಣಸಿನ ಪುಡಿ
ಚಿಟಿಕೆಯಷ್ಟು ಸಕ್ಕರೆ
ರುಚಿಗೆ ತಕ್ಕ ಉಪ್ಪು
1 ಚಮಚ ಸೋಯಾ ಸಾಸ್
ಎಣ್ಣೆ
ತಯಾರಿಸುವ ವಿಧಾನ:
* ಚಿಕನ್ ಮತ್ತು ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಬೇಕು.
* ಈಗ ಅದಕ್ಕೆ ಸ್ವಲ್ಪ ದೊಡ್ಡದಾಗಿ ಕತ್ತರಿಸಿದ ಚಿಕನ್ ವಿಂಗ್ಸ್ ಹಾಕಿ ಅರ್ಧ ಗಂಟೆ ಇಡಬೇಕು.
* ಈಗ ಎಣ್ಣೆಯನ್ನು ಬಿಸಿ ಮಾಡಿ, ಕುದಿಯುತ್ತಿರುವ ಎಣ್ಣೆಗೆ ಚಿಕನ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದರೆ ಚಿಕನ್ ವಿಂಗ್ಸ್ ರೆಡಿ.
ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ಹಣ್ಣಿನ ತುಂಡುಗಳನ್ನು ಇಟ್ಟು ಸರ್ವ್ ಮಾಡಲು ಚಿಕನ್ ವಿಂಗ್ಸ್ ರೆಡಿ.



Click it and Unblock the Notifications
