Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಿಕನ್ ಶೀಕ್ ಕಬಾಬ್ ರೆಸಿಪಿ
ಚಿಕನ್ ಕಬಾಬ್ ಕ್ಕಿಂತ ಚಿಕನ್ ಶೀಕ್ ಕಬಾಬ್ ಸ್ವಲ್ಪ ಭಿನ್ನವಾಗಿರುತ್ತದೆ. ಈ ಚಿಕನ್ ಶೀಕ್ ಕಬಾಬ್ ಪ್ರಮುಖವಾಗಿ ಬೀದಿ ಬದಿಯ ಆಹಾರವಾಗಿದ್ದರೂ 5 ಸ್ಟಾರ್ ಹೋಟೆಲ್ ಗಳಲ್ಲಿ ಕೂಡ ದೊರೆಯುತ್ತದೆ. ಇದನ್ನು ಮಾಡಲು ಸ್ವಲ್ಪ ಅಧಿಕ ಶ್ರಮ ಮತ್ತು ಅಧಿಕ ಸಮಯ ಬೇಕಾಗುತ್ತದೆ.
ಆದರೆ ಇದನ್ನು ಮಾಡಲು ಶ್ರಮ ಪಟ್ಟರೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಚಿಕನ್ ಶೀಕ್ ಕಬಾಬ್ ಅನ್ನು ಮನೆಯಲ್ಲಿ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:
ಚಿಕನ್ ಅರ್ಧ ಕೆಜಿ (minced)
ತುಪ್ಪ 2 ಚಮಚ
ಈರುಳ್ಳಿ 1 (ಕತ್ತರಿಸಿದ್ದು)
ಬೆಳ್ಳುಳ್ಳಿ 5 ಎಸಳು
ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ
ಹಸಿಮೆಣಸಿನಕಾಯಿ 4
ಸ್ವಲ್ಪ ಪುದೀನಾ ಎಲೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಖಾರದ ಪುಡಿ 1 ಚಮಚ
ಜೀರಿಗೆ 1 ಚಮಚ
ಲವಂಗ 3-4
ಚಕ್ಕೆ 1
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಕಡಿಮೆ ಉರಿ ಮಾಡಿಕೊಂಡು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತಣ್ಣಗಾಗಲು ಇಡಬೇಕು.
2. ನಂತರ ಏಲಕ್ಕಿ, ಚಕ್ಕೆ, ಲವಂಗ, ಜೀರಿಗೆ ಇವುಗಳನ್ನು ಈ ಮಸಾಲೆಗಳನ್ನು ಹುರಿದಿಡಬೇಕು.
3. ಈರುಳ್ಳಿ ತಣ್ಣಗಾದ ನಂತರ ಅದನ್ನು ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಬೇಕು. ನಂತರ ಮಸಾಲೆ ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಬೇಕು.
4. ನಂತರ ಈ ಮಸಾಲೆ ಮಿಶ್ರಣವನ್ನು ಚಿಕನ್ ಜೊತೆ ಹಾಕಿ 1 ಚಮಚ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು, ಒಂದು ಚಮಚ ತುಪ್ಪ, ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಹಾಕಿ ಮಿಶ್ರಣ ಮಾಡಬೇಕು. 2 ಚಮಚ ಕಡಲೆ ಹಿಟ್ಟು ಹಾಕಿ ಇದರ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತದೆ.
5. ನಂತರ ಪಾತ್ರೆಯ ಬಾಯಿ ಮುಚ್ಚಿ 3-4 ಗಂಟೆಗಳ ಕಾಲ ಇಡಬೇಕು. ಫ್ರಿಜ್ ನಲ್ಲಿ ಬೇಕಾದರೆ ಇಡಬಹುದು. ಫ್ರಿಜ್ ನಲ್ಲಿಟ್ಟರೆ ಬೇಯಿಸುವ ಒಂದು ಗಂಟೆ ಮುನ್ನ ಫ್ರಿಜ್ ನಿಂದ ಹೊರತೆಗೆದು ಇಡಬೇಕು.
6. ನಂತರ ಇದನ್ನು ಕಬ್ಬಿಣದ ಕಡ್ಡಿಗೆ ಮಸಾಲೆ ಮಿಶ್ರಿತ ಚಿಕನ್ ಅದ್ದಿ ಕೆಂಡದಲ್ಲಿ ಬೇಯಿಸಿಬಹುದು.
ಇದನ್ನು ಮೈಕ್ರೋ ಓವನ್ ನಲ್ಲಿ ಮಾಡುವುದಾದರೆ 350 ಡಿಗ್ರಿ ಉಷ್ಣತೆಗೆ ಮೊದಲೇ ಬಿಸಿ ಮಾಡಿ ನಂತರ ತಯಾರಿಸಬೇಕು.



Click it and Unblock the Notifications
