Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿಕನ್ ನಿಹಾರಿ-ಅತ್ಯಂತ ಸವಿರುಚಿಯ ಅಡುಗೆ
ನಿಹಾರಿ ಅಡುಗೆಯನ್ನು ಸಾಮಾನ್ಯವಾಗಿ ಮಟನ್ ನಿಂದ ಹೆಚ್ಚಾಗಿ ಮಾಡಲಾಗುವುದು, ಆದರೆ ಚಿಕನ್ ಬಳಸಿ ಕೂಡ ನಿಹಾರಿ ಅಡುಗೆಯನ್ನು ಮಾಡಬಹುದು. ನಿಹಾರಿ ಅಡುಗೆಯ ರುಚಿಗೆ ನಿಹಾರಿ ಅಡುಗೆಯೇ ಸಾಟಿ.
ಮಸಾಲೆ ಪದಾರ್ಥಗಳನ್ನು ಸ್ಪೆಷಲ್ ಆಗಿ ಮಿಕ್ಸ್ ಮಾಡುವ ಈ ನಿಹಾರಿ ಅಡುಗೆಯ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಚಿಕನ್ 1 ಕೆಜಿ
ಈರುಳ್ಳಿ 3
ಶುಂಠಿ ಪೇಸ್ಟ್ 1 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಖಾರದ ಪುಡಿ 1 ಚಮಚ(ಖಾರಕ್ಕೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ 1 ಚಮಚ
ಕೊತ್ತಂಬರಿ ಸೊಪ್ಪು (ಸ್ವಲ್ಪ)
ಕರಿ ಬೇವಿನ ಎಲೆ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ತುಪ್ಪ 1 ಚಮಚ
ರುಚಿಗೆ ತಕ್ಕ ಉಪ್ಪು
ನೀರು 2 ಕಪ್
ಎಣ್ಣೆ
ನಿಹಾರಿ ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು
ಜೀರಿಗೆ 2 ಚಮಚ
ಸೋಂಪು 2 ಚಮಚ
ಏಲಕ್ಕಿ 2
ಲವಂಗ 4-5
ನಟ್ ಮಗ್ 1-2
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಸ್ವಲ್ಪ ಶುಂಠಿ
ತಯಾರಿಸುವ ವಿಧಾನ:
* ಚಿಕನ್ ಅನ್ನು ಶುದ್ಧ ಮಾಡಿ.
* ನಿಹಾರಿ ಮಸಾಲೆ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.
* ಈಗ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದರಲ್ಲಿ ಚಿಕನ್ ಹಾಕಿ ಚಿಕನ್ ಸ್ವಲ್ಪ ಕಂದು ಬಣ್ಣ ಬರುವವರೆಗೆ(10 ನಿಮಿಷ) ಫ್ರೈ ಮಾಡಿ. ನಂತರ ಉರಿಯಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಚಿಕನ್ ಬಿಸಿ ಮಾಡಿದ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಕರಿ ಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್,ಅರಿಶಿಣ, ಕೊತ್ತಂಬರಿ ಪುಡಿ, ಖಾರದ ಪುಡಿ, 1 ಚಮಚ ನಿಹಾರಿ ಪೇಸ್ಟ್ ಸೇರಿಸಿ ಅರ್ಧ ಕಪ್ ನೀರು ಹಾಕಿ ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ 2 ನಿಮಿಷ ಬಿಸಿ ಮಾಡಿ.
* ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ.
* ಅರ್ಧ ಕಪ್ ನೀರಿಗೆ 2 ಚಮಚ ಗೋಧಿ ಹಿಟ್ಟು ಹಾಕಿ ಕಲೆಸಿ ಅದನ್ನು ಚಿಕನ್ ಜೊತೆ ಹಾಕಿ ಮೀಡಿಯಂ ಉರಿಯಲ್ಲಿ ಬೇಯಿಸಿ (ಈ ರೀತಿ ಬೇಯಿಸುವಾಗ ಪಾತ್ರೆಯ ಬಾಯಿ ಮುಚ್ಚಿರಿ, ಆಗಾಗ ಸೌಟ್ ನಿಂದ ಆಡಿಸಿ ನಂತರ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ).
* ಚಿಕನ್ ಬೆಂದ ನಂತರ ಉರಿಯಿಂದ ಇಳಿಸಿ.
* ಈಗ ಮತ್ತೊಂದು ಚಿಕ್ಕ ಪಾತ್ರೆಯಲ್ಲಿ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಉಳಿದ ನಿಹಾರಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿದು ಇದನ್ನು ಚಿಕನ್ ಸಾರು ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ನಿಹಾರಿ ರೆಡಿ.



Click it and Unblock the Notifications
