Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರವಾದ ಚಿಕನ್ ಮೊಘಲಾಯಿ ರೆಸಿಪಿ
ಚಿಕನ್ ನಿಂದ ದಿನಾ ಸಾಮಾನ್ಯವಾಗಿ ಕಬಾಬ್, ಚಿಕನ್ ಸಾರು, ಚಿಕನ್ ಫ್ರೈ ಅಂತ ಮಾಡುತ್ತಿರುತ್ತೇವೆ. ಇದರಿಂದ ಸ್ವಲ್ಪ ವಿಶೇಷ ರೀತಿಯ ಅಡುಗೆ ಮಾಡಬಯಸುವುದಾದರೆ ಬಟರ್ ಚಿಕನ್, ಚಿಕನ್ ಮೊಘಲಾಯಿ, ಚಿಕನ್ ತುಪ್ಪದ ರೋಸ್ಟ್ ಹೀಗೆ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಇವತ್ತು ನಾವು ಚಿಕನ್ ಮೊಘಲಾಯಿ ತಯಾರಿಸುವ ವಿಧಾನ ತಿಳಿಯೋಣ, ಇದನ್ನು ತಯಾರಿಸಲು ವಿಶೇಷವಾದ ಸಾಮಾಗ್ರಿಗಳು ಬೇಕಾಗಿಲ್ಲ, ಸಾಮಾನ್ಯವಾಗಿ ಚಿಕನ್ ಮಾಡಲು ಬಳಸುವ ಸಾಮಾಗ್ರಿಗಳಿಂದಲೇ ಇದನ್ನು ತಯಾರಿಸಬಹುದು. ಇದನ್ನು ರುಚಿಕರವಾಗಿ ತಯಾರಿಸುವ ಸುಲಭ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
* ಬೋನ್‌ಲೆಸ್ ಚಿಕನ್ 1/2 ಒಂದು ಕೆಜಿ(ಸ್ಕಿನ್ ತೆಗೆದಿರುವಂತಹದ್ದು)
* ಈರುಳ್ಳಿ 2 (ಉದ್ದುದ್ದವಾಗಿ ಕತ್ತರಿಸಿದ್ದು)
* ಏಲಕ್ಕಿ3 ಮತ್ತು ಸ್ವಲ್ಪ ಡಾಲ್ಚಿನಿ
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಒಂದೊಂದು ಚಮಚ
* ಕೊತ್ತಂಬರಿ ಪುಡಿ 1/2 ಚಮಚ
* ಜೀರಿಗೆ ಪುಡಿ 1/2 ಚಮಚ
* ಮೆಣಸಿನ ಪುಡಿ 1 ಚಮಚ
* ಗರಂ ಮಸಾಲ 1 ಚಮಚ
* ಸಿಪ್ಪೆ ತೆಗೆದ ಬಾದಾಮ್ 10
* ಹಾಲಿನ ಕೆನೆ 5-6 ಚಮಚ
* ತುಪ್ಪ:3 ಚಮಚ
* ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
1. ಸ್ಕಿನ್ ಲೆಸ್ ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿಡಬೇಕು.
2. ನಂತರ ಬಾದಾಮಿಯನ್ನು ಪೇಸ್ಟ್ ರೀತಿ ಒಂದು ಚಿಕ್ಕ ಪಾತ್ರೆಯಲ್ಲಿ ತೆಗೆದಿಡಬೇಕು.
3. ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ಶುಂಠಿ ಬೆಳ್ಳುಳ್ಳಿ ಪೇಸ್ಟ್, ದಾಲ್ಚಿನ್ನಿ ಹಾಗೂ ಏಲಕ್ಕಿ ಹಾಕಿ 1-2 ನಿಮಿಷ ಹುರಿಯಬೇಕು.
5. ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಕಿ ತುಪ್ಪ ಮಿಶ್ರಣದ ಮೇಲೆ ತೇಲುವವರೆಗೆ ಹುರಿಯಬೇಕು.
6. ಈ ಮಿಶ್ರಣಕ್ಕೆ ಕೋಳಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಸೌಡ್ ನಿಂದ ಆಡಿಸಬೇಕು. ನಂತರ ರುಚಿಗೆ ತಕ್ಕ ಉಪ್ಪು ಹಾಕಿ 1/4 ಗ್ಲಾಸ್ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಆಗಾಗ ಸೌಟ್ ನಿಂದ ಆಡಿಸುತ್ತಾ ಇರಬೇಕು.
7. ಬೆಂದ ಮಾಂಸಕ್ಕೆ ಹಾಲಿನ ಕೆನೆ ಮತ್ತು ಬಾದಾಮಿ ಪೇಸ್ಟ್ ಮಿಶ್ರ ಮಾಡಿ ಉರಿಯಿಂದ ತೆಗೆಯಬೇಕು. ನಂತರ ಗರಂ ಮಸಾಲ ಪುಡಿಯನ್ನು ಉದುರಿಸಿ ಪಾತ್ರೆಯ ಬಾಯಿಯನ್ನು ಮುಚ್ಚಿ 5-10ನ ನಿಮಿಷ ಇಡಬೇಕು.
ಈಗ ಚಿಕನ್ ಮೊಘಲಾಯಿ ರೆಡಿ. ಇದನ್ನು ಚಪಾತಿ ಅಥವಾ ನಾನ್ ರೊಟ್ಟಿ ಜೊತೆ ತಿನ್ನಲು ಸೂಪರ್ ಆಗಿರುತ್ತದೆ.



Click it and Unblock the Notifications
