Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಚಿಕನ್ ಗ್ರೀನ್ ಆನಿಯನ್ ಸಾಸ್ ಸೂಪರ್ ಡಿಶ್!
ಕಚೇರಿಯ ಕೆಲಸ ಮುಗಿಸಿ ನಿಮಗೆ ತುಂಬಾ ಸುಸ್ತಾಗಿದೆ ಮತ್ತು ರಾತ್ರಿಗೇನಾದರೂ ಸ್ಪೆಶಲ್ ಮಾಡುವ ಆಲೋಚನೆ ನಿಮ್ಮದಾಗಿದ್ದಲ್ಲಿ ನೀವು ಹೊಸ ಡಿಶ್ ಬಗ್ಗೆ ಯೋಚಿಸಲೇಬೇಕಾಗುತ್ತದೆ. ನಿಮ್ಮ ತಲೆಗೆ ಯೋಚನೆ ಹೊಳೆಯದಿದ್ದಲ್ಲಿ ಚಿಂತಿಸದಿರಿ.
ಬೋಲ್ಡ್ ಸ್ಕೈ ನಿಮ್ಮ ಯೋಚನೆಯ ಭಾರವನ್ನು ಹಗುರಗೊಳಿಸಿ ನಿಮಗೆ ರುಚಿಕರವಾದ ರಾತ್ರಿಯೂಟವನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತದೆ. ಯಾವಾಗಲೂ ಒಂದೇ ಬಗೆಯ ಊಟ ಸಪ್ಪೆತನವನ್ನು ತರುತ್ತದೆ. ಅದಕ್ಕಿಂತ ಟೇಸ್ಟೀ ಮತ್ತು ಆರೋಗ್ಯವಾಗಿರುವ ಸರಳ ರೆಸಿಪಿಯನ್ನು ಎಲ್ಲರೂ ಇಷ್ಟಪಡುತ್ತಾರೆ.
ಅಂತಹ ರೆಸಿಪಿ ಯಾವುದಪ್ಪಾ ಎಂದು ನೀವು ಚಿಂತಿಸಬೇಕಾಗಿಲ್ಲ. ನಿಮ್ಮನ್ನು ಮನೆಯಲ್ಲಿ ಎಲ್ಲರೂ ಹೊಗಳುವಂತೆ ಮಾಡುವುದಕ್ಕಾಗಿಯೇ ನಾವಿಂದು ಸ್ಪೆಶಲ್ ಡಿಶ್ ಮೂಲಕ ನಿಮ್ಮ ಮುಂದಿದ್ದೇವೆ. ಚಿಕನ್ ಗ್ರೀನ್ ಆನಿಯನ್ ಸಾಸ್ ರೆಸಿಪಿ ಎಂಬುದು ಈ ವಿಶೇಷ ಭಕ್ಷ್ಯದ ಹೆಸರು. ಚಿಕನ್ ಅನ್ನು ಗ್ರೀನ್ ಆನಿಯನ್ ಸಾಸ್‌ನಲ್ಲಿ ತಯಾರಿಸುವುದು. ನಿಮಗೆ ಇದು ತಯಾರಿಸಲು ಸರಳವಾಗಿದೆ ಮತ್ತು ನಾಲಗೆಗೆ ಮುದವನ್ನು ನೀಡುತ್ತದೆ ಕೂಡ.

ಹಾಗಿದ್ದರೆ ತಡ ಮಾಡದೇ ಮಾಡುವ ವಿಧಾನವನ್ನು ಬರೆದುಕೊಳ್ಳಿ. ಮತ್ತು ಇಂದೇ ತಯಾರಿಸಿ
ಯಮ್ಮೀ ಚೈನೀಸ್ ಸ್ಟಿರ್ ಫ್ರೈಡ್ ಚಿಕನ್ ಲೆಗ್ಸ್
ಪ್ರಮಾಣ: 2
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಾಮಾಗ್ರಿಗಳು:
*ಚಿಕನ್ ತುಂಡುಗಳು - 4
*ಬೆಣ್ಣೆ - 2 ಸ್ಪೂನ್
*ಸ್ಪ್ರಿಂಗ್ ಈರುಳ್ಳಿ - 4 (ಕತ್ತರಿಸಿದ್ದು)
*ಬೆಳ್ಳುಳ್ಳಿ ಎಸಳು - 6-7 (ಇಡಿಯಾಗಿರುವಂಥದ್ದು)
*ಕರಿಮೆಣಸು - 1 ಸ್ಪೂನ್ (ಹುಡಿಮಾಡಿದ್ದು)
*ಕ್ರೀಮ್ - 1 ಕಪ್
*ಉಪ್ಪು - ರುಚಿಗೆ ತಕ್ಕಷ್ಟು
*ಸಕ್ಕರೆ - 1/2 ಸ್ಪೂನ್
*ಸಿಲಂತ್ರೋ ಎಲೆಗಳು - 1 ಕಟ್ಟು (ಕತ್ತರಿಸಿದ್ದು)
ಮಾಡುವ ವಿಧಾನ:
1. ಬೆಣ್ಣೆಯನ್ನು ಪ್ಯಾನ್‌ನಲ್ಲಿ ಕರಗಿಸಿ ಮತ್ತು ಇದಕ್ಕೆ ಸಕ್ಕರೆ ಸೇರಿಸಿ ಕಂದು ಬಣ್ಣಕ್ಕೆ ತಿರುಗಿಸಿಕೊಳ್ಳಿ.
2.ಈಗ ಚಿಕನ್ ತುಂಡುಗಳನ್ನು ಇದಕ್ಕೆ ಹಾಕಿ ಮತ್ತು ಉರಿ ಕಡಿಮೆಗೊಳಿಸಿ.
3.ಕಡಿಮೆ ಉರಿಯಲ್ಲಿ ಚಿಕನ್ ತುಂಡುಗಳನ್ನು 4-5 ನಿಮಿಷಗಳ ಕಾಲ ಬೇಯಿಸಿ.
4.ಚಿಕನ್ ತುಂಡುಗಳನ್ನು ಆಗಾಗ್ಗೆ ತಿರುಗಿಸುತ್ತಿರಿ ಇದರಿಂದ ಅದು ಪೂರ್ಣವಾಗಿ ಬೇಯುತ್ತದೆ.
5.ಚಿಕನ್ ಬೆಯುತ್ತಿದ್ದಂತೆ ರಸ ಬಿಡಲು ಪ್ರಾರಂಭಿಸುತ್ತದೆ ಇದೇ ಸಮಯದಲ್ಲಿ ಸ್ಪ್ರಿಂಗ್ ಈರುಳ್ಳಿನ ಹಸಿರು ಮತ್ತು ಬಿಳಿ ಭಾಗವನ್ನು ಸೇರಿಸಿ.
6.ಬೆಳ್ಳುಳ್ಳಿಯನ್ನು ರುಚಿಗಾಗಿ ಸೇರಿಸಿ. ಉಪ್ಪು ಹಾಕಿ ಮತ್ತು 5-7 ನಿಮಿಷಗಳ ಕಾಲ ಬೇಯಲು ಬಿಡಿ.
7. ಕ್ರೀಂ ಸೇರಿಸಿ ಮತ್ತು ಕಾಳುಮೆಣಸಿನ ಹುಡಿಯನ್ನು ಹಾಕಿ. ಕ್ರೀಂ ನಲ್ಲಿ ಚೆನ್ನಾಗಿ ತಿರುಗಿಸಿ ಮತ್ತು ಮಂದ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿ.
8. ಸಿಲಂತ್ರೋ ಎಲೆಗಳಿಂದ ಡಿಶ್ ಅನ್ನು ಅಲಂಕರಿಸಿ.
ರೋಸ್ಟ್ ಮಾಡಿದ ಟೊಮೇಟೊಗಳನ್ನು ಸೇರಿಸಿ. ಮತ್ತು ಬಿಸಿಬಿಸಿಯಾಗಿ ಈ ರೆಸಿಪಿಯನ್ನು ಸರ್ವ್ ಮಾಡಿ.



Click it and Unblock the Notifications
