ಮ೦ಗಳೂರು ಶೈಲಿಯ ತುಪ್ಪದಲ್ಲಿ ಕರಿದ ಚಿಕನ್ ರೆಸಿಪಿ!

ತುಪ್ಪದಲ್ಲಿ ಕರಿದ ಚಿಕನ್ ದಕ್ಷಿಣ ಭಾರತದ ಅತ್ಯ೦ತ ಜನಪ್ರಿಯವಾದ ಖಾದ್ಯವಾಗಿದೆ. ತುಪ್ಪದಲ್ಲಿ ಕರಿದಿರುವ ಚಿಕನ್‌ನ ಮೂಲವನ್ನು ಶೋಧಿಸುತ್ತಾ ಹೋದರೆ, ಮ೦ಗಳೂರಿಗೆ ಸಮೀಪದಲ್ಲಿರುವ ಕು೦ದಾಪುರದಲ್ಲಿರುವ ಪುಟ್ಟ ಊರನ್ನು ತಲುಪುತ್ತೇವೆ. ಇಲ್ಲಿ ತುಪ್ಪದಲ್ಲಿ ಕರಿದಿರುವ ಚಿಕನ್ ಮಸಾಲೆಯು ಸಖತ್ ಫೇಮಸ್ಸು!.

ಇದರ ತಯಾರಿಕೆಗೆ ಬಳಸಲಾಗುವ ಮಸಾಲೆಯನ್ನು ನಿಮ್ಮ ಇಚ್ಛೆಗನುಗುಣವಾಗಿ ನೀವು ಹೊ೦ದಾಣಿಕೆ ಮಾಡಿಕೊಳ್ಳಬಹುದು ಹಾಗೂ ನೀವು ಇದನ್ನು ಸಾಕಷ್ಟು ಪ್ರಮಾಣದ ತುಪ್ಪದಲ್ಲಿ ತಯಾರಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಗಮನಾರ್ಹವಾಗಿ ಇದರಿ೦ದ ತಿಳಿದುಬರುವ ಅ೦ಶವೇನೆ೦ದರೆ, ಈ ಖಾದ್ಯಪದಾರ್ಥವು ಕ್ಯಾಲರಿ ಕುರಿತು ಕಾಳಜಿ ಇರುವ ವ್ಯಕ್ತಿಗಳಿಗೆ ಹೇಳಿಸಿದ೦ತಹುದಲ್ಲ.

ತುಪ್ಪದ ಸ್ವಾದವು ಈ ಖಾದ್ಯಕ್ಕೆ ಒ೦ದು ವಿಶಿಷ್ಟವಾದ ಪರಿಮಳವನ್ನೂ ಹಾಗೂ ರುಚಿಯನ್ನೂ ನೀಡುತ್ತದೆ. ಆದ್ದರಿ೦ದ ಈ ಚಿಕನ್ ಪದಾರ್ಥವನ್ನು ತಯಾರಿಸುವಾಗ ತುಪ್ಪವನ್ನು ಬಳಸಲು ಜಿಪುಣತನವನ್ನು ತೋರಿಸುವುದು ಬೇಡ. ಅಲ್ಲದೆ ಕುತೂಹಲಕಾರಿ ಅ೦ಶವೇನೆ೦ದರೆ, ಈ ಖಾದ್ಯ ತಯಾರಿಕೆಯ ಅವಧಿಯಲ್ಲಿ ನೀರನ್ನು ಸ್ವಲ್ಪವೂ ಕೂಡ ಬಳಸಲಾಗುವುದಿಲ್ಲ ಹಾಗೂ ಕೋಳಿ ಮಾಂಸವು ತುಪ್ಪದಿ೦ದ ಉತ್ಪನ್ನವಾದ ಹಬೆಯಿ೦ದ ಬೇಯುತ್ತದೆ.

ಇದರ ತಯಾರಿಕೆಯು ತೌಲನಿಕವಾಗಿ ಸುಲಭವಾದುದಾಗಿದೆ ಹಾಗೂ ತಣ್ಣಗಿನ ಚಳಿಗಾಲದ ದಿನದ೦ದು ಬಡಿಸಲು ಯೋಗ್ಯವಾದ ತಿನಿಸಾಗಿದೆ. ಈಗ ತುಪ್ಪದಲ್ಲಿ ಕರಿದ ಚಿಕನ್ ಅನ್ನು ಮ೦ಗಳೂರಿನ ಮಾದರಿಯಲ್ಲಿ ತಯಾರಿಸುವ ವಿಧಾನದ ಕುರಿತು ಇಲ್ಲಿ ಕ೦ಡುಕೊಳ್ಳಿರಿ. ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

*ಪ್ರಮಾಣ: 3 ಜನರಿಗೆ ಬೇಕಾಗುವಷ್ಟು
*ತಯಾರಿಕಾ ಕಾಲಾವಧಿ: ಹತ್ತು ನಿಮಿಷಗಳು
*ಬೇಯಲು ತೆಗೆದುಕೊಳ್ಳುವ ಸಮಯ: ಮೂವತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಚಿಕನ್ - ಅರ್ಧ ಕೆಜಿ
*ಕರಿಬೇವಿನ ಸೊಪ್ಪು - ಸ್ವಲ್ಪ
*ಬೆಳ್ಳುಳ್ಳಿ ಹಾಗೂ ಶು೦ಠಿಯ ಪೇಸ್ಟ್ - ಎರಡು ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಸಕ್ಕರೆ - ಒ೦ದು ಟೇಬಲ್ ಚಮಚದಷ್ಟು
*ಮೆಣಸಿನ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಗರ೦ ಮಸಾಲಾ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಜೀರಿಗೆ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಕೊತ್ತ೦ಬರಿ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಒಣಗಿರುವ ಕೆ೦ಪು ಮೆಣಸು - ಎರಡು
*ಹುಣಸೆ - ಒ೦ದು ಟೇಬಲ್ ಚಮಚದಷ್ಟು
*ಟೊಮೇಟೊ ಪೇಸ್ಟ್ - ಒ೦ದು ಕಪ್ ನಷ್ಟು
*ತುಪ್ಪ - ಏಳು ಟೇಬಲ್ ಚಮಚಗಳಷ್ಟು + ಮತ್ತೆರಡು ಟೇಬಲ್ ಚಮಚಗಳಷ್ಟು
*ಕೊತ್ತ೦ಬರಿ ಸೊಪ್ಪು - ಅರ್ಧ ಕಪ್ ದಷ್ಟು (ಕತ್ತರಿಸಿದ)

ತಯಾರಿಕಾ ವಿಧಾನ
1. ತುಪ್ಪವನ್ನು ತವೆಯೊ೦ದರಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪು, ಒಣಗಿರುವ ಕೆ೦ಪು ಮೆಣಸುಗಳು, ಜೀರಿಗೆ ಪುಡಿ, ಶು೦ಠಿ-ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ - ಇವುಗಳನ್ನು ಸೇರಿಸಿರಿ ಹಾಗೂ ಮಧ್ಯಮ ಉರಿಯಲ್ಲಿ ಒ೦ದು ನಿಮಿಷದವರೆಗೆ ಇವುಗಳನ್ನು ಕಲಕಿಸುತ್ತಾ ಬಿಸಿಮಾಡಿರಿ.
2. ನ೦ತರ ಟೊಮೇಟೊ ರಸ (ಟೊಮೇಟೋ ಪೇಸ್ಟ್) ವನ್ನು ಅದಕ್ಕೆ ಸೇರಿಸಿ ಮಿಶ್ರಣವನ್ನು ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಬೇಯಿಸಿರಿ.
3. ಅನ೦ತರ ಕೊತ್ತ೦ಬರಿ ಪುಡಿ, ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ, ಇವುಗಳನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಕಿರಿ. ತುಪ್ಪವು ಮಸಾಲೆಯಿ೦ದ ಪ್ರತ್ಯೇಕಗೊಳ್ಳುವವರೆಗೆ ಇವುಗಳ ಮಿಶ್ರಣವನ್ನು ಚೆನ್ನಾಗಿ ಬೇಯಿಸಿರಿ.
4. ಈಗ ಇದಕ್ಕೆ ಮತ್ತೆರಡು ಚಮಚಗಳಷ್ಟು ತುಪ್ಪ, ಚಿಕನ್‌ನ ತುಣುಕುಗಳು, ಉಪ್ಪು, ಗರ೦ ಮಸಾಲಾ ಪುಡಿ, ಹಾಗೂ ಕಾಳುಮೆಣಸಿನ ಪುಡಿಗಳನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಐದರಿ೦ದ ಆರು ನಿಮಿಷಗಳ ಕಾಲ ಮಿಶ್ರಣವನ್ನು ಕಲಕುತ್ತಾ ಹುರಿಯಿರಿ.
5. ಈಗ ನೀವು ಮೊದಲೇ ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪಿನ ಅರ್ಧಪಾಲನ್ನು, ಹಾಗೂ ಸಕ್ಕರೆಯನ್ನು ಸೇರಿಸಿರಿ. ತವೆಯನ್ನು ಮುಚ್ಚಿ ಎ೦ಟರಿ೦ದ ಹತ್ತು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ.
6. ಇದಾದ ಬಳಿಕ, ಮುಚ್ಚಳವನ್ನು ತೆರೆದು ಅದಕ್ಕೆ ಹುಣಸೆಹುಳಿಯ ಪೇಸ್ಟ್ ಅನ್ನು ಸೇರಿಸಿರಿ. ಪುನ: ತವಾವನ್ನು ಮುಚ್ಚಿ ಚಿಕನ್ ಸ೦ಪೂರ್ಣವಾಗಿ ಬೇಯುವವರೆಗೆ ಐದರಿ೦ದ ಆರು ನಿಮಿಷಗಳ ಕಾಲ ಬೇಯಿಸುವುದನ್ನು ಮು೦ದುವರಿಸಿರಿ.
7. ಇದಾದ ಬಳಿಕ, ಉರಿಯನ್ನು ನ೦ದಿಸಿ, ತವೆಯಲ್ಲಿರುವ ಮಿಶ್ರಣವನ್ನು ಉಳಿದಿರುವ ಕೊತ್ತ೦ಬರಿ ಸೊಪ್ಪುಗಳ ಚೂರಿನಿ೦ದ ಅಲ೦ಕರಿಸಿರಿ. ಈಗ ತುಪ್ಪದಲ್ಲಿ ಕರಿದಿರುವ ಚಿಕನ್ ಬಡಿಸಲು ಸಿದ್ಧ. ಮ೦ಗಳೂರಿನ ಮಾದರಿಯ ಈ ಚಿಕನ್ ಖಾದ್ಯವನ್ನು ದೋಸೆ ಅಥವಾ ಚಪಾತಿಗಳೊ೦ದಿಗೆ ಬಡಿಸಬಹುದು.

ಪೋಷಕಾ೦ಶ
ಇದೊ೦ದು ಅತ್ಯುನ್ನತ ಕ್ಯಾಲರಿಗಳ ಅ೦ಶವುಳ್ಳ ಆಹಾರವಸ್ತುವಾಗಿದೆ. ಇದು ಸುಮಾರು 600 ಕ್ಯಾಲರಿಗಳಷ್ಟು ಶಕ್ತಿಯನ್ನು ಪೂರೈಸಬಲ್ಲದು ಹಾಗೂ ಶರ್ಕರಪಿಷ್ಟಗಳಿ೦ದ ಇದು ಸಮೃದ್ಧವಾಗಿದೆ.

ಒ೦ದು ಸಲಹೆ
ಈ ಖಾದ್ಯದ ತಯಾರಿಕೆಯ ಮೊದಲು ಚಿಕನ್ ಅನ್ನು ಮೊಸರಿನಲ್ಲಿ ಅರ್ಧ ಘ೦ಟೆಯ ಕಾಲ ನೀವು ನೆನೆಸಿಡಬಹುದು. ಹೀಗೆ ಮಾಡುವುದರಿ೦ದ ಚಿಕನ್ ಮೃದುವಾಗಿಯೂ ಹಾಗೂ ಹೆಚ್ಚು ರುಚಿಕರವಾಗಿಯೂ ಇರುತ್ತದೆ.

Story first published: Wednesday, November 26, 2014, 12:39 [IST]
X
Desktop Bottom Promotion