Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರ ಹಾಗೂ ಆರೋಗ್ಯಕರ ಈ ಬ್ರೊಕೋಲಿ ಚಿಕನ್

ಬೇಕಾಗುವ ಸಾಮಾಗ್ರಿಗಳು:
* ಚಿಕನ್ ಒಂದು ಕೆಜಿ (ಸ್ವಲ್ಪ ದೊಡ್ಡ ತುಂಡುಗಳು)
* ಬೆಳ್ಳುಳ್ಳಿ ಎಸಳು 5-6 (ಜಜ್ಜಿದ)
* ಈರುಳ್ಳಿ 2
* ಹಸಿಮೆಣಸಿನ ಕಾಯಿ 2 (ಕತ್ತರಿಸಿದ್ದು)
* ಬ್ರೊಕೋಲಿ ಅರ್ಧ ಅಥವಾ 1
* ಸೋಯಾ ಸಾಸ್ 2 ಚಮಚ
* ವಿನಿಗರ್ 1 ಚಮಚ
* ಮೆಣಸಿನ ಪುಡಿ ಅರ್ಧ ಚಮಚ (ಖಾರಕ್ಕೆ ತಕ್ಕಷ್ಟು)
* ಅರಿಶಿಣ ಪುಡಿ ಅರ್ಧ ಚಮಚ
* ಪುದೀನಾ ಸ್ವಲ್ಪ
* ಎಣ್ಣೆ
*ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಸ್ವಲ್ಪ ದೊಡ್ಡವಿರುವ ಪಾತ್ರೆಯನ್ನು ತೆಗೆದುಕೋಂಡು ಅದರಲ್ಲಿ 7-8 ಚಮಚ ಎಣ್ಣೆ ಹಾಕಿ ಅದರಲ್ಲಿ ಚಿಕನ್ ಹಾಕಿ ಚಿಕನ್ ಸ್ವಲ್ಪ ಕಂಡು ಬಣ್ಣ ಬರುವವರೆಗೆ ಹುರಿಯಬೇಕು.
2. ಈಗ ಚಿಕನ್ ತುಂಡುಗಳನ್ನು ತೆಗೆದು ಪೇಪರ್ ನಲ್ಲಿ ಹಾಕಿಡಬೇಕು.
3. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಹುರಿಯಬೇಕು. ಹೀಗೆ ಹುರಿಯುವಾಗ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿಡಬೇಕು.
4. ಈಗ ಅದಕ್ಕೆ ಶುಚಿ ಮಾಡಿದ ಬ್ರೊಕೋಲಿ ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ , ಪುದೀನಾ ಹಾಕಿ ಬೇಯಿಸಬೇಕು. ಬ್ರಕೋಲಿ ಸ್ವಲ್ಪ ಬೇಯುವಾಗ ಬೇಯಿಸಿದ ಚಿಕನ್ ತುಂಡುಗಳನ್ನು ಸೇರಿಸಬೇಕು. ಈಗ ಬ್ರೊಕೋಲಿ ಚಿಕನ್ ಬೆಂದ ನಂತರ ವಿನಿಗರ್ ಹಾಗೂ ಸೋಯಾ ಸಾಸ್ ಹಾಕಿ
ಅದನ್ನು ಒಮ್ಮೆ ತಿರುಗಿಸಿ ಉರಿಯಿಂದ ಇಳಿಸಿದರೆ ಬ್ರೊಕೋಲಿ ಚಿಕನ್ ರೆಡಿ.



Click it and Unblock the Notifications
