Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಿಕನ್ 65-ಸರಳವಾದ ಸ್ಟಾಟರ್ಸ್ ರೆಸಿಪಿ
ಚಿಕನ್ ಪ್ರಿಯರಾ ನೀವು? ಖಾರದ ಚಿಕನ್ ಸ್ಟಾಟರ್ಸ್ ತಿನ್ನಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಹೋಟೆಲ್ ಗೆ ಹೋಗುವ ಶ್ರಮವೇಕೆ? ಸರಳ ಸಾಮಾಗ್ರಿಗಳನ್ನು ಬಳಸಿ ಈ ಚಿಕನ್ 65ಯನ್ನು ಮನೆಯಲ್ಲಿಯೇ ಮಾಡಿ.
ನೀವು ಇದನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:
ಬೇಕಾಗುವ ಸಾಮಾಗ್ರಿಗಳು
ಫ್ರೈ ಮಾಡಲು ಎಣ್ಣೆ
ಮಿಕ್ಸ್ ಗೆ ಬೇಕಾಗುವ ಸಾಮಾಗ್ರಿಗಳು
ಚಿಕನ್ ಅರ್ಧ ಕೆಜಿ (ಬೋನ್ ಲೆಸ್ ಬೆಸ್ಟ್)
2 ಚಮಚ ಜೋಳದ ಹಿಟ್ಟು
2 ಚಮಚ ಮೈದಾ
2 ಚಮಚ ಖಾರದ ಪುಡಿ (ಪುಡಿ ತುಂಬಾ ಖಾರವಿದ್ದರೆ 1 ಚಮಚ)
1 ಮೊಟ್ಟೆ
1 ಕಪ್ ಗಟ್ಟಿಯಾದ ಮೊಸರು
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಚಿಟಿಕೆಯಷ್ಟು ಫುಡ್ ಕಲರ್
ರುಚಿಗೆ ತಕ್ಕ ಉಪ್ಪು
ಸಾಸ್ ಗೆ
4 ಹಸಿ ಮೆಣಸಿನಕಾಯಿ
1 ಚಮಚ ಗರಂ ಮಸಾಲ
3 ಚಮಚ ನಿಂಬೆ ರಸ
ಅರ್ಧ ಕಪ್ ಈರುಳ್ಳಿ
4 ಬೆಳ್ಳುಳ್ಳಿ
1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
* ಮಿಕ್ಸ್ ಗೆ ಬೇಕಾಗುವ ಸಾಮಾಗ್ರಿಗಳ ಲಿಸ್ಟ್ ನಲ್ಲಿ ಚಿಕನ್ ಬಿಟ್ಟು ಉಳಿದೆಲ್ಲಾ ಪದಾರ್ಥಗಳನ್ನು ಬಟ್ಟಲಿಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ, ನಂತರ ಚಿಕನ್ ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಿ.
* ಈಗ ಬಾಣಲೆಯನ್ನು ಉರಿಯಲ್ಲಿಟ್ಟು ಅದಕ್ಕೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ಈಗ ಕುದಿಯುತ್ತಿರುವ ಎಣ್ಣೆಗೆ ಚಿಕನ್ ಪೀಸ್ ಹಾಕಿ ಫ್ರೈ ಮಾಡಿ ಡ್ರೈಯಾಗಿರುವ ಪಾತ್ರೆಗೆ ಪೇಪರ್ ಹಾಕಿ ಅದರಲ್ಲಿ ಹಾಕಿ.
(ಪೇಪರ್ ಅಧಿಕ ಎಣ್ಣೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.)
* ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ರುಚಿಗೆ ತಕ್ಕ ಉಪ್ಪು ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.ಈಗ ಗರಂ ಮಸಾಲ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಫ್ರೈ ಮಾಡಿದ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ 65 ರೆಡಿ.



Click it and Unblock the Notifications

