Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿಲ್ಲಿ ಚಿಕನ್ ಈ ರೀತಿ ಮಾಡಿ ನೋಡಿ!
ಆಂಧ್ರ ಅಡುಗೆ ಸ್ವಾದಿಷ್ಟಕರವಾಗಿದ್ದು, ಸ್ವಲ್ಪ ಖಾರದ ಅಡುಗೆಯಾಗಿರುತ್ತದೆ. ಚಿಕನ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಅದರಲ್ಲೂ ಹೈದ್ರಾಬಾದ್ ಬಿರಿಯಾನಿಯಂತೂ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಆಂಧ್ರ ಚಿಕನ್ ಚಿಲ್ಲಿ, ಚಿಲ್ಲಿ ಚಿಕನ್, ಚಿಕನ್ ಕರಿ ಇವುಗಳನ್ನು ತಮ್ಮದೇ ಶೈಲಿಯಲ್ಲಿ ಮಾಡುವುದರಿಂದ ಇವರ ಅಡುಗೆಯ ರುಚಿ ಬೇರೆ ಪ್ರದೇಶದ ಅಡುಗೆಯ ರುಚಿಗಿಂತ ಭಿನ್ನವಾಗಿರುತ್ತದೆ. ಇವತ್ತು ನಾವು ಆಂಧ್ರ ಶೈಲಿಯಲ್ಲಿ ಚಿಲ್ಲಿ ಚಿಕನ್ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
* ಒಂದು ಕೆಜಿ ಚಿಕನ್
* ರುಚಿಗೆ ತಕ್ಕ ಉಪ್ಪು
* ನಿಂಬೆ ರಸ
* ಶುಂಠಿ 2 ಇಂಚಿನಷ್ಟು
* ಬೆಳ್ಳುಳ್ಳಿ 8-10 ಎಸಳು
* ಸ್ವಲ್ಪ ಕರಿಬೇವಿನ ಎಲೆ
* ಒಣ ಮೆಣಸಿನ ಕಾಯಿ 8-10
* ಅಕ್ಕಿ 2 ಚಮಚ
* ಮೊಸರು ಅರ್ಧ ಕಪ್
* ಎಣ್ಣೆ
* 1/4 ಚಮಚ ಅರಿಶಿಣ
* ಸ್ವಲ್ಪ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
* ಚಿಕನ್ ಅನ್ನು ದೊಡ್ಡ ಲೆಗ್ ಪೀಸ್ ಆಗಿ ಕತ್ತರಿಸಬೇಕು.
* ನಂತರ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಉಪ್ಪು ನಿಂಬೆ ರಸ ಸವರಿ ಬದಿಯಲ್ಲಿಡಬೇಕು.
* ಶುಂಠಿ, ಬೆಳ್ಳುಳ್ಳಿ, ಒಣ ಕೆಂಪು ಮೆಣಸಿನಕಾಯಿ ನಂತರ ಅಕ್ಕಿ, ಕರಿಬೇವಿನ ಎಲೆ ಹಾಕಿ ನುಣ್ಣನೆ ರುಬ್ಬಬೇಕು.
* ಈಗ ಈ ಪೇಸ್ಟ್ ಅನ್ನು ಮೊಸರು ಜೊತೆ ಮಿಶ್ರ ಮಾಡಬೇಕು, ಸ್ವಲ್ಪ ಉಪ್ಪು ಹಾಕಿ ಮಿಶ್ರಮಾಡಿ, ಈ ಪೇಸ್ಟ್ ಅನ್ನು ಚಿಕನ್ ಗೆ ಸರಿಯಾಗಿ ಉಜ್ಜಿ 6 ಗಂಟೆಗಳ ಕಾಲ ಇಡಬೇಕು. ಇದನ್ನು ಫ್ರಿಜ್ ನಲ್ಲಿ ಬೇಕಾದರೂ ಇಡಬಹುದು.
* ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಚಿಕನ್ ಅನ್ನು ಮೈದಾದಲ್ಲಿ ಹೊರಳಿಸಿ ಬಾಣಲೆಗೆ ಹಾಕಿ ಫ್ರೈ ಮಾಡಬೇಕು. ಎಣ್ಣೆಯಲ್ಲಿಯೆ ಚಿಕನ್ ಚೆನ್ನಾಗಿ ಬೆಂದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಆಂಧ್ರ ಚಿಲ್ಲಿ ಚಿಕನ್ ರೆಡಿ. ಇದನ್ನು ಬಿಸಿಬಿಸಿಯಾಗಿ ತಿನ್ನಿ.
ಇದನ್ನು ತಯಾರಿಸಿ, ನಿಮ್ಮ ಅಭಿಪ್ರಾಯವನ್ನು ನಮಗೆ ಬರೆಯಿರಿ,ಅಲ್ಲದೆ ನಿಮಗೆ ಗೊತ್ತಿರುವ ವಿಶೇಷ ಅಡುಗೆ ನಮಗೆ ಬರೆದು ಕಳುಹಿಸಿದರೆ ಪ್ರಕಟಿಸಲಾಗುವುದು.



Click it and Unblock the Notifications
