Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಆಂಧ್ರಶೈಲಿಯ ಮೀನಿನ ಫ್ರೈ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* ಈರುಳ್ಳಿ 1 (ಕತ್ತರಿಸಿದ್ದು)
* ಬೆಳ್ಳುಳ್ಳಿ ಎಸಳು 5-6
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* ಕೊತ್ತಂಬರಿ ಬೀಜ 1 ಚಮಚ
* ಮೆಂತೆ 1 ಚಮಚ
* ಒಣ ಕೆಂಪು ಮೆಣಸು 5-6
* ಅರಿಶಿಣ ಪುಡಿ ಅರ್ಧ ಚಮಚ
* ಗರಂ ಮಸಾಲ ಅರ್ಧ ಚಮಚ
* ಕರಿಬೇವಿನ ಎಲೆ
ಇತರ ಸಾಮಗ್ರಿಗಳು
* ಮೀನು ಒಂದು ಕೆಜಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ನಿಂಬೆ ಹಣ್ಣು
ತಯಾರಿಸುವ ವಿಧಾನ:
1. ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ಅದರ ಮೇಲೆ ಉಪ್ಪು ಉಜ್ಜಿ ಇಡಬೇಕು.
2. ನಂತರ ಮೇಲೆ ಸಾಮಾಗ್ರಿಗಳ ಲಿಸ್ಟ್ ನಲ್ಲಿ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಗಟ್ಟಿಯಾದ ಪೇಸ್ಟ್ ರೀತಿಯಲ್ಲಿ ಅರೆಯಬೇಕು.
3. ನಂತರ ಈ ಮಸಾಲೆ ಪೇಸ್ಟ್ ಅನ್ನು ಮೀನಿನ ತುಂಡುಗಳಿಗೆ ಉಜ್ಜಿ ಅರ್ಧ ಗಂಟೆ ಇಡಬೇಕು.
4. ಈಗ ಬಾಣಲೆ ಅಥವಾ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಮೀನಿನ ತುಂಡುಗಳನ್ನು ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಬೇಕು. ಈ ರೀತಿ ಮಾಡಿದರೆ ರುಚಿಕರವಾದ ಮೀನಿನ ಫ್ರೈ ರೆಡಿ.
ನಂತರ ಫ್ರೈ ಮಾಡಿದ ಮೀನನ್ನು ತಟ್ಟೆಗೆ ಹಾಕಿ ನಿಂಬೆ ಹಣ್ಣನ್ನು ಕತ್ತರಿಸಿ ತಟ್ಟೆಯಲ್ಲಿಟ್ಟು ಸರ್ವ್ ಮಾಡಿ.



Click it and Unblock the Notifications
