Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಜೇನು ಸವರಿದ ಗ್ರಿಲ್ಡ್ ಚಿಕನ್

ಬೇಕಾಗುವ ಸಾಮಾಗ್ರಿಗಳು:
1. ಒಂದು ಅಥವಾ ಒಂದೂವರೆ ಕೆಜಿ ಚಿಕನ್
2. ಜೇನು 4 ಚಮಚ
3. ಸ್ವೀಟ್ ವಿನಿಗರ್ 2 ಚಮಚ
4. ಕೆಂಪು ವೈನ್ 2 ಚಮಚ
5. ಬೆಳ್ಳುಳ್ಳಿ 7-8 ಎಸಳು
8. ಸಾಸಿವೆ 1 ಚಮಚ
9. ಏಲಕ್ಕಿ ಪುಡಿ 1 ಚಮಚ
10. ರುಚಿಗೆ ತಕ್ಕ ಉಪ್ಪು
11. 1 ಚಮಚ ನಿಂಬೆ ರಸ
12. ಕೆಂಪು ಮೆಣಸಿನ ಪುಡಿ 1 ಚಮಚ
13. ಕರಿಮೆಣಸಿನ ಪುಡಿ 1 ಚಮಚ
ಚಿಕನ್ ತಯಾರಿಸುವ ವಿಧಾನ:
1. ಚಿಕನ್ ಕತ್ತರಿಸಿ ಅದನ್ನು ಚೆನ್ನಾಗಿ ತೊಳೆಯಬೇಕು. ನಂತರ ಅದರಲ್ಲಿರುವ ನೀರು ಹೋಗಲು ನೀರು ಸೋಸಿ ಹೋಗುವಂತಹ ಪಾತ್ರೆಯಲ್ಲಿ ಹಾಕಬೇಕು.
2. ಚಿಕನ್ಗೆ ಉಪ್ಪು ಹಾಕಿ ಒಂದು ಗಂಟೆವರೆಗೆ ಇಡಬೇಕು.
3. ಈಗ ವಿನಿಗರ್ ಹಾಕಿ ಮಿಶ್ರ ಮಾಡಬೇಕು. ಸಣ್ಣ ಬಟ್ಟಲಿನಲ್ಲಿ ಜೇನು ಮತ್ತು ಕೆಂಪು ವೈನ್ ಮಿಶ್ರ ಮಾಡಿಡಬೇಕು.
4. ಚಿಕನ್ಗೆ ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ ಪುಡಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈಗ ಈ ಮಿಶ್ರಣಕ್ಕೆ ಜೇನು ಮತ್ತು ವೈನ್ ಮಿಶ್ರಣವನ್ನು ಹಾಕಿ ಮಿಶ್ರ ಮಾಡಬೇಕು. ಅದರ ಮೇಲೆ ಸಾಸಿವೆಯನ್ನು ಉದುರಿಸಬೇಕು.
5. ಮೈಕ್ರೋವೇವ್ ಅನ್ನು 300 ಡಿಗ್ರಿ ಫ್ಯಾರನ್ಹೀಟ್ ಉಷ್ಣತೆಗೆ ಬಿಸಿ ಮಾಡಿ 15-20 ನಿಮಿಷ ಗ್ರಿಲ್ ಮಾಡಬೇಕು. ನಂತರ ಮೈಕ್ರೋವೇವ್ ಆಫ್ ಮಾಡಿ 10 ನಿಮಿಷದ ಬಳಿಕ ತೆಗೆಯಬೇಕು. ನಂತರ ನಿಂಬೆ ರಸ ಹಿಂಡಿದರೆ ರುಚಿಕರವಾದ ಜೇನು ಹಾಕಿದ ಗ್ರಿಲ್ಡ್ ಚಿಕನ್ ರೆಡಿ.



Click it and Unblock the Notifications
