Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಪತ್ ಬಾಂಧವ ಎಗ್ ಆಮ್ಲೆಟ್

ಅಥವಾ ಸಮಯ ಮತ್ತು ಇಷ್ಟವಾಗುವ ಪರಿಕರಗಳಿದ್ದರೆ ಬಗೆಬಗೆ ರುಚಿಯ ಆಮ್ಲೆಟ್ಟುಗಳನ್ನು ಮಾಡಬಹುದು. ತೀರ ಸುಲಭವಾದ ಆಮ್ಲೆಟ್ ತಯಾರಿಕೆ ವಿಧಾನ ಹೀಗಿದೆ.
ಒಂದು ಸ್ಟೌವ್. ಗ್ಯಾಸ್ ಅಥವಾ ಇಲೆಕ್ಟ್ರಿಕ್. ಒಂದು ನಾನ್ ಸ್ಟಿಕಿ ತವ. ಮರದ ಸೌಟು. ರೆಡಿಮೇಡ್ ಪೆಪ್ಪರ್ ಮತ್ತು ಉಪ್ಪಿನ ಡಬ್ಬಿಗಳು. ಕೊಂಡು ತಂದ ತತ್ತಿಗಳನ್ನು ಮನೆಯಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇಡದಂತೆ ಬಳಸಿಬಿಡಬೇಕು.
ಒಲೆ ಹಚ್ಚಿ ತವದ ಮೇಲೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ ಜಿಡ್ಡು ಎಲ್ಲಕಡೆ ಹರಡುವಂತೆ ಪ್ಯಾನ್ ಅಲ್ಲಾಡಿಸಿ. ಒಂದು ಬಾರಿಗೆ ಒಂದು ಮೊಟ್ಟೆಯಂತೆ ಒಡೆದು ತವದಲ್ಲಿ ಪಾಕಿ. ಬಿಳಿ ಪದಾರ್ಥ ಹರಡಿಕೊಳ್ಳುವಂತೆ ಪ್ಯಾನ್ ಅಲ್ಲಾಡಿಸಿ. ಹಳದಿ ಅಂಶ ಮಾತ್ರ ದ್ವೀಪದಲ್ಲಿನ ನಡುಗಡ್ಡೆಯೋಪಾದಿಯಲ್ಲಿ ತಟಸ್ಥವಾಗಿರಲಿ.
ಮೊಟ್ಟೆ ಸ್ವಲ್ಪ ಬೆಂದ ನಂತರ ಪೆಪ್ಪರ್ ಮತ್ತು ಉಪ್ಪಿನ ಪುಡಿ ಸಿಂಪಡಿಸಿ. ಬೇಕೆನಿಸಿದರೆ ಅರ್ಧ ಚಮಚ ಎಣ್ಣೆಯನ್ನು ಆಮ್ಲೆಟ್ ಸುತ್ತ ಮತ್ತೆ ಹಾಕಬಹುದು. ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಆಮ್ಲೆಟ್ಟಾಗುತ್ತದೆ. ಒಂದೇ ಬದಿ ಬೇಯಿಸಿ ಹೊರತೆಗೆದರೆ ಬುಲ್ಸ್ ಐ ಆಗುತ್ತದೆ. ಸಿಂಪಲ್. ದಿನದ 24 ಗಂಟೆಗಳ ಅವಧಿಯಲ್ಲಿ ಯಾವಾಗ ಹಸಿವಾಗುತ್ತದೋ ಆವಾಗ ಮಾಡಿಕೊಳ್ಳಲು ಇದು ಅನುಕೂಲ. ಜತೆಗೆ ತಿನ್ನಲು ಸ್ಲೈಸ್ ಮಾಡಿದ ಟೊಮೆಟೋ, ಹಸಿ ಮೆಂತ್ಯ ಸೊಪ್ಪಿನ ಎಲೆಗಳು ಇದ್ದರೆ ಊಟ ಭರ್ಜರಿ.



Click it and Unblock the Notifications
