For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುತ್ತೆ ಈ ಮೆಂತ್ಯೆ ಪರೋಟ

Posted By:
|

ಉತ್ತರ ಭಾರತದ ಪಾಕವಿಧಾನಗಳಲ್ಲಿ ಮೆಂತ್ಯೆ ಸೊಪ್ಪಿನ ಪರೋಟ ಕೂಡ ಒಂದು. ಆ ಪ್ರದೇಶಗಳಲ್ಲಿ ಅಕ್ಕಿ ಬಳಕೆ ಇಲ್ಲದಿರುವುದರಿಂದ ಅವರು ಪರೋಟ, ಚಪಾತಿಗಳಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಮೆಂತ್ಯೆ ಪರೋಟ ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಉತ್ತಮ ಆಯ್ಕೆಯಾಗಿದೆ. ಈ ಪಾಕವಿಧಾನದಲ್ಲಿ ಕಡ್ಲೇ ಹಿಟ್ಟು, ಗೋಧಿಹಿಟ್ಟು, ಹಸಿ ಮೆಣಸಿನಕಾಯಿ, ಮೆಂತ್ಯೆ ಸೊಪ್ಪು ಹಾಗೂ ಮೊಸರನ್ನು ಬಳಸಲಾಗುತ್ತದೆ. ಈ ಎಲ್ಲಾ ಸಾಮಾಗ್ರಿಗಳು ಪರೋಟದ ರುಚಿಯನ್ನು ದ್ವಿಗುಣ ಗೊಳಿಸುವುದಲ್ಲದೇ, ದೇಹಕ್ಕೆ ಅಗತ್ಯವಾದ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಶಕ್ತಿ ಹಾಗೂ ಪೋಷಕಾಂಶವನ್ನು ಈ ಪರೋಟ ನೀಡುವುದರಿಂದ ಮಕ್ಕಳ ಶಾಲೆಯ ಊಟದ ಡಬ್ಬಿಗೆ ಈ ಪರೋಟವನ್ನು ತಯಾರಿಸಿ ನೀಡಬಹುದು.ಇಂತಹ ಪರೋಟವನ್ನು ಮನೆಯಲ್ಲಿಯೇ ಸುಲಭ ವಿಧಾನಗಳ ಮೂಲಕ ಹೇಗೆ ತಯಾರಿಸುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

Methi Paratha Recipe In Kannada
ಬಾಯಲ್ಲಿ ನೀರೂರಿಸುತ್ತೆ ಈ ಮೆಂತ್ಯೆ ಪರೋಟ
ಬಾಯಲ್ಲಿ ನೀರೂರಿಸುತ್ತೆ ಈ ಮೆಂತ್ಯೆ ಪರೋಟ
Prep Time
10 Mins
Cook Time
20M
Total Time
30 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಸಾಮಾಗ್ರಿಗಳು:

    1 ಕಪ್‌ ಗೋಧಿ ಹಿಟ್ಟು

    1 ಕಪ್‌ ಕತ್ತರಿಸಿದ ಮೆಂತೆ ಸೊಪ್ಪು

    3/4 ಕಪ್‌ ಮೊಸರು

    3 ಬೆಳ್ಳುಳ್ಳಿ

    ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ

    1 ಚಮಚ ಎಳ್ಳು

    ಅಗತ್ಯಕ್ಕೆ ತಕ್ಕಷ್ಟು ಅರಿಶಿಣ

    2 ಚಮಚ ಖಾರದ ಪುಡಿ

    ಅಗತ್ಯಕ್ಕೆ ತಕ್ಕಷ್ಟು ಉಪ್ಪು

    ಸಂಸ್ಕರಿಸಿದ ಎಣ್ಣೆ

Red Rice Kanda Poha
How to Prepare
  • ತಯಾರಿಸುವ ವಿಧಾನ:

    - ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಮೆಂತ್ಯೆ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಓಂಕಾಳು, ಎಳ್ಳು, ಬೆಳ್ಳುಳ್ಳಿ, ಅರಿಶಿನ, ಮೆಣಸಿನ ಪುಡಿ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

    ಹಿಟ್ಟಿನ ಮಿಶ್ರಣಕ್ಕೆ ಸಕ್ಕರೆ, ಉಪ್ಪು ಮತ್ತು ಮೊಸರನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಸ್ವಲ್ಪ ಎಣ್ಣೆಯನ್ನು ಹಿಟ್ಟಿಗೆ ಸೇರಿಸಿ, ಕಲಿಸಿ.ಈಗ ಹಿಟ್ಟು ಮೃದುವಾಗುವ ಹಾಗೆ ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ನಾದಿಕೊಳ್ಳಿ.

    - ಹಿಟ್ಟನ್ನು ಸಣ್ಣ ಸಣ್ಣ ಉಂಡೆಯ ಆಕಾರದಲ್ಲಿ ಸುತ್ತಿಕೊಳ್ಳಬೇಕು. ನಂತರ ಗೋಧಿ ಹಿಟ್ಟಿನಲ್ಲಿ ಅದ್ದಿ, ಪರೋಟದ ಆಕೃತಿಯಲ್ಲಿ ಲಟ್ಟಿಸಿ.

    - ಬಾಣಲೆಯನ್ನು ಬಿಸಿ ಮಾಡಲು ಇಡಿ. ಬಿಸಿಯಾದ ಬಾಣಲೆಯ ಮೇಲೆ ಲಟ್ಟಿಸಿಕೊಂಡ ಪರೋಟವನ್ನು ಹಾಕಿ. ಪರೋಟದ ಎರಡು ಭಾಗದಲ್ಲೂ ತುಪ್ಪ ವನ್ನು ಸವರಿ, ಚೆನ್ನಾಗಿ ಬೇಯಿಸಿ. ಪರೋಟ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು.

    - ಸಿದ್ಧವಾದ ಮೆಂತೆ ಪರೋಟವನ್ನು ಬಿಸಿ ಬಿಸಿ ಇರುವಾಗಲೇ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಲು ನೀಡಿ.

Instructions
  • - ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಮೆಂತ್ಯೆ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಓಂಕಾಳು, ಎಳ್ಳು, ಬೆಳ್ಳುಳ್ಳಿ, ಅರಿಶಿನ, ಮೆಣಸಿನ ಪುಡಿ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
Nutritional Information
  • People - 2
  • ಎನರ್ಜಿ - 122ಕ್ಯಾ
  • ಕೊಬ್ಬು - 7ಗ್ರಾ
  • ಪ್ರೋಟೀನ್ - 2.2ಗ್ರಾ
  • ಕಾರ್ಬೋಹೈಡ್ರೇಟ್ - 13.2ಗ್ರಾ
  • ಫೈಬರ್ - 2.3ಗ್ರಾ
[ 4 of 5 - 41 Users]
X
Desktop Bottom Promotion