Latest Updates
-
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ!
ಬಾಯಲ್ಲಿ ನೀರೂರಿಸುತ್ತೆ ಈ ಮೆಂತ್ಯೆ ಪರೋಟ
ಉತ್ತರ ಭಾರತದ ಪಾಕವಿಧಾನಗಳಲ್ಲಿ ಮೆಂತ್ಯೆ ಸೊಪ್ಪಿನ ಪರೋಟ ಕೂಡ ಒಂದು. ಆ ಪ್ರದೇಶಗಳಲ್ಲಿ ಅಕ್ಕಿ ಬಳಕೆ ಇಲ್ಲದಿರುವುದರಿಂದ ಅವರು ಪರೋಟ, ಚಪಾತಿಗಳಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಮೆಂತ್ಯೆ ಪರೋಟ ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಉತ್ತಮ ಆಯ್ಕೆಯಾಗಿದೆ. ಈ ಪಾಕವಿಧಾನದಲ್ಲಿ ಕಡ್ಲೇ ಹಿಟ್ಟು, ಗೋಧಿಹಿಟ್ಟು, ಹಸಿ ಮೆಣಸಿನಕಾಯಿ, ಮೆಂತ್ಯೆ ಸೊಪ್ಪು ಹಾಗೂ ಮೊಸರನ್ನು ಬಳಸಲಾಗುತ್ತದೆ. ಈ ಎಲ್ಲಾ ಸಾಮಾಗ್ರಿಗಳು ಪರೋಟದ ರುಚಿಯನ್ನು ದ್ವಿಗುಣ ಗೊಳಿಸುವುದಲ್ಲದೇ, ದೇಹಕ್ಕೆ ಅಗತ್ಯವಾದ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಶಕ್ತಿ ಹಾಗೂ ಪೋಷಕಾಂಶವನ್ನು ಈ ಪರೋಟ ನೀಡುವುದರಿಂದ ಮಕ್ಕಳ ಶಾಲೆಯ ಊಟದ ಡಬ್ಬಿಗೆ ಈ ಪರೋಟವನ್ನು ತಯಾರಿಸಿ ನೀಡಬಹುದು.ಇಂತಹ ಪರೋಟವನ್ನು ಮನೆಯಲ್ಲಿಯೇ ಸುಲಭ ವಿಧಾನಗಳ ಮೂಲಕ ಹೇಗೆ ತಯಾರಿಸುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಸಾಮಾಗ್ರಿಗಳು:
1 ಕಪ್ ಗೋಧಿ ಹಿಟ್ಟು
1 ಕಪ್ ಕತ್ತರಿಸಿದ ಮೆಂತೆ ಸೊಪ್ಪು
3/4 ಕಪ್ ಮೊಸರು
3 ಬೆಳ್ಳುಳ್ಳಿ
ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ
1 ಚಮಚ ಎಳ್ಳು
ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
2 ಚಮಚ ಖಾರದ ಪುಡಿ
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಸಂಸ್ಕರಿಸಿದ ಎಣ್ಣೆ
-
ತಯಾರಿಸುವ ವಿಧಾನ:
- ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಮೆಂತ್ಯೆ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಓಂಕಾಳು, ಎಳ್ಳು, ಬೆಳ್ಳುಳ್ಳಿ, ಅರಿಶಿನ, ಮೆಣಸಿನ ಪುಡಿ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
ಹಿಟ್ಟಿನ ಮಿಶ್ರಣಕ್ಕೆ ಸಕ್ಕರೆ, ಉಪ್ಪು ಮತ್ತು ಮೊಸರನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಸ್ವಲ್ಪ ಎಣ್ಣೆಯನ್ನು ಹಿಟ್ಟಿಗೆ ಸೇರಿಸಿ, ಕಲಿಸಿ.ಈಗ ಹಿಟ್ಟು ಮೃದುವಾಗುವ ಹಾಗೆ ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ನಾದಿಕೊಳ್ಳಿ.
- ಹಿಟ್ಟನ್ನು ಸಣ್ಣ ಸಣ್ಣ ಉಂಡೆಯ ಆಕಾರದಲ್ಲಿ ಸುತ್ತಿಕೊಳ್ಳಬೇಕು. ನಂತರ ಗೋಧಿ ಹಿಟ್ಟಿನಲ್ಲಿ ಅದ್ದಿ, ಪರೋಟದ ಆಕೃತಿಯಲ್ಲಿ ಲಟ್ಟಿಸಿ.
- ಬಾಣಲೆಯನ್ನು ಬಿಸಿ ಮಾಡಲು ಇಡಿ. ಬಿಸಿಯಾದ ಬಾಣಲೆಯ ಮೇಲೆ ಲಟ್ಟಿಸಿಕೊಂಡ ಪರೋಟವನ್ನು ಹಾಕಿ. ಪರೋಟದ ಎರಡು ಭಾಗದಲ್ಲೂ ತುಪ್ಪ ವನ್ನು ಸವರಿ, ಚೆನ್ನಾಗಿ ಬೇಯಿಸಿ. ಪರೋಟ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು.
- ಸಿದ್ಧವಾದ ಮೆಂತೆ ಪರೋಟವನ್ನು ಬಿಸಿ ಬಿಸಿ ಇರುವಾಗಲೇ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಲು ನೀಡಿ.
- - ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಮೆಂತ್ಯೆ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ. ನಂತರ ಓಂಕಾಳು, ಎಳ್ಳು, ಬೆಳ್ಳುಳ್ಳಿ, ಅರಿಶಿನ, ಮೆಣಸಿನ ಪುಡಿ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- People - 2
- ಎನರ್ಜಿ - 122ಕ್ಯಾ
- ಕೊಬ್ಬು - 7ಗ್ರಾ
- ಪ್ರೋಟೀನ್ - 2.2ಗ್ರಾ
- ಕಾರ್ಬೋಹೈಡ್ರೇಟ್ - 13.2ಗ್ರಾ
- ಫೈಬರ್ - 2.3ಗ್ರಾ



Click it and Unblock the Notifications
