Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಮಧುಮೇಹಿಗಳಿಗೆ ಡಿನ್ನರ್‌ಗೆ ತುಂಬಾ ಒಳ್ಳೆಯದು ಈ ಮೆಂತೆ ಚಪಾತಿ, ರುಚಿ ಕೂಡ ಸೂಪರ್
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ, ಮಧುಮೇಹ ಬಂದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು ತುಂಬಾನೇ ಮುಖ್ಯ. ಸಕ್ಕರೆಯಂಶ ನಿಯಂತ್ರಣದಲ್ಲಿಟ್ಟರೆ ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಜೀವನ ನಡೆಸಬಹುದು, ಅದೇ ಸಕ್ಕರೆಯಂಶ ಹೆಚ್ಚಾದರೆ ಮಧುಮೇಹದ ಜೊತೆಗೆ ಹತ್ತ ಹಲವು ಆರೋಗ್ಯ ಸಮಸ್ಯೆಗಳು ಸೇರಿಕೊಳ್ಳುವುದು.
ಆಹಾರಕ್ರಮ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ನಾವಿಲ್ಲಿ ಮೆಂತೆ ಸೊಪ್ಪಿನ ಚಪಾತಿ ರೆಸಿಪಿ ನೀಡಿದ್ದೇವೆ, ಮಧುಮೇಹಿಗಳು ಇದನ್ನು ಮಾಡಿ ತಿಂದರೆ ಒಳ್ಳೆಯದು. ಮೆಂತೆ ಸೊಪ್ಪು ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ತುಂಬಾನೇ ಒಳ್ಳೆಯದು. ಅಲ್ಲದೆ ಈ ಚಪಾತಿ ರುಚಿ ಕೂಡ ಚೆನ್ನಾಗಿರುತ್ತದೆ.
ರಾತ್ರಿ ಮಲಗುವಾಗ ಸಕ್ಕರೆಯಂಶ ಹೆಚ್ಚಾಗದಂಥ ಆಹಾರ ಸೇವಿಸಬೇಕು, ಅದಕ್ಕೆ ಈ ಚಪಾತಿ ಸಹಕಾರಿಯಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಒಂದುಕಟ್ಟು ಮೆಂತೆ ಸೊಪ್ಪು (1 ಕಪ್‌ನಷ್ಟು ಸೊಪ್ಪು ಇರಲಿ)
ಒಂದೂವರೆ ಕಪ್ ಗೋಧಿ ಹಿಟ್ಟು
ರುಚಿಗೆ ತಕ್ಕ ಉಪ್ಪು
ಕೆಲಸಲು ನೀರು
ತುಪ್ಪ ಅಥವಾ ಎಣ್ಣೆ
ಈ ಮೆಂತೆ ಚಪಾತಿ ಮಾಡುವುದು ಹೇಗೆ?
- ನೀವು ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ತೊಳೆದು ಸ್ವಚ್ಛಗೊಳಿಸಿದ ಮೆಂತೆ ಸೊಪ್ಪು ಹಾಕಿ ಫ್ರೈ ಮಾಡಿ. ಅದರ ಹಸಿ ವಾಸನೆ ಹೋಗುವಷ್ಟು ಫ್ರೈ ಮಾಡಿದರೆ ಸಾಕು, ತುಂಬಾ ಫ್ರೈ ಮಾಡಿದರೆ ಸೊಪ್ಪು ಕಹಿ ಟೇಸ್ಟ್ ಕೊಡುತ್ತದೆ, ಸ್ವಲ್ಪ ಬೆಂದರೆ ಸಾಕಾಗುತ್ತದೆ.
- ಈಗ ಬೌಲ್‌ಗೆ ಗೋಧಿ ಹಿಟ್ಟು ಹಾಕಿ, ಅದಕ್ಕೆ ಮೆಂತೆ ಸೊಪ್ಪು, ಉಪ್ಪು, ಸ್ವಲ್ಪ ಎಣ್ಣೆ ಹಾಕಿ ನೀರು ಹಾಕಿ ಕಲೆಸಿ. ಕೆಲವರು ತಣ್ಣೀರು ಹಾಕಿ ಹಿಟ್ಟು ಕಲೆಸಿದರೆ ಇನ್ನು ಕೆಲವರು ಬಿಸಿ ನೀರು ಹಾಕಿ ಕಲೆಸುತ್ತಾರೆ. ನೀವು ಚಪಾತಿ ಹಿಟ್ಟು ಹೇಗೆ ಕಲೆಸುತ್ತೀರೋ ಅದೇ ರೀತಿ ಕಲೆಸಿ. ಕಲೆಸುವುದರಲ್ಲಿ ವ್ಯತ್ಯಾಸವಿಲ್ಲ ಮೆಂತೆ ಸೊಪ್ಪು ಹೊಸ ಫ್ಲೇವರ್ ನೀಡುತ್ತದೆ ಅಷ್ಟೇ.
- ಈ ಹಿಟ್ಟು ಕಲೆಸಿ ಒಂದು 10 ನಿಮಿಷ ಬಿಡಿ
- ನಂತರ ಚಪಾತಿಗೆ ಉಂಡೆ ಕಟ್ಟಿ, ಲಟ್ಟಿಸಿ ಚಪಾತಿ ಬೇಯಿಸಿ
- ಚಪಾತಿ ಬೇಯಿಸುವಾಗ ತುಪ್ಪ ಅಥವಾ ಎಣ್ಣೆ ಸವರಿದರೆ ರುಚಿ ಇನ್ನೂ ಸೂಪರ್ ಆಗಿರುತ್ತದೆ.
ಮೆಂತೆ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿ
ಸಹಕಾರಿಯೇ?
ಮೆಂತೆ ಬೀಜ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಎಂದು
ಹೆಲ್ತ್‌ಲೈನ್ ವೆಬ್‌ಸೈಟ್ ( ಆರೋಗ್ಯದ ಬಗ್ಗೆ ರಿಸರ್ಚ್ ಲೇಖನ ನೀಡುವ
ವೆಬ್‌ಸೈಟ್) ಕೂಡ ಹೇಳಿದೆ.
ಮೆಂತೆ ಬೀಜ ಹಾಗೂ ಮೆಂತೆ ಸೊಪ್ಪು ಎರಡೂ ಒಳ್ಳೆಯದು.
ಮೆಂತೆಯಲ್ಲಿರುವ ಪ್ರಯೋಜನಗಳು
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಇದರಲ್ಲಿ galactomannan ಎಂಬ ಅಂಶವಿದೆ ಇದು ದೇಹಕ್ಕೆ ಸಕ್ಕರೆಯಂಶ ನಿಧಾನಕ್ಕೆ
ಬಿಡುಗಡೆಯಾಗುವಂತೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಪಟ್ ಅಂತ
ಹೆಚ್ಚಾಗುವುದಿಲ್ಲ.
ಮೆಂತೆ ಸೊಪ್ಪಿನಲ್ಲಿರುವ ಅಮೈನೋ ಆಮ್ಲ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸಲು
ಸಹಕಾರಿ.



Click it and Unblock the Notifications
