For Quick Alerts
ALLOW NOTIFICATIONS  
For Daily Alerts

ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯ ದಿನ ತಪ್ಪುವುದಿಲ್ಲ ಈ ಮೆಂತ್ಯೆ ಗಂಜಿ

Posted By:
|

ಆಷಾಢ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ಮಹತ್ವವಿದೆ. ಈ ತಿಂಗಳಲ್ಲಿ ಬರುವ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನದಂದು ಪಾಳೆ ಮರದ ಕಷಾಯ ಕುಡಿದು, ಮೆಂತ್ಯೆ ಗಂಜಿ ತಿನ್ನುವುದು ವಾಡಿಕೆ. ಈ ಗಂಜಿ ಆರೋಗ್ಯಕರ ಹಾಗೂ ಪೌಷ್ಟಿಕಾಂಶಭರಿತವಾಗಿದ್ದು, ಸರಳವಾಗಿ ತಯಾರಿಸಬಹುದು. ಇದನ್ನು ಹೆಣ್ಣುಮಕ್ಕಳು ಋತುಮತಿಯಾದ ದಿನಗಳಲ್ಲಿ, ಬಾಣಂತಿಯರ ಹಾಲು ಹೆಚ್ಚಾಗಲು ಹಾಲುಣಿಸುವ ತಾಯಂದಿರಿಗೂ ನೀಡುತ್ತಾರೆ. ಇಂತಹ ಮೆಂತ್ಯೆ ಗಂಜಿಯನ್ನು ಸುಲಭವಾಗಿ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ಹೇಳಿದ್ದೇವೆ.

Aati Amavasye Special - Menthe Ganji Recipe | Mentya Payasa Recipe
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯ ದಿನ ತಪ್ಪುವುದಿಲ್ಲ ಈ ಮೆಂತ್ಯೆ ಗಂಜಿ
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯ ದಿನ ತಪ್ಪುವುದಿಲ್ಲ ಈ ಮೆಂತ್ಯೆ ಗಂಜಿ
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Vegetarian

Serves: 3

Ingredients
  • ಮೆಂತ್ಯೆ ಗಂಜಿ ತಯಾರಿಸಲು ಬೇಕಾದ ಪದಾರ್ಥಗಳು:

    1 ಕಪ್ ಅಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ)

    1/4 ಕಪ್ ಮೆಂತ್ಯೆ

    1 ಕಪ್ ತುರಿದ ಬೆಲ್ಲ

    1 ತುರಿದ ತೆಂಗಿನಕಾಯಿ

    ಪಿಂಚ್ ಉಪ್ಪು

    ತುಪ್ಪ

Red Rice Kanda Poha
How to Prepare
  • ತಯಾರಿಸುವ ವಿಧಾನ:

    ಮೆಂತ್ಯ ಬೀಜಗಳನ್ನು ತೊಳೆದು ರಾತ್ರಿಯಿಡೀ ನೆನೆಸಿಡಿ.

    ನೆನೆಸಿದ ಮೆಂತ್ಯ ಬೀಜಗಳ ಜೊತೆಗೆ ಅಕ್ಕಿ ಮತ್ತು 5 ಕಪ್ ನೀರು ಹಾಕಿ ಪ್ರೆಶರ್ ಕುಕ್ ನಲ್ಲಿ 2-3 ಸೀಟಿಗಳಿಗೆ ಬೇಯಿಸಿ.

    ಮತ್ತೊಂದು ಬದಿಯಲ್ಲಿ ತುರಿದ ತೆಂಗಿನಕಾಯಿಗೆ ನೀರನ್ನು ಸೇರಿಸಿ, ತೆಂಗಿನ ಹಾಲನ್ನು ತೆಗೆಯಿರಿ.

    ಬೆಂದ ಅಕ್ಕಿ ಮತ್ತು ಮೆಂತ್ಯೆ ಮಿಶ್ರಣಕ್ಕೆ, ಉಪ್ಪು ಬೆಲ್ಲ ಮತ್ತು ತೆಂಗಿನ ಹಾಲು ಸೇರಿಸಿ.

    ಬೆಲ್ಲ ಕರಗಿ ಗಂಜಿ ದಪ್ಪವಾಗುವವರೆಗೆ ಬೇಯಿಸಿದರೆ, ಮೆಂತ್ಯೆ ಗಂಜಿ ಸವಿಯಲು ಸಿದ್ದ.

    ಕೊನೆಯದಾಗಿ ಮೇಲೆ ತುಪ್ಪವನ್ನು ಸೇರಿಸಿ, ಬಿಸಿಯಾಗಿರುವಾಗಲೇ ಬಡಿಸಿ.

Instructions
Nutritional Information
  • People - 3
  • ಎನರ್ಜಿ - 323ಕ್ಯಾ
  • ಕೊಬ್ಬು - 6.41ಗ್ರಾ
  • ಪ್ರೋಟೀನ್ - 23ಗ್ರಾ
  • ಕಾರ್ಬೋಹೈಡ್ರೇಟ್ - 58.35ಗ್ರಾ
[ 4 of 5 - 99 Users]
Story first published: Saturday, July 17, 2021, 19:14 [IST]
X
Desktop Bottom Promotion