For Quick Alerts
ALLOW NOTIFICATIONS  
For Daily Alerts

ನೆಕ್ಕರಿಕೆ ಚಿಗುರೆಲೆಗಳ ತಂಬುಳಿ

Posted By:
|

ಕೆಲವು ನಮ್ಮ ಸುತ್ತಮುತ್ತಲೇ ಇರುವ ಗಿಡಗಳೇ ಆಗಿದ್ದರೂ ಅವುಗಳ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ನೆಕ್ಕರಿಕೆಯೂ ಹಾಗೆಯೇ ಆಗಿರುವ ಸಸ್ಯಸಂಕುಲದಲ್ಲಿ ಒಂದೆನಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಲಭ್ಯವಿದ್ದರೂ ಮಾರುಕಟ್ಟೆ ಪ್ರವೇಶಿಸುವುದಿಲ್ಲ. ಜನರಿಗೆ ಇರದ ಪ್ರಯೋಜನ ತಿಳಿದಿಲ್ಲ. ವಿದೇಶದಲ್ಲಿ ಬಳಕೆಯಲ್ಲಿದ್ದರೂ ನಮ್ಮಲ್ಲಿ ಅಪರಿಚಿತವೆನಿಸಿರುವ ಸಸ್ಯ.

Melastoma Malabathricum Leaf Tambuli

ನೆಕ್ಕರಿಕೆ ಚಿಗುರೆಲೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನ ನೀಡುವ ಎಲೆಗಳಾಗಿವೆ. ಇಂಡೋನೇಷಿಯಾದ ಜನ ಇದನ್ನು ತಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದು ಗೂಗಲ್ ತಿಳಿಸುತ್ತದೆ. ಅನೇಕರು ಇದರ ಹಣ್ಣುಗಳನ್ನು ಕೇಕ್ ಗಳ ತಯಾರಿಕೆಯಲ್ಲಿ ಡ್ರೈಫ್ರೂಟ್ಸ್ ಆಗಿ ಬಳಸುತ್ತಾರಂತೆ.
Melastoma Malabathricum Leaf Tambuli

ನಾವಿಲ್ಲಿ ನೆಕ್ಕರಿಕೆ ಚಿಗುರೆಲೆಗಳಿಂದ ತಂಬಳಿ ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ.

ಈ ಗಿಡವನ್ನು Melastoma malabathricum ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಾಡು ಸಸ್ಯವೆಂದೇ ಹೇಳಬಹುದು. ಈ ಗಿಡದಲ್ಲಿ ನೀಲಿ ಅಥವಾ ಪಿಂಕ್ ಎಂದು ಹೇಳಬಹುದಾದ ಬಣ್ಣದ ಹೂವುಗಳಾಗುತ್ತದೆ.

Melastoma Malabathricum Leaf Tambuli

ಇದರ ಎಲೆಗಳು,ಬೇರುಗಳು, ತೊಗಟೆ ಸೇರಿದಂತೆ ಸಸ್ಯದ ಎಲ್ಲಾ ಭಾಗಗಳೂ ಕೂಡ ಔಷಧೀಯ ವಸ್ತುಗಳಾಗಿವೆ.ನಮ್ಮ ದೇಶದಲ್ಲಿ ಲಭ್ಯವಿರುವ ಅಂದಾಜು 4000 ಸಾಂಬಾರ ಪದಾರ್ಥಗಳಲ್ಲಿ ನೆಕ್ಕರಿಯೂ ಒಂದು.

Melastoma Malabathricum Leaf Tambuli

ಹಾಗಾದ್ರೆ ತಂಬುಳಿ ಮಾಡುವುದು ಹೇಗೆ ತಿಳಿದುಕೊಳ್ಳೋಣ.
Melastoma Malabathricum Leaf Tambuli /ನೆಕ್ಕರಿಕೆ ಚಿಗುರೆಲೆಗಳ ತಂಬುಳಿ
Melastoma Malabathricum Leaf Tambuli /ನೆಕ್ಕರಿಕೆ ಚಿಗುರೆಲೆಗಳ ತಂಬುಳಿ
Prep Time
5 Mins
Cook Time
5M
Total Time
10 Mins

Recipe By: Sushma

Recipe Type: Tambuli

Serves: 4

Ingredients
  • ಬೇಕಾಗುವ ಸಾಮಗ್ರಿಗಳು:

    ನೆಕ್ಕರಿಕೆ ಚಿಗುರೆಲೆಗಳು- ಒಂದು ಮುಷ್ಠಿ

    ಕಾಳುಮೆಣಸು- ಐದರಿಂದ ಆರು ಕಾಳುಗಳು

    ಜೀರಿಗೆ- ಒಂದು ಸ್ಪೂನ್

    ಮಜ್ಜಿಗೆ- ಅರ್ಧ ಲೀಟರ್

    ತೆಂಗಿನತುರಿ- ಒಂದು ಮುಷ್ಟಿ

    ಬೆಲ್ಲ- ನಾಲ್ಕೈದು ಗೋಲಿ ಗಾತ್ರದಷ್ಟು

    ಉಪ್ಪು- ರುಚಿಗೆ ತಕ್ಕಷ್ಟು

    ಸಾಸಿವೆ- ಅರ್ಧ ಸ್ಪೂನ್

    ಕೆಂಪುಮೆಣಸು_1

Red Rice Kanda Poha
How to Prepare
  • ಮಾಡುವ ವಿಧಾನ:

    ಮೊದಲಿಗೆ ಎರಡು ಸ್ಪೂನ್ ಅಡುಗೆ ಎಣ್ಣೆಗೆ ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಹಾಕಿ ಸ್ವಲ್ಪ ಹುರಿಯಿರಿ.

    ನಂತರ ಅದಕ್ಕೆ ಹೆಚ್ಚಿದ ನೆಕ್ಕರಿಕೆ ಚಿಗುರೆಲೆಗಳನ್ನು ಹಾಕಿ ಬಾಡಿಸಿ.

    ಇದಕ್ಕೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    ತಂಬಳಿ ಚಿಗುಟಾಗಿ ಇರಬಾರದು ಎನ್ನಿಸುವವರು ರಸವನ್ನು ಸೋಸಿಕೊಳ್ಳಬಹುದು ಅಥವಾ ಹಾಗೆಯೇ ಬಳಸಲೂ ಬಹುದು.

    ರುಬ್ಬಿದ ಮಿಶ್ರಣಕ್ಕೆ ಕಡೆದ ಮಜ್ಜಿಗೆಯನ್ನು ಸೇರಿಸಿ.

    ಉಪ್ಪು,ಬೆಲ್ಲ ಹಾಕಿ ಕದಡಿ.

    ನಂತರ ಜೀರಿಗೆ,ಸಾಸಿವೆ, ಕೆಂಪುಮೆಣಸು ಹಾಕಿ ತಂಬಳಿಗೆ ಒಗ್ಗರಣೆ ಮಾಡಿದರೆ ನೆಗ್ಗರಿಕೆ ಚಿಗುರೆಲೆಗಳ ತಂಬಳಿ ಸಿದ್ಧವಾಗುತ್ತದೆ.

Instructions
  • ಗಾಯಗಳ ನಿವಾರಣೆಗೆ ಇದು ಸಹಕಾರಿ. ಮಲವಿಸರ್ಜನೆ ಸಮಸ್ಯೆಗೆ ಪರಿಣಾಮಕಾರಿ. ಮೂತ್ರಕೋಶದ ಬಲವರ್ಧನೆಗೆ ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬಾಣಂತಿಯರಿಗೆ ಈ ತಂಬಳಿ ಬಡಿಸುವುದು ವಾಡಿಕೆಯಲ್ಲಿದೆ. ಗರ್ಭಕೋಶ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಚ್ಚಿನ ರಕ್ತಸ್ರಾವವಾಗುತ್ತಿದ್ದರೆ ಈ ತಂಬಳಿ ಮಾಡಿ ಸೇವಿಸುವುದರಿಂದಾಗಿ ಪರಿಹಾರ ಪಡೆಯಬಹುದು. ಪೈಲ್ಸ್ ಸಮಸ್ಯೆಗೆ ಇದು ರಾಮಬಾಣ. ಕ್ಯಾನ್ಸರ್ ನಿವಾರಣೆಯಲ್ಲೂ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.
Nutritional Information
[ 4.5 of 5 - 61 Users]
X
Desktop Bottom Promotion