For Quick Alerts
ALLOW NOTIFICATIONS  
For Daily Alerts

ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ ನಿಮಗಾಗಿ

Posted By:
|

ಎಗ್ ಮಸಾಲೆಯನ್ನು ಹಲವಾರು ರುಚಿಯಲ್ಲಿ ಸವಿಯಬಹುದು. ಇದರ ರುಚಿ ಹಾಗೂ ತಯಾರಿಸುವ ವಿಧಾನವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಾ ಇರುತ್ತದೆ. ಹಾಗಾಗಿ ಇಂದು ನಾವು ಸುಲಭವಾಗಿ ತಯಾರಿಸಬಹುದಾದ ಮಂಗಳೂರು ಶೈಲಿಯ ಮೊಟ್ತೆ ಮಸಾಲೆ ಮಾಡುವ ವಿಧಾನವನ್ನು ಹೇಳಹೊರಟಿದ್ದೇವೆ. ಎಲ್ಲರಿಗೂ ತಿಳಿದಿರೋ ಹಾಗೇ ಕರಾವಳಿ ಅಡುಗೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ. ತನ್ನದೇ ಆದ ತಯಾರಿಕ ಶೈಲಿ, ಮಸಾಲೆಯಿಂದ ಎಲ್ಲರನ್ನು ಸೆಲೆಯುವ ಶಕ್ತಿ ಹೊಂದಿದೆ. ಅದರಲ್ಲಿ ಒಂದು ಈ ಎಗ್ ಮಸಾಲೆ.

Mangalore Style Egg Masala Curry Recipe in Kannada
ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ ನಿಮಗಾಗಿ
ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ ನಿಮಗಾಗಿ
Prep Time
10 Mins
Cook Time
10M
Total Time
20 Mins

Recipe By: Shreeraksha

Recipe Type: Non Vegetarian

Serves: 3

Ingredients
  • ಬೇಕಾಗುವ ಸಾಮಾಗ್ರಿಗಳು:

    1/ 2 ಚಮಚ ಸಾಸಿವೆ

    4 ಈರುಳ್ಳಿ

    ೪ ಟೊಮಾಟೊ

    ೨ ಹಸಿಮೆಣಸಿನಕಾಯಿ

    ೨ ಚಮಚ ಜೀರಿಗೆ

    ಕರಿಬೇವು (ಒಂದು ಮುಷ್ಟಿ)

    ರುಚಿಗೆ ತಕ್ಕ ಉಪ್ಪು

    8 ಮೊಟ್ಟೆ

    3 ಚಮಚ ಎಣ್ಣೆ

    ಕೊತ್ತಂಬರಿ ಸೊಪ್ಪು

    ಮೊಟ್ಟೆ ಮಸಾಲ

    ೧ ಚಿಟಿಕೆ ಅರಿಶಿನಹುಡಿ

    ಶುಂಠಿ-ಬೆಳ್ಳುಳ್ಳಿ ಪೇಸ್ಟ್

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ಸುಲಿದು, ಎರಡು ಭಾಗ ಮಾಡಿ ಬದಿಗಿಡಿ.
    • ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿ ಬೇವಿನ ಎಲೆಯನ್ನು ಹಾಕಿ ಬಿಸಿ ಮಾಡಿ, 2-3 ನಿಮಿಷ ಫ್ರೈ ಮಾಡಿ.
    • ಸಾಸಿವೆ ಚಟ್ ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಅದಕ್ಕೆ ಟೊಮ್ಯಾಟೊ, ಹಸಿಮೆಣಸು ಹಾಗೂ ಶುಂಠಿ ಬೆಳ್ಳುಳ್ಳು ಪೇಸ್ಟ್ ಹಾಕಿ ಚೆನ್ನಾಗಿ ಪ್ರೈ ಮಾಡಿ.
    • ನಂತರ ಇದಕ್ಕೆ ಅರಿಶಿಣಹುಡಿ, ಮೊಟ್ಟೆ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಎರಡು ಲೋಟ ನೀರು ಸೇರಿಸಿ ಕುದಿಯಲು ಬಿಡಿ.
    • ಮಿಶ್ರಣ ಚೆನ್ನಾಗಿ ಬೆಂದಬಳಿಕ ಅದಕ್ಕೆ ಬೇಯಿಸಿದ ಮೊಟ್ಟೆ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ರುಚಿರುಚಿಯಾದ ಮಂಗಳೂರು ಸ್ಟೈಲ್ ಎಗ್ ಮಸಾಲೆ ರೆಡಿ.
Instructions
  • ಟಿಪ್ಪಣಿ: ಇದನ್ನು ಬಿಸಿ ಅನ್ನ, ದೋಸೆ ಹಾಗೂ ಚಪಾತಿಯೊಂದಿಗೆ ಸವಿಯಬಹುದು.
Nutritional Information
  • People - 3
  • ಎನರ್ಜಿ - ೨೦೭ಕ್ಯಾ
  • ಕೊಬ್ಬು - ೧೮ಗ್ರಾ
  • ಪ್ರೋಟೀನ್ - ೭.೩ಗ್ರಾ
  • ಕಾರ್ಬೋಹೈಡ್ರೇಟ್ - ೪ಗ್ರಾ
  • ಫೈಬರ್ - ೦.೯ ಗ್ರಾ
[ 4 of 5 - 113 Users]
X
Desktop Bottom Promotion