Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ ನಿಮಗಾಗಿ
Recipes
oi-Shreeraksha
Posted By: Shreeraksha
ಎಗ್ ಮಸಾಲೆಯನ್ನು ಹಲವಾರು ರುಚಿಯಲ್ಲಿ ಸವಿಯಬಹುದು. ಇದರ ರುಚಿ ಹಾಗೂ ತಯಾರಿಸುವ ವಿಧಾನವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಾ ಇರುತ್ತದೆ. ಹಾಗಾಗಿ ಇಂದು ನಾವು ಸುಲಭವಾಗಿ ತಯಾರಿಸಬಹುದಾದ ಮಂಗಳೂರು ಶೈಲಿಯ ಮೊಟ್ತೆ ಮಸಾಲೆ ಮಾಡುವ ವಿಧಾನವನ್ನು ಹೇಳಹೊರಟಿದ್ದೇವೆ. ಎಲ್ಲರಿಗೂ ತಿಳಿದಿರೋ ಹಾಗೇ ಕರಾವಳಿ ಅಡುಗೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ. ತನ್ನದೇ ಆದ ತಯಾರಿಕ ಶೈಲಿ, ಮಸಾಲೆಯಿಂದ ಎಲ್ಲರನ್ನು ಸೆಲೆಯುವ ಶಕ್ತಿ ಹೊಂದಿದೆ. ಅದರಲ್ಲಿ ಒಂದು ಈ ಎಗ್ ಮಸಾಲೆ.

ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ
ನಿಮಗಾಗಿ
ಮಂಗಳೂರು ಶೈಲಿಯ ಮೊಟ್ಟೆ ಮಸಾಲೆ
ನಿಮಗಾಗಿ
Prep Time
10 Mins
Cook Time
10M
Total Time
20 Mins
Recipe By: Shreeraksha
Recipe Type: Non Vegetarian
Serves: 3
Ingredients
-
ಬೇಕಾಗುವ ಸಾಮಾಗ್ರಿಗಳು:
1/ 2 ಚಮಚ ಸಾಸಿವೆ
4 ಈರುಳ್ಳಿ
೪ ಟೊಮಾಟೊ
೨ ಹಸಿಮೆಣಸಿನಕಾಯಿ
೨ ಚಮಚ ಜೀರಿಗೆ
ಕರಿಬೇವು (ಒಂದು ಮುಷ್ಟಿ)
ರುಚಿಗೆ ತಕ್ಕ ಉಪ್ಪು
8 ಮೊಟ್ಟೆ
3 ಚಮಚ ಎಣ್ಣೆ
ಕೊತ್ತಂಬರಿ ಸೊಪ್ಪು
ಮೊಟ್ಟೆ ಮಸಾಲ
೧ ಚಿಟಿಕೆ ಅರಿಶಿನಹುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
How to Prepare
-
ತಯಾರಿಸುವ ವಿಧಾನ:
- ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ಸುಲಿದು, ಎರಡು ಭಾಗ ಮಾಡಿ ಬದಿಗಿಡಿ.
- ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿ ಬೇವಿನ ಎಲೆಯನ್ನು ಹಾಕಿ ಬಿಸಿ ಮಾಡಿ, 2-3 ನಿಮಿಷ ಫ್ರೈ ಮಾಡಿ.
- ಸಾಸಿವೆ ಚಟ್ ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಅದಕ್ಕೆ ಟೊಮ್ಯಾಟೊ, ಹಸಿಮೆಣಸು ಹಾಗೂ ಶುಂಠಿ ಬೆಳ್ಳುಳ್ಳು ಪೇಸ್ಟ್ ಹಾಕಿ ಚೆನ್ನಾಗಿ ಪ್ರೈ ಮಾಡಿ.
- ನಂತರ ಇದಕ್ಕೆ ಅರಿಶಿಣಹುಡಿ, ಮೊಟ್ಟೆ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಎರಡು ಲೋಟ ನೀರು ಸೇರಿಸಿ ಕುದಿಯಲು ಬಿಡಿ.
- ಮಿಶ್ರಣ ಚೆನ್ನಾಗಿ ಬೆಂದಬಳಿಕ ಅದಕ್ಕೆ ಬೇಯಿಸಿದ ಮೊಟ್ಟೆ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ರುಚಿರುಚಿಯಾದ ಮಂಗಳೂರು ಸ್ಟೈಲ್ ಎಗ್ ಮಸಾಲೆ ರೆಡಿ.
Instructions
- ಟಿಪ್ಪಣಿ: ಇದನ್ನು ಬಿಸಿ ಅನ್ನ, ದೋಸೆ ಹಾಗೂ ಚಪಾತಿಯೊಂದಿಗೆ ಸವಿಯಬಹುದು.
Nutritional Information
- People - 3
- ಎನರ್ಜಿ - ೨೦೭ಕ್ಯಾ
- ಕೊಬ್ಬು - ೧೮ಗ್ರಾ
- ಪ್ರೋಟೀನ್ - ೭.೩ಗ್ರಾ
- ಕಾರ್ಬೋಹೈಡ್ರೇಟ್ - ೪ಗ್ರಾ
- ಫೈಬರ್ - ೦.೯ ಗ್ರಾ
Comments
[ 4 of 5 - 113 Users]



Click it and Unblock the Notifications