For Quick Alerts
ALLOW NOTIFICATIONS  
For Daily Alerts

ಮಂಗಳೂರು ಸ್ಪೆಷಲ್ ಮೂಡೆ ಇಡ್ಲಿ ಮಾಡೋ ಸಿಂಪಲ್ ವಿಧಾನ ಇಲ್ಲಿದೆ..

Posted By:
|

ಕೊಟ್ಟೆ ಕಡುಬು, ಮೂಡೆ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮಂಗಳೂರು ಇಡ್ಲಿಯು, ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ತಿನಿಸು. ಈ ಮೂಡೆಯನ್ನು ಇಷ್ಟ ಪಡದ ವ್ಯಕ್ತಿಗಳೇ ಇಲ್ಲ. ಅದರ ರುಚಿ, ಘಮ ಎಲ್ಲರನ್ನೂ ಸೆಳೆಯುತ್ತದೆ. ಇತರ ಇಡ್ಲಿಯಂತೆ, ಈ ಇಡ್ಲಿಯಲ್ಲೂ ಹೆಚ್ಚಿನ ಪದಾರ್ಥಗಳು ಒಂದೇ ಆಗಿರುತ್ತವೆ. ಆದರೆ ಈ ಮೂಡೆಯನ್ನು ಪ್ರತ್ಯೇಕಿಸುವ ಅಂಶವೆಂದರೆ ಅದನ್ನು ತಯಾರಿಸುವ ವಿಧಾನ.

Mangalore Idli Recipe | How To Make Kotte Kadubu

ಸಿಲಿಂಡರಿನ ಆಕಾರದಲ್ಲಿರುವ ಇಡ್ಲಿಗೆ ಅಚ್ಚು ತಯಾರಿಸಲು ಸ್ಥಳೀಯರು ತಾಳೆ ಮರ ಅಥವಾ ಪಾಂಡನ್ ಎಲೆಯನ್ನು ಬಳಸುತ್ತಾರೆ. ಈ ಅಚ್ಚನ್ನು ತಯಾರಿಸುವ ಕಲೆ ಸಾಕಷ್ಟು ಸೊಗಸಾಗಿದೆ, ಆದರೆ ಸಮಯ ತೆಗೆದುಕೊಳ್ಳುವ ಅಂಶದಿಂದಾಗಿ ನಿಧಾನವಾಗಿ ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಈ ಪಾಕ ವಿಧಾನ ಹಿರಿಯರಿಗಷ್ಟೇ ಸೀಮಿತವಾಗಿದ್ದು, ಇಂದಿನ ಯುವಕರಿಗೆ ಇದರ ಅರಿವಿಲ್ಲದಂತಾಗಿದೆ. ಈ ಇಡ್ಲಿಯ ಆಕಾರದಿಂದಾಗಿ, ಇದನ್ನು ಸಾಮಾನ್ಯವಾಗಿ ಕನ್ನಡ / ತುಳು ಭಾಷೆಯಲ್ಲಿ ಕೊಟ್ಟೆ ಕಡುಬು / ಮೂಡೆ ಎಂದೂ ಕರೆಯುತ್ತಾರೆ.

ಈ ಎಲೆಯು ಇಡ್ಲಿಗಳಿಗೆ ಅದರ ವಿಶೇಷ ಪರಿಮಳ, ಸುವಾಸನೆ ಮತ್ತು ಆಕಾರವನ್ನು ನೀಡುತ್ತದೆ. ಪ್ರಾಯೋಗಿಕವಾಗಿ ಹೇಳುವುದಾದರೆ, ಎಲೆಯನ್ನು ಅಚ್ಚಾಗಿ ಬಳಸುವುದು ಉತ್ತಮ ಉಪಾಯ, ಏಕೆಂದರೆ ಅದು ತೊಳೆಯುವ ಕೆಲಸವನ್ನು ಕಡಿಮೆ ಮಾಡುತ್ತದೆ. ಮತ್ತು ಎಲೆಗಳನ್ನು ಎಸೆಯಬಹುದು. ನಿಮ್ಮಲ್ಲಿ ಪಾಂಡನ್ ಎಲೆ ಇಲ್ಲದಿದ್ದರೆ, ಬಾಳೆ ಎಲೆ ಅಥವಾ ಹಲಸಿನ ಎಲೆಗಳನ್ನು ಪರ್ಯಾಯವಾಗಿ ಬಳಸಬಹುದು. ಈ ಅಚ್ಚನ್ನು ತಯಾರಿಸಲು ಅಸಾಧ್ಯವಾಗುವಂತಹವರಿಗೆ ಸದ್ಯ ಈ ಎಲೆಗಳು ಮಾರುಕಟ್ಟೆಗಳಲ್ಲೂ ಲಭ್ಯವಿದೆ.

ಮಂಗಳೂರು ಸ್ಪೆಷಲ್ ಮೂಡೆ ಇಡ್ಲಿ ಮಾಡೋ ಸಿಂಪಲ್ ವಿಧಾನ ಇಲ್ಲಿದೆ..
ಮಂಗಳೂರು ಸ್ಪೆಷಲ್ ಮೂಡೆ ಇಡ್ಲಿ ಮಾಡೋ ಸಿಂಪಲ್ ವಿಧಾನ ಇಲ್ಲಿದೆ..
Prep Time
20 Mins
Cook Time
35M
Total Time
55 Mins

Recipe By: Shreeraksha

Recipe Type: Idli

Serves: 4

Ingredients
  • ಮಂಗಳೂರು ಇಡ್ಲಿಗೆ ಬೇಕಾದ ಪದಾರ್ಥಗಳು:

    ಬೇಕಾಗುವ ಪದಾರ್ಥಗಳು:

    1 1/2 ಕಪ್ ಇಡ್ಲಿ ಅಕ್ಕಿ

    1 ಕಪ್ ಕಚ್ಚಾ ಅಕ್ಕಿ

    1 ಕಪ್ ಉದ್ದಿನ ಬೇಳೆ

    1 ಚಮಚ ಮೆಂತ್ಯ ಬೀಜ

    1 ಚಮಚ ಜೀರಿಗೆ ಬೀಜ

    2 ಚಮಚ ಹುರಿದ ಗೋಡಂಬಿ

    ಒಂದು ಚಿಟಿಕೆ ಅಸಫೊಯೆಟಿಡಾ

    1/2 ಕಪ್ ಮೊಸರು

    ಐಚ್ಛಿಕ ಸಾಮಾಗ್ರಿಗಳು:

    1 ಚಮಚ ಕಾಳು ಮೆಣಸಿನ ಪುಡಿ

    3 ಹಸಿರು ಮೆಣಸಿನಕಾಯಿ-ನುಣ್ಣಗೆ ಕತ್ತರಿಸಿ

    2 ಚಮಚ ಶುಂಠಿ ಸಿಪ್ಪೆ ಸುಲಿದ, ತುರಿದ

    ಕರಿಬೇವು

    1/2 ಚಮಚ ಒಣ ಶುಂಠಿ ಪುಡಿ

    1/4 ಚಮಚ ಜಿಂಜೆಲ್ಲಿ ಆಯಿಲ್

    ರುಚಿಗೆ ಉಪ್ಪು

Red Rice Kanda Poha
How to Prepare
  • ಮಂಗಳೂರು ಇಡ್ಲಿ ಅಥವಾ ಮೂಡೆ ಇಡ್ಲಿಯನ್ನು ಹೇಗೆ ಮಾಡುವುದು?

    1. ಹಸಿ ಅಕ್ಕಿ ಮತ್ತು ಇಡ್ಲಿ ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿಡಿ.

    2. ಮತ್ತೊಂದು ಬಟ್ಟಲಿನಲ್ಲಿ, ಉದ್ದಿನ ಬೇಳೆ ಮತ್ತು ಮೆಂತ್ಯ ಬೀಜಗಳನ್ನು ಒಂದು ಗಂಟೆ ನೆನೆಸಿಡಿ.

    3. ಅವುಗಳನ್ನು ಪ್ರತ್ಯೇಕವಾಗಿ ಗ್ರೈಂಡರ್ನಲ್ಲಿ ರುಬ್ಬಿ ಒಟ್ಟಿಗೆ ಮಿಶ್ರಣ ಮಾಡಿ. ಬ್ಯಾಟರ್ ದಪ್ಪವಾಗಿರಬೇಕು.

    4. ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಮತ್ತು ಅದನ್ನು 8 ಗಂಟೆಗಳ ಕಾಲ ಹದವಾಗಲು ಬಿಡಿ.

    5. ಬಳಿಕ ಕಾಳು ಮೆಣಸಿನ ಪುಡಿ, ಜೀರಿಗೆ ಹುಡಿ, ಒಣ ಶುಂಠಿ ಪುಡಿ, ಗೋಡಂಬಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ತುರಿದ ಶುಂಠಿ, ಅಫೊಫೈಟಿಡಾವನ್ನು ಮಿಶ್ರಣಕ್ಕೆ ಚೆನ್ನಾಗಿ ಕಲಸಿ.

    6. ನಂತರ ಜಿಂಜೆಲಿ ಎಣ್ಣೆ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    7. ಈ ಮಿಶ್ರಣವನ್ನು ಸುಮಾರು 1/2 ಗಂಟೆಗಳ ಕಾಲ ಹಾಗೆಯೇ ಇಡಿ.

    8. ಇಡ್ಲಿ ಸ್ಟೀಮರ್ ಬಿಸಿ ಮಾಡಿ, ಬಾಳೆಎಲೆ ಅಥವಾ ಹಲಸಿನ ಎಲೆಗಳಿಂದ ತಯಾರಿಸಿದ ಚಿಕ್ಕ ಪಾತ್ರೆಯಲ್ಲು ಬ್ಯಾಟರ್ ಅನ್ನು ಸುರಿಯಿರಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ಮೇಲಿನ ವಿವರಣೆಯಲ್ಲಿ ಸೂಚಿಸಿರುವಂತೆ ಪಾಂಡನ್ ಎಲೆ ಅಚ್ಚುಗಳನ್ನು ಬಳಸುವುದು ಉತ್ತಮ.

    9. ಇದೀಗ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಸವಿಯಲು ಮೂಡೆ ಇಡ್ಲಿ ಸವಿಯಲು ಸಿದ್ಧ.

Instructions
  • ಕೊಟ್ಟೆ ಕಡುಬು, ಮೂಡೆ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮಂಗಳೂರು ಇಡ್ಲಿಯು, ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ತಿನಿಸು.
Nutritional Information
  • ಕ್ಯಾಲೋರೀಸ್: - 58
  • ಕೊಬ್ಬು: - 0.4ಗ್ರಾಂ
  • ಪ್ರೋಟೀನ್: - 1.6 ಗ್ರಾಂ
  • ಕಾರ್ಬೋಹೈಡ್ರೇಟ್ಸ್: - 12ಗ್ರಾಂ
[ 4 of 5 - 30 Users]
X
Desktop Bottom Promotion