Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಉಳಿದ ಅನ್ನದಿಂದ ಮೃದುವಾದ ವಡೆ ಮಾಡಿ ನೋಡಿ..! 10 ನಿಮಿಷ ಸಾಕು..!
ಮನೆಯಲ್ಲಿ ಅನ್ನ ಉಳಿಯೋದು ಸಾಮಾನ್ಯ. ಕೆಲವು ಬಾರಿ ಅನ್ನ ಉಳಿದರೆ ಅದನ್ನು ಮತ್ತೊಮ್ಮೆ ಸವಿಯುತ್ತೇವೆ. ಇಲ್ಲವೆ ಚಿತ್ರಾನ್ನ, ಪುಳಿಯೋಗರೆ ಮಾಡಿಯೂ ಸವಿಯುತ್ತೇವೆ. ಅದ್ರೆ ಹಲವರ ಮನೆಯಲ್ಲಿ ಅನ್ನ ಉಳಿದರೆ ಅದು ಹಾಳಾಗುತ್ತದೆ. ಇಲ್ಲವೆ ಅವರು ಎಸೆಯುತ್ತಾರೆ. ಆದ್ರೆ ಉಳಿದ ಅನ್ನದಿಂದ ರುಚಿಕರ ತಿಂಡಿ ಮಾಡಬಹುದು.
ಹೌದು ಉಳಿದ ಅನ್ನದಿಂದ ನಾವು ಸಂಡಿಗೆ ಮಾಡುವುದನ್ನು ನೋಡಿದ್ದೇವೆ. ಇದು ಸಹ ತುಂಬ ರುಚಿಯಾಗಿರುತ್ತೆ. ಆದ್ರೆ ಉಳಿದ ಅನ್ನದಿಂದ ತೂತು ವಡೆ ಮಾಡುವುದು ನಿಮಗೆ ಗೊತ್ತಾ? ಹೌದು ಉಳಿದ ಅನ್ನದಿಂದ ರುಚಿ ರುಚಿಯ ವಡೆಯನ್ನ ಮಾಡಬಹುದು. ತೂತು ವಡೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇಡ್ಲಿ ಜೊತೆ ಈ ವಡೆ ಸವಿಯದೆ ಇರುವವರು ಬಹಳ ಕಡಿಮೆ.

ಆದ್ರೆ ವಡೆ ಮಾಡಲು ಉದ್ದು, ಸೋಡ ಬಹಳ ಮುಖ್ಯ ಎನ್ನಲಾಗುತ್ತೆ. ಆದ್ರೆ ನಾವಿಂದು ಬರಿ ಅನ್ನದಿಂದ ರುಚಿ ರುಚಿಯ ವಡೆ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ. ಉಳಿದ ಅನ್ನದಿಂದ ಸಂಡಿಗೆ ಮಾಡುವುದು ಎಷ್ಟು ಸುಲಭವೋ ಅದಕ್ಕಿಂತ ಸುಲಭವಾಗಿ ಈ ವಡೆ ಮಾಡಬಹುದು.
ಹಾಗಾದ್ರೆ ಅನ್ನದಿಂದ ಮೃದುವಾದ ವಡೆ ಮಾಡುವುದು ಹೇಗೆ? ವಡೆ ಮಾಡಲು ಬೇಕಾಗುವ ಪದಾರ್ಥಗಳೇನು? ಹಿಟ್ಟು ಮಾಡಿಕೊಳ್ಳುವ ವಿಧಾನವೇನು? ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಅನ್ನದಿಂದ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ- 1 ಬೌಲ್ (ಒಬ್ಬರು ಊಟ ಮಾಡುವಷ್ಟು)
- ಎಣ್ಣೆ
- ಶುಂಠಿ
- ಈರುಳ್ಳಿ
- ಜೀರಿಗೆ
- ಹಸಿಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
ಅನ್ನದಿಂದ ವಡೆ ಮಾಡುವುದು ಹೇಗೆ?
ಮೊದಲು ಅನ್ನವನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು, ನೀರು ಹಾಕಿಕೊಳ್ಳದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಇದನ್ನು ಒಂದು ಬೌಲ್ಗೆ ಹಾಕಿಕೊಳ್ಳಿ. ಇದಕ್ಕೆ ಹೆಚ್ಚಿಕೊಂಡಿರುವ ಈರುಳ್ಳಿ, ಶುಂಠಿ, ಜೀರಿಗೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಈ ಎಲ್ಲಾ ವಸ್ತುಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ. ಹೀಗೆ ಹಾಕುವಾಗಲೇ ಉಪ್ಪು ಸಹ ಹಾಕಿಕೊಳ್ಳಿ.
ಕುಕ್ಕರ್ನಲ್ಲಿ ಮಿಕ್ಸ್ ತರಕಾರಿ ಸಾಂಬಾರ್..! ಇಲ್ಲಿದೆ ಸಿಂಪಲ್ ರೆಸಿಪಿ!
ಹೀಗೆ ಈ ಎಲ್ಲಾ ವಸ್ತು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಒಂದು ಹನಿ ನೀರು ಸಹ ಹಾಕದೆ ಚೆನ್ನಾಗಿ ಕಲಸಿಕೊಳ್ಳಿ. ಕಲಸಿಕೊಂಡು ಹಿಟ್ಟು ಒಂದು ಹದಕ್ಕೆ ಬಂದಾಗ ಇದಕ್ಕೆ ಅಕ್ಕಿ ಹಿಟ್ಟು ಹಾಕಿಕೊಂಡು ಮತ್ತೆ ಕಲಸಿಕೊಳ್ಳಿ. ಕೈಗೆ ಅಂಟಿಕೊಳ್ಳುವಂತಹ ಹದಕ್ಕೆ ಹಿಟ್ಟು ಬರುವಂತೆ ಕಲಸಿಕೊಳ್ಳಬೇಕು.
ಬಳಿಕ ಕೈಗೆ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿಕೊಂಡು ಸ್ವಲ್ಪ ಮಧ್ಯದಲ್ಲಿ ಒತ್ತಿಕೊಂಡು ಹೆಬ್ಬೆರಳಿನಿಂದ ತೂತು ಮಾಡಿಕೊಳ್ಳಿ. ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ವಡೆಯನ್ನು ಹಾಕಿ ಚೆನ್ನಾಗಿ ಕರಿಯಲು ಬಿಡಿ. ಉರಿಯಲು ಎಷ್ಟು ಸಾಧ್ಯವೋ ಅಷ್ಟು ಸಣ್ಣದಾಗಿ ಇಟ್ಟುಕೊಳ್ಳಿ. ವಡೆ ಎರಡೂ ಕಡೆಗೂ ಚೆನ್ನಾಗಿ ಬೇಯುವಂತೆ ಕಾಯಿಸಿಕೊಳ್ಳಿ.
ಹೀಗೆ ಎಲ್ಲಾ ವಡೆಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅನ್ನದಿಂದ ಮಾಡಿದ ವಡೆ ರೆಡಿಯಾಗಿರುತ್ತದೆ. ಇದನ್ನು ಬೆಳಗ್ಗೆ ತಿಂಡಿಗೆ ಇಲ್ಲವೆ ರಾತ್ರಿ, ಮಧ್ಯಾಹ್ನದ ಊಟದ ನಡುವೆ ಸವಿಯಲು ಸಹ ಮಾಡಿಕೊಳ್ಳಬಹುದು. ಈ ವಡೆ ಜೊತೆ ಕಾಯಿ ಚಟ್ನಿ ಇಲ್ಲವೆ ಶೇಂಗಾ ಚಟ್ನಿ ಮಾಡಿದರೆ ರುಚಿ ದುಪ್ಪಟ್ಟಾಗುತ್ತದೆ.
ಆದರೆ ಹಲವರಿಗೆ ಈ ರೀತಿ ಅನ್ನದಿಂದಲೂ ವಡೆ ಮಾಡಬಹುದು ಎನ್ನುವುದು ತಿಳಿದಿರುವುದಿಲ್ಲ. ಆದ್ರೆ ಒಮ್ಮೆ ಇದನ್ನು ಟ್ರೈ ಮಾಡಿ ರುಚಿ ನೋಡಿದರೆ ಪದೆ ಪದೇ ಸವಿಯಬೇಕು ಎನಿಸುತ್ತೆ.



Click it and Unblock the Notifications
