Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೋರೆಕಾಯಿ ಹಲ್ವಾ ರೆಸಿಪಿ
ಸಿಹಿ ಇಷ್ಟ ಪಡುವವರಿಗೆ ಸೋರೆಕಾಯಿ ಹಲ್ವ ಕೂಡ ಒಂದು ಅಗ್ರಸ್ಥಾನದಲ್ಲಿ ನಿಂತಿರುತ್ತದೆ. ಬಾಯಲ್ಲಿ ನೀರು ಸುರಿಯುವಂತೆ ಮಾಡುವ ಪಾಕವಿಧಾನಗಳಲ್ಲಿ ಸೋರೆಕಾಯಿ ಹಲ್ವಾ ಸಹ ಒಂದು. ಈ ರುಚಿಕರವಾದ ಪಾಕವಿಧಾನವನ್ನು ಸೋರೆಕಾಯಿ, ಹಾಲು, ಸಕ್ಕರೆ, ಏಲಕ್ಕಿ ಮತ್ತು ತುಪ್ಪಗಳ ಸಮ್ಮಿಶ್ರಣದಲ್ಲಿ ತಯಾರಿಸಲಾಗುತ್ತದೆ. ಅದ್ಭುತ ರುಚಿ ಹಾಗೂ ಆಹ್ಲಾದಕರವಾದ ಪರಿಮಳದಿಂದ ಕೂಡಿರುವ ಈ ಸಿಹಿ ತಿಂಡಿಯನ್ನು ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ಹಬ್ಬಗಳ ಸಂದರ್ಭದಲ್ಲಿ, ಅತಿಥಿಗಳು ಆಗಮಿಸಿದಾಗ ಅಥವಾ ವ್ರತಾಚರಣೆಯ ಸಮಯದಲ್ಲಿ ಹೆಚ್ಚಾಗಿ ತಯಾರಿಸಬಹುದು. ಸಿಹಿ ತಿನ್ನಬೇಕು ಎಂದು ಬಯಸಿದಾಗ ತಕ್ಷಣದಲ್ಲಿ ತಯಾರಿಸಬಹುದಾದ ಪಾಕವಿಧಾನ. ಇನ್ನೇಕೆ ತಡ? ಇಂದೇ ನೀವು ಮನೆಯಲ್ಲಿ ತಯಾರಿಸಿ, ನಿಮ್ಮವರಿಗೆ ಸವಿಯಲು ನೀಡಿ.

Recipe By: Shreeraksha
Recipe Type: Vegetarian
Serves: 1
-
ಪ್ರಮುಖ ಸಾಮಗ್ರಿಗಳು:
1 - ಸೋರೆಕಾಯಿ
1 ಕಪ್ ಹಾಲು
ಅಗತ್ಯಕ್ಕೆ ತಕ್ಕಷ್ಟು ಕಪ್ಪು ಏಲಕ್ಕಿ
4 ಚಮಚ ಸಕ್ಕರೆ
5 ಚಮಚ ತುಪ್ಪ
ಅಗತ್ಯಕ್ಕೆ ತಕ್ಕಷ್ಟು ಹಾಲಿನ ಪುಡಿ
1 ಕಪ್ ಮಂದ ಹಾಲು
5 - ಬಾದಾಮಿ
7 - ಗೋಡಂಬಿ
8 - ಒಣ ದ್ರಾಕ್ಷಿ
-
ತಯಾರಿಸುವ ವಿಧಾನ:
- ಒಂದು ಸೋರೆಕಾಯನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ತೆಗೆದುಕೊಳ್ಳಿ. ನಂತರ ಸೋರೆ ಕಾಯಿಯ ಬೀಜಗಳನ್ನು ಬೇರ್ಪಡಿಸಿಕೊಂಡು ತುರಿಯಿರಿ. ತುರಿದ ಸೋರೆಕಾಯನ್ನು ಪಕ್ಕಕ್ಕೆ ಇರಿಸಿ.
- ಒಂದು ಬಾಣಲೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ತುಪ್ಪಕ್ಕೆ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ, ಹುರಿಯಿರಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ
- ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪವನ್ನು ಸೇರಿಸಿ, ತುರಿದ ಸೋರೆಕಾಯನ್ನು ಹಾಕಿ. ಸೋರೆಕಾಯಿ ಮೃದುವಾಗಿ ಬೇಯುವಂತೆ ಹುರಿಯಿರಿ. ಬೆಂದ ಸೋರೆಕಾಯಿಗೆ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ. ಹಾಲಿನ ಪ್ರಮಾಣ 1/4ಕ್ಕೆ ಇಳಿಯುವ ತನಕ ಬೇಯಿಸಬೇಕು- ಬಳಿಕ ಸಕ್ಕರೆಯನ್ನು ಸೇರಿಸಿ, 2-3 ನಿಮಿಷಗಳ ಕಾಲ ಬೇಯಿಸಿ
- ಪ್ರತ್ಯೇಕ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಅದಕ್ಕೆ ಹಾಲನ್ನು ಹಾಕಿ. ಹಾಲು ಮತ್ತು ತುಪ್ಪದ ಮಿಶ್ರಣ ಕುದಿಯಲು ಪ್ರಾರಂಭಿಸಿದ ಬಳಿಕ ಅದಕ್ಕೆ ಹಾಲಿನ ಪುಡಿಯನ್ನು ಸೇರಿಸಿ. ಹಾಲು ದಪ್ಪವಾದ ಸ್ಥಿರತೆ ಪಡೆಯಬೇಕು. ಆಗ ತಾಜಾ ಖೋಯಾ ಸಿದ್ಧವಾಗುತ್ತದೆ
- ಈಗ ಸೋರೆಕಾಯಿ ಬಾಣಲೆಗೆ ಖೋಯಾ ಅನ್ನು ಸೇರಿಸಿ, ಮಿಶ್ರಗೊಳಿಸಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಬೇಯುವಂತೆ ಮಿಶ್ರಗೊಳಿಸಿ. ಹುರಿದುಕೊಂಡ ಒಣ ಹಣ್ಣುಗಳನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವು ಬಾಣಲೆಯ ಸುತ್ತ ತಳ ಬಿಡುವ ಹಾಗೆ ಬೇಯಿಸಬೇಕು. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ. ಬಳಿಕ ಉರಿಯನ್ನು ಆರಿಸಿ, ಬೇರೆ ಪಾತ್ರೆಗೆ ವರ್ಗಾಯಿಸಿ.
- ನಿಮ್ಮ ಆಯ್ಕೆಗೆ ಅನುಗುಣವಾಗಿ ಬಿಸಿ ಇರುವಾಗ ಅಥವಾ ತಣ್ಣಗಾಗಿಸಿಕೊಂಡು ಸವಿಯಬಹುದು.
- ಸಿಹಿ ಇಷ್ಟ ಪಡುವವರಿಗೆ ಸೋರೆಕಾಯಿ ಹಲ್ವ ಕೂಡ ಒಂದು ಅಗ್ರಸ್ಥಾನದಲ್ಲಿ ನಿಂತಿರುತ್ತದೆ. ಬಾಯಲ್ಲಿ ನೀರು ಸುರಿಯುವಂತೆ ಮಾಡುವ ಪಾಕವಿಧಾನಗಳಲ್ಲಿ ಸೋರೆಕಾಯಿ ಹಲ್ವಾ ಸಹ ಒಂದು.
- People - 1
- ಎನರ್ಜಿ - ೩೧೭ಕ್ಯಾ
- ಕೊಬ್ಬು - ೧೪.೯ಗ್ರಾ
- ಪ್ರೋಟೀನ್ - ೪ಗ್ರಾ
- ಕಾರ್ಬೋಹೈಡ್ರೇಟ್ - ೪೦.೯ಗ್ರಾ
- ಫೈಬರ್ - ೧ಗ್ರಾ



Click it and Unblock the Notifications
