Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಶುಂಠಿ, ಕಾಳುಮೆಣಸಿನ ಪುನರ್ಪುಳಿ ಜ್ಯೂಸ್
ನಮ್ಮ ದೇಹಕ್ಕೆ ಆಂಟಿಆಕ್ಸಿಡೆಂಟ್ ಗಳು, ನ್ಯೂಟ್ರಿಯಂಟ್ಸ್ ಗಳು,ವಿಟಮಿನ್ ಗಳು, ಮಿನರಲ್ ಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳ ಅಗತ್ಯತೆ ಇರುತ್ತದೆ. ಇವೆಲ್ಲವೂ ನಮಗೆ ಆಹಾರದಿಂದ ಲಭ್ಯವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಅಂಶವೇ. ಆದರೆ ಯಾವ ರೀತಿಯ ಆಹಾರ? ಉತ್ತಮ ಆಹಾರ ಸೇವಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವುದು ಉತ್ತಮ ಆಹಾರ ಎಂದು ಯಾರೂ ಹೇಳುವುದಿಲ್ಲ.

ಆಹಾರದ ಜೊತೆಗೆ ನೀರಿನ ಪ್ರಮಾಣ ಕೂಡ ದೇಹಕ್ಕೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಆಗಾಗ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು. ಇವತ್ತೊಂದು ನಾವಿಲ್ಲಿ ಕಲರ್ ಫುಲ್ ಆಗಿರುವ ಜ್ಯೂಸ್ ಒಂದನ್ನು ತಿಳಿಸಿಕೊಡುತ್ತಿದ್ದೇವೆ. ಅದುವೇ ಕೊಕಂ ಜ್ಯೂಸ್.

ಕೋಕಂ ನ್ನು ಪುನರ್ಪುಳಿ ಎಂದೂ ಕೂಡ ಕರೆಯಲಾಗುತ್ತದೆ. ದೇಹದ ಪಿತ್ತಕ್ಕೆ ಉತ್ತಮ ಮದ್ದು ಇದು. ಅತಿಯಾದ ಟೀ ಕುಡಿಯುವ ಅಭ್ಯಾಸವಿರುವವರು ಆಗಾಗ ಈ ಜ್ಯೂಸ್ ಸೇವಿಸುವುದು ದೇಹದ ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ತೂಕ ಇಳಿಸುವುದಕ್ಕೆ ಬಯಸುವವರು ಕೂಡ ಈ ಜ್ಯೂಸ್ ಸೇವಿಸುವುದು ಒಳ್ಳೆಯದು.

Recipe By: Sushma
Recipe Type: Juice
Serves: 2
-
ಬೇಕಾಗುವ ಸಾಮಗ್ರಿಗಳು
ಕೋಕಂ ಅಥವಾ ಪುನರ್ ಪುಳಿ- ನಾಲ್ಕರಿಂದ ಐದು ಸಿಪ್ಪೆಗಳು
ನೀರು- ಒಂದು ಲೋಟ
ಶುಂಠಿ- ಒಂದು ಸ್ಪೂನ್ ರಸ
ಕಾಳುಮೆಣಸು- ನಾಲ್ಕು ಕಾಳು
ಉಪ್ಪು- ಚಿಟಿಕೆ
ಸಕ್ಕರೆ- ನಾಲ್ಕು ಸ್ಪೂನ್
ಏಲಕ್ಕಿ- ಒಂದು
ಲವಂಗ - ಒಂದು
-
ಮಾಡುವ ವಿಧಾನ
ಪುನರ್ ಪುಳಿ ಸಿಪ್ಪೆಗಳನ್ನು ಅರ್ಧಗಂಟೆ ನೀರಿನಲ್ಲಿ ನೆನಸಿಡಿ. ನಾಲ್ಕು ಸಿಪ್ಪೆಗಳನ್ನು ನೆನಸಿಟ್ಟರೆ ಸಾಕಾಗುತ್ತದೆ.
ಒಮ್ಮೆ ಜ್ಯೂಸ್ ತಯಾರಿಸಿದ ನಂತರ ಪುನಃ ನೀವು ಆ ಸಿಪ್ಪೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡರೆ ಮತ್ತೊಂದೆರಡು ಬಾರಿ ಜ್ಯೂಸ್ ತಯಾರಿಸುವುದಕ್ಕೆ ಆ ಸಿಪ್ಪೆಗಳು ಯೋಗ್ಯವಾಗಿಯೇ ಇರುತ್ತದೆ.
ಕೆಂಬಣ್ಣಕ್ಕೆ ಬಂದ ನೀರನ್ನು ಜ್ಯೂಸ್ ತಯಾರಿಕೆಗೆ ಬಳಸಿ.
ನಂತರ ಅದಕ್ಕೆ ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು ಒಂದು ಸ್ಪೂನ್ ಸೇರಿಸಿ. (ಪ್ರಿಸರ್ವ್ ಮಾಡಿಟ್ಟ ಶುಂಠಿ ಪೇಸ್ಟ್ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಂಠಿ ಪುಡಿ ಅಷ್ಟು ಯೋಗ್ಯವಲ್ಲ. ರುಚಿ ಕೆಡಿಸುತ್ತದೆ ಎಂಬುದು ನೆನಪಿರಲಿ.)
ಕಾಳುಮೆಣಸು,ಏಲಕ್ಕಿ ಮತ್ತು ಲವಂಗವನ್ನು ಕುಟ್ಟಿ ಪುಡಿ ಮಾಡಿ ಸೇರಿಸಿ.
ಚಿಟಿಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಕರಗುವಂತೆ ಮಾಡಿದರೆ ಜ್ಯೂಸ್ ಸಿದ್ಧ.
- ನೆನಪಿಡಿ- ಮಾರುಕಟ್ಟೆಯಲ್ಲಿ ಕೋಕಂ ಪುಡಿಯೂ ಲಭ್ಯವಿರುತ್ತದೆ. ಆದರೆ ಅದು ಜ್ಯೂಸ್ ಗೆ ಅಷ್ಟು ಉತ್ತಮವಾಗುವುದಿಲ್ಲ. ಹಾಗಾಗಿ ನಿಮಗೆ ಒಣಗಿಸಿದ ಕೋಕಂ ಸಿಪ್ಪೆಗಳು ಸಿಕ್ಕರೆ ಖರೀದಿಸಿ ಅಥವಾ ತಾಜಾ ಹಣ್ಣುಗಳು ಸಿಕ್ಕರೆ ಬೇಸಿಗೆಯಲ್ಲಿ ಖರೀದಿಸಿ ಒಣಗಿಸಿ ಇಟ್ಟುಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ತಾಜಾತನಕ್ಕೆ ಬೆಲೆ ನೀಡುವುದು ಒಳ್ಳೆಯದು. ಆರೋಗ್ಯಕ್ಕೆ ಅನೇಕ ರೀತಿಯ ಲಾಭ ಮಾಡುವ ಇವುಗಳ ಸಂಗ್ರಹ ಪ್ರತಿಯೊಂದು ಮನೆಯಲ್ಲೂ ಇದ್ದರೆ ಪ್ರಿಸರ್ವ್ ಮಾಡಲಾಗಿರುವ ಜ್ಯೂಸ್ ಗಳನ್ನು ಖರೀದಿಸುವುದು ತಪ್ಪುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಈ ಜ್ಯೂಸ್ ಮಾಡಿ ಕೊಡುವುದು ಬಹಳ ಒಳ್ಳೆಯದು.
- ಪ್ರೋಟೀನ್: - 0.5g.
- ಕೊಬ್ಬಿನಾಂಶ: - 0.1g.
- ಕ್ಯಾಲೋರಿ - 60.
- ಕಾರ್ಬೋಹೈಡ್ರೇಟ್: - 14.3g



Click it and Unblock the Notifications
