Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಕಷಾಯ ಪುಡಿ ಮಾಡುವುದು ಹೇಗೆ?
ಬಿಸಿಲಿನ ಧಗೆಯಲ್ಲಿ ಬೇಯುತ್ತಿದ್ದ ಭೂಮಿಗೆ ಕಳೆದ ಕೆಲ ದಿನಗಳಿಂದ ಮಳೆರಾಯ ಭೇಟಿ ಕೊಡುತ್ತಿದ್ದಾನೆ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕೂಡ ಶುರುವಾಗಲಿದೆ.
ಮಳೆಗಾಲದಲ್ಲಿ ಕೆಮ್ಮ-ಶೀತ ಈ ಬಗೆಯ ಸಮಸ್ಯೆ ಸರ್ವೇ ಸಾಮಾನ್ಯ, ಇಂಥ ಸಾಮಾನ್ಯ ಶೀತ-ಕೆಮ್ಮು ಈ ಬಗೆಯ ಸಾಮಾನ್ಯ ಸಮಸ್ಯೆಗಳಿಗೆ ರಾಮಮಾಣ ಈ ಕಷಾಯ ಪುಡಿ:

ಬೇಕಾಗುವ ಸಾಮಗ್ರಿ
4-5 ಕಪ್ಪು ಏಲಕ್ಕಿ (ಒಣ ಏಲಕ್ಕಿ ಕೂಡ ಬಳಸಬಹುದು)
2 ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಒಂದು ಇಂಚಿನಷ್ಟು ದೊಡ್ಡದಿರುವ ಒಣ ಶುಂಠಿ (ಶುಂಠಿ ಪುಡಿಯಾದರೆ 1/2 ಚಮಚ)
2 ಲವಂಗ
ಕಾಳುಮೆಣಸು 1 ಚಮಚ
2 ಚಮಚ ಸೋಂಪು
ಇವುಗಳನ್ನು ನೀವು ತವಾ ಅಥವಾ ಬಾಣಲೆಗೆ ಹಾಕಿ ರೋಸ್ಟ್ ಮಾಡಬೇಕು, ನಂತರ ಅವುಗಳನ್ನು ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಕಷಾಯ ಪುಡಿ ಮಾಡುವುದರಿಂದ ಪ್ರಯೋಜನವೇನು?
ಕಷಾಯ ಮಾಡಿದರೆ ನಾವು ಒಂದು ಅಥವಾ ಎರಡು ದಿನ ಇಟ್ಟು ಸೇವಿಸಬಹುದು
ಆದರೆ ಕಷಾಯ ಪುಡಿ ಮಾಡಿದರೆ ನಮಗೆ ಯಾವಾಗ ಶೀತ-ಕೆಮ್ಮು ಈ ಬಗೆಯ ಸಮಸ್ಯೆ
ಉಂಟಾಗುವುದೋ ಆವಾಗ ಬಿಸಿ ನೀರಿನಲ್ಲಿ ಕಲೆಸಿ ಸೇವಿಸಿದರೆ ಸಾಕು.
ಹಾಸ್ಟಲ್, ಪಿಜಿಯಲ್ಲಿರುವ ಮಕ್ಕಳಿಗೆ ಮಾಡಿ ಕೊಡಬಹುದು.
ನಂತರ ಬೇಕಾದಾಗ ಬಿಸಿ ನೀರಿಗೆ ಒಂದು ಚಮಚ ಪುಡಿ ಹಾಕಿ, ನಂತರ ಸ್ವಲ್ಪ ಜೇನು, ನಿಂಬೆರಸ ಹಾಕಿ ಮಿಕ್ಸ್ ಮಾಡಿದರೆ ಕಷಾಯ ರೆಡಿ.
ಕಷಾಯ ಯಾವಾಗ ಕುಡಿದರೆ ಒಳ್ಳೆಯದು?
ವಾತ: ವಾತ ಶರೀರ ಇರುವವರೆಗೆ ಕಷಾಯ ಸಂಜೆ ಕುಡಿಯುವುದು
ಒಳ್ಳೆಯದು. ಕಷಾಯದಲ್ಲಿ ಸ್ವಲ್ಪ ತುಪ್ಪ ಬೇಕಾದರೆ ಹಾಕಬಹುದು.
ಪಿತ್ತ: ಪಿತ್ತ ಪ್ರಕೃಯೆವರೆಗೆ ಕಷಾಯವನ್ನು ಬೆಳಗ್ಗೆ ಕೊಡುವುದು ಒಳ್ಳೆಯದು. ಕಷಾಯವನ್ನು ಹದ ಬಿಸಿ ಇರುವಾಗ ಕುಡಿಯಿರಿ.
ಕಫ: ಕಫ ಶರೀರದವರು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಕಷಾಯ ಸ್ವಲ್ಪ ಬಿಸಿ ಬಿಸಿ ಇರುವಾಗ ಕುಡಿಯಬಹುದು.
ನಿಮ್ಮ ಶರೀರ ವಾತ, ಪಿತ್ತ, ಕಫ ಇದರಲ್ಲಿ ಯಾವ ಬಗೆಯದು ಎಂದು
ತಿಳಿಯದಿದ್ದರೆ
ನೀವು ಇದರ ಬಗ್ಗೆ ಆಯುರ್ವೇದ ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ, ನಂತರ ಕಷಾಯಕ್ಕೆ
ಸ್ವಲ್ಪ ಅಮೃತ ಬಳ್ಳಿ ಸೇವಿಸಿದರೆ ಒಳ್ಳೆಯದು.



Click it and Unblock the Notifications
